Friday, April 4, 2025

Latest Posts

Political News: ಗೃಹಲಕ್ಷ್ಮೀ ಹಣ ಬಿಡುಗಡೆಗೆ ಒತ್ತಾಯಿಸಿ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

- Advertisement -

Political News: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಿಂದ ರಾಜ್ಯದ ಹೆಣ್ಣು ಮಕ್ಕಳಿಗೆ ಸರಿಯಾಗಿ ಹಣ ಬರುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಜೆಡಿಎಸ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ನಿಖಿಲ್ ಕುಮಾರ್ ಸೇರಿ ಹಲವು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ನಿಖಿಲ್ ಕುಮಾರ್, ಮನಸೋ ಇಚ್ಛೆ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವುದಲ್ಲ. ಗೃಹಲಕ್ಷ್ಮಿ ಗ್ಯಾರಂಟಿ ಹಣ ಕೊಡುವ ದಿನಾಂಕ ಹೇಳಿ ಸಿದ್ರಾಮಣ್ಣ!! ನಾಡಿನ ಮಹಿಳೆಯರಿಗೆ ನಿಗದಿತ ದಿನಾಂಕದಂದು ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿ.. ಈ ಒತ್ತಾಯದೊಂದಿಗೆ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಗ್ಯಾರಂಟಿಗಳ ಅನುಷ್ಠಾನದಲ್ಲಿ ಆಗಿರುವ ವೈಫಲ್ಯಗಳ ಬಗ್ಗೆ ಜನತೆಗೆ ತಿಳಿಸುವ ಪ್ರಯತ್ನ ಮಾಡಲಾಯಿತು.

ಕಾಂಗ್ರೆಸ್ ಸರಕಾರ ಜನತೆಗೆ ಪಂಚ ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿದೆ ಎನ್ನುವುದು ನಿಜ. ಆದರೆ, ಅದೇ ಗ್ಯಾರಂಟಿಗಳನ್ನು ನಿಗದಿತ, ನಿಯಮಿತವಾಗಿ ಜನರಿಗೆ ಮುಟ್ಟಿಸಲು ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿಗಳು ಎಂದರೆ ಈ ಸರಕಾರಕ್ಕೆ ಚುನಾವಣೆಗಳನ್ನು ಗೆಲ್ಲುವ ವಾಮಮರ್ಗಗಳು ಎನ್ನುವ ಅಪವಾದ ಇದೆ.

ಸಿಎಂ ಸಿದ್ದರಾಮಯ್ಯನವರೇ.. ಡಿಸಿಎಂ ಡಿ.ಕೆ.ಶಿವಕುಮಾರ್ರವರೇ.. ನಿಮಗೆ ಇಷ್ಟ ಬಂದಾಗ ಗ್ಯಾರಂಟಿ ಹಣ ಕೊಡುವುದಲ್ಲ. ಕ್ಯಾಲೆಂಡರ್ ನಲ್ಲಿ ದಿನಾಂಕ ಗುರುತಿಸಿ ಘೋಷಣೆ ಮಾಡಿ. ನಿಮ್ಮ ಬಜೆಟ್ ನಲ್ಲಿ ‘ಗ್ಯಾರಂಟಿ ಕ್ಯಾಲೆಂಡರ್’ ಬಿಡುಗಡೆ ಮಾಡಿ. ಪ್ರತಿ ತಿಂಗಳು ಹಣ DBT ಮಾಡುವ ದಿನ ಹೇಳಿ. ಸತ್ಯಮೇವ ಜಯತೇ ಎನ್ನುತ್ತೀರಿ. ಸತ್ಯ ಹೇಳಿ ಎಂದು ನಿಖಿಲ್ ಟಾಂಗ್ ಕೊಟ್ಟಿದ್ದಾರೆ.

ಬೃಹತ್ ಪ್ರತಿಭಟನೆಯಲ್ಲಿ ಶಾಸಕರು, ಮಾಜಿ ಶಾಸಕರು,ವಿಧಾನ ಪರಿಷತ್ ಸದಸ್ಯರು, ಮಹಿಳಾ ಮುಖಂಡರು, ಪದಾಧಿಕಾರಿಗಳು, ಬೆಂಗಳೂರು ಘಟಕದ ಪ್ರಮುಖ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.

- Advertisement -

Latest Posts

Don't Miss