Political News: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಪರ ಧ್ವನಿ ಎತ್ತಿದ ಸಂಸದ ತೇಜಸ್ವಿ ಸೂರ್ಯ

Political news: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಜೀವನ ನಿರ್ವಹಣೆಗಾಗಿ ಬುಟ್ಟಿ ತಯಾರಿಸಿ, ಬದುಕುತ್ತಿದ್ದಾರೆ. ಪದ್ಮಶ್ರೀ ಪುರಸ್ಕೃತೆಯಾಗಿ ಹೀಗೆ ಬಾಳುತ್ತಿರುವ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ಖರ್ಚು ವೆಚ್ಚವನ್ನು ರಾಜ್ಯಸರ್ಕಾರ ನೋಡಿಕ“ಳ್ಳಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಕರ್ನಾಟಕದ ಸಾಂಸ್ಕೃತಿಕ ಪ್ರತಿನಿಧಿಯಾದ ‘ಪದ್ಮಶ್ರೀ’ ಪುರಸ್ಕೃತೆ ಮಂಜಮ್ಮ ಜೋಗತಿಯವರಿಗೆ ಮೂರು ತಿಂಗಳುಗಳಿಂದ ಮಾಸಾಶನ ನೀಡದೇ ಇರುವುದು ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ದುರಾಡಳಿತಕ್ಕೆ ಹಿಡಿದ ಕೈಗಡಿಯಾಗಿದೆ  ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಹಿಂದೆ ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪನವರ ನೇತೃತ್ವದ ನಮ್ಮ ಬಿಜೆಪಿ ಸರ್ಕಾರ ಮಂಜಮ್ಮ ಜೋಗತಿಯವರನ್ನು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಗೌರವಿಸಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ ಅವರಿಗೆ ಸಲ್ಲಬೇಕಾದ ಮಾಸಾಶನವನ್ನು ನೀಡದೇ, ತಾಂತ್ರಿಕ ನೆಪವನ್ನು ಒಡ್ಡುತ್ತ ಅವರನ್ನು ಅವಮಾನಿಸುತ್ತಿದೆ.

ನೆಪ ಸಾಕು ಮಾಡಿ, ರಾಜ್ಯದ ಸಾಂಸ್ಕೃತಿಕ ಪ್ರತಿನಿಧಿಗಳನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

About The Author