Wednesday, November 19, 2025

Latest Posts

Political News: ಮಂತ್ರಿ ಮಗನ ಹೊಡೆಯಬೇಕು : ರಾಜೇಂದ್ರ ಬಿಚ್ಚಿಟ್ಟ ಸುಪಾರಿ ಸ್ಟೋರಿ ಎಂಥದ್ದು..?

- Advertisement -

Political News: ರಾಜ್ಯ ರಾಜಕಾರಣದಲ್ಲಿನ ಹನಿಟ್ರ್ಯಾಫ್‌ ಪ್ರಕರಣಕ್ಕೆ ವಿಧಾನಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ದಿನಕಳೆದಂತೆಲ್ಲ ತಮ್ಮದೇ ರೀತಿಯಲ್ಲಿ ಟ್ವಿಸ್ಟ್‌ ನೀಡುತ್ತಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಡಿಐಜಿ ಕಚೇರಿಗೆ ದೂರು ನೀಡಿದ ಬಳಿಕ ಇಂದು ತುಮಕೂರು ಎಸ್‌ಪಿ ಅವರಿಗೆ ಆಡಿಯೋ ಸಾಕ್ಷ್ಯ ಸಮೇತ ಕಂಪ್ಲೇಂಟ್‌ ನೀಡಿ ಪ್ರಕರಣ ಇನ್ನಷ್ಟು ಕುತೂಹಲ ಕೆರಳುವಂತೆ ಮಾಡಿದ್ದಾರೆ.

ಇನ್ನೂ ಎಸ್‌ಪಿ ಅವರಿಗೆ ದೂರು ನೀಡಿದ ಬಳಿಕ ತುಮಕೂರಿನಲ್ಲಿ ಮಾತನಾಡಿರುವ ಅವರು, ನಾನು ಯಾರ ತಂಟೆಗೂ ಹೋಗುವ ವ್ಯಕ್ತಿಯಲ್ಲ, ನನ್ನ ಪಾಡಿಗೆ ನಾನು ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೂ ಈ ಹನಿಟ್ರ್ಯಾಪ್‌ ಜೊತೆಯೇ ನನ್ನ ಕೊಲೆಗೆ ಸುಪಾರಿ ನೀಡಲಾಗಿದೆ. ಒಟ್ಟು 70 ಲಕ್ಷ ರೂಪಾಯಿಗಳ ಡೀಲ್‌ ಇದಾಗಿದ್ದು, ಇದರಲ್ಲಿ 20 ಮಂದಿ ಭಾಗಿಯಾಗಿದ್ದಾರೆ. ಅಲ್ಲದೆ ಈ ಕುರಿತು ನಾನು ಆಡಿಯೋ ಒಂದನ್ನು ಕೇಳಿಸಿ ಕೊಂಡಿದ್ದೇನೆ. 18 ನಿಮಿಷ ಇರುವ ಆಡಿಯೋ ಕ್ಲಿಪ್‌ನಲ್ಲಿ ಒಬ್ಬ ಮಹಿಳೆಯ ಜೊತೆಗೆ ಮಂತ್ರಿ ಮಗನನ್ನುಹೊಡೆಯಬೇಕು ಎಂದು ನಡೆಸಿರುವ ಸಂಭಾಷಣೆ ಇದಾಗಿದೆ ಎನ್ನುವ ಮೂಲಕ ರಾಜೇಂದ್ರ ಕಿಲ್ಲಿಂಗ್ ಬಾಂಬ್‌ ಸಿಡಿಸಿದ್ದಾರೆ.

ಕಾರಿಗೆ ಚಿಪ್‌ ಅಳವಡಿಸಿದ್ದರು..

ಅಂದಹಾಗೆ ಕಳೆದ ನವೆಂಬರ್‌ 16‌ ರಂದು ನನ್ನ ಮಗಳ ಜನ್ಮದಿನದ ಹಿನ್ನೆಲೆಯಲ್ಲಿ ಶಾಮಿಯಾನ ಹಾಕಲು ಬಂದಿದ್ದ ಸೋಮ ಹಾಗೂ ಭರತ ಎಂಬುವವರು ನನ್ನ ಕಾರಿಗೆ ಜಿಪಿಎಸ್‌ ಚಿಪ್‌ ಅಳವಡಿಸಿದ್ದರು. ನನ್ನ ಸಂಪೂರ್ಣ ಚಲನವಲನಗಳನ್ನು ಗಮನಿಸಲು ಅವರು ಹಿಗೆ ಮಾಡಿದ್ದರು. ಅಲ್ಲದೆ ಕೊಲೆಗಾಗಿ ಅಡ್ವಾನ್ಸ್‌ 5 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂಬ ಗಂಭೀರ ಆರೋಪವನ್ನು ರಾಜೇಂದ್ರ ಮಾಡಿದ್ದಾರೆ. ಈ ಕುರಿತು ಸೂಕ್ತ ತನಿಖೆಯನ್ನು ನಡೆಸುವಂತೆ ಎಸ್‌ಪಿ ಅವರಿಗೆ ಕೋರಿದ್ದೇನೆ ಎಂದು ಅವರು
ತಿಳಿಸಿದ್ದಾರೆ.

ಹೋಂ ಮಿನಿಸ್ಟರ್‌ ನೋಡ್ತಾರೆ..

ಇನ್ನೂ ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.‌ ಶಿವಕುಮಾರ್, ಇದರ ಬಗ್ಗೆ ನಾನು ಏನು ಹೇಳುವುದಿಲ್ಲ, ಎಲ್ಲವನ್ನು ಗೃಹ ಸಚಿವರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಮೊದಲಿನಿಂದಲೂ ಈ ವಿಚಾರದಲ್ಲಿ ಒಂದೇ ವಾಕ್ಯದ ಉತ್ತರವನ್ನು ಅವರು ನೀಡುತ್ತಿರುವುದು ಗಮನಾರ್ಹವಾಗಿದೆ.

ಮಹಾನಾಯಕ ಯಾರೆಂದು ಗೊತ್ತಿಲ್ಲ ರಾಜೇಂದ್ರ..

ಅಂದಹಾಗೆ ರಾಜಣ್ಣ ಅವರ ಮೇಲಿನ ಹನಿಟ್ರ್ಯಾಪ್‌ ಕೇಸ್‌ ಈಗಾಗಲೇ ಸಿಐಡಿಗೆ ಹೋಗಿದ್ದು, ಅದರ ತನಿಖೆ ನಡೆಯುತ್ತಿದೆ. ಅಲ್ಲದೆ ಮನೆಯ ಹತ್ತಿರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದಕ್ಕೆ ಪೊಲೀಸರು ತೆರಳಿದ್ದಾರೆ. ಇಷ್ಟೇ ಅಲ್ಲದೆ ಜಯಮಹಲ್‌ನಲ್ಲಿ ಇರುವ ಮನೆಯಲ್ಲಿ ಕೆಲಸದವರ ಹೇಳಿಕೆಗಳನ್ನು ಪೊಲೀಸರು ಪಡೆದಿದ್ದಾರೆ. ಆದರೆ ಈ ಎಲ್ಲ ಪ್ರಕರಣದ ಹಿಂದಿರುವ ಮಹಾನಾಯಕ ಯಾರೆಂಬುದು ಗೊತ್ತಿಲ್ಲ. ಆದರೆ ನಾನು ಯಾರ ಹೆಸರನ್ನೂ ಸಹ ಹೇಳಿಲ್ಲ ಎಂದು ರಾಜೇಂದ್ರ ಅವರು ಡಿಐಜಿಗೆ ದೂರು ನೀಡಿದ್ದ ಬಳಿಕ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಈ ಪ್ರಕರಣದ ತನಿಖೆಯನ್ನು ಸಿಐಡಿಯು ಚುರುಕುಗೊಳಿಸಿದ್ದು ಸಚಿವ ರಾಜಣ್ಣ ಹೇಳಿಕೆಯನ್ನು ಪಡೆಯಲು ಮುಂದಾಗಿದೆ.

- Advertisement -

Latest Posts

Don't Miss