- Advertisement -
Political News: ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹೊಸ ಗವರ್ನರ್ ನೇಮಕವಾಗಿದೆ. ಡಿಸೆಂಬರ್ 10ರಂದು ಹಾಲಿ ಗವರ್ನರ್ ಆಗಿರುವ ಶಕ್ತಿಕಾಂತ್ ದಾಸ್ ಕೊನೆಯ ದಿನವಾಗಿದ್ದು, ಅದಾದ ಬಳಿಕ ಸಂಜಯ್ ಮಲ್ಹೋತ್ರಾ ಹೊಸ ಗವರ್ನರ್ ಆಗಿ ನೇಮಕಗೊಳ್ಳಲಿದ್ದಾರೆ. ಬಳಿಕ 3 ವರ್ಷಗಳ ಕಾಲ ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಲಿದ್ದಾರೆ.
ಸದ್ಯ ಹಣಕಾಸು ಸಚಿವಾಲಯದಲ್ಲಿ ರೆವಿನ್ಯೂ ಸೆಕ್ರೆಟರಿಯಾಗಿ ಸಂಜಯ್ ಮಲ್ಹೋತ್ರಾ ಕಾರ್ಯನಿರ್ವಹಿಸಲಿದ್ದಾರೆ. ಇವರು ಐಐಟಿ ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮಾಡಿದ್ದು, ರಾಜಸ್ಥಾನದ ಕೇಡರ್‌ನ 1990ನೇ ಬ್ರ್ಯಾಂಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅಲ್ಲದೇ ಜಿಎಸ್‌ಟಿ ಮಂಡಳಿಯಲ್ಲೂ ಸಂಜಯ್ ಮಲ್ಹೋತ್ರಾ ಕಾರ್ಯ ನಿರ್ವಹಿಸಿದ್ದಾರೆ.
- Advertisement -