Thursday, May 8, 2025

Latest Posts

Political News: ಅಲ್ಪತನ ಪ್ರದರ್ಶನ ಬೇಕಿರಲಿಲ್ಲ: ಶಾಂತಿಮಂತ್ರ ಜಪಿಸಿದ್ದ ಕಾಂಗ್ರೆಸ್‌ಗೆ ಯತ್ನಾಳ್ ಕ್ಲಾಸ್

- Advertisement -

Political News: ಭಾರತೀಯ ಸೇನೆ ಪಾಕ್ ಗಡಿಯಲ್ಲಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ದಾಳಿ ನಡೆಸಿ, ನೂರಕ್ಕೂ ಹೆಚ್ಚು ಉಗ್ರರನ್ನು ಸದೆಬಡೆದಿದೆ. ಈ ಮೂಲಕ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿಕ“ಂಡಿದೆ. ಈ ದಾಳಿಯಿಂದಾಗಿ ಇಡೀ ಭಾರತ ಸಂಭ್ರಮ ಆಚರಿಸುತ್ತಿದೆ. ದಾಳಿ ನಡೆಸಿದ್ದಕ್ಕೆ, ನಮ್ಮ ಭಾರತೀಯ ಸೇನೆಯ ಬಗ್ಗೆ ಹೆಮ್ಮೆ ಪಡುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಶಾಂತಿ ಮಂತ್ರ ಜಪಿಸುತ್ತಿದೆ.

ದಾಳಿ ನಡೆದಿದ್ದು ತಿಳಿದ ಬಳಿಕ, ಎಕ್ಸ್ ಖಾತೆಯಲ್ಲಿ ಮಹಾತ್ಮಾ ಗಾಂಧೀಜಿ ಚಿತ್ರ ಹಾಕಿ, ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು ಬರೆದಿತ್ತು. ಆದರೆ ಯಾವಾಗ ಜನರು ಮತ್ತು ವಿರೋಧ ಪಕ್ಷದವರು ಈ ಬಗ್ಗೆ ಕಾಂಗ್ರೆಸ್‌ಗೆ ಕ್ಲಾಸ್ ತೆಗೆದುಕ“ಂಡರೋ, ಆಗ ಈ Post Delete ಮಾಡಲಾಗಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಉಚ್ಛಾ”ಿತ ನಾಯಕ ಬಸನಗೌಡ ಪಾ”ೀಲ್ ಯತ್ನಾಳ್,  ಪಹಲ್ಗಾಮ್ ಉಗ್ರ ದಾಳಿಗೆ ದೇಶ ಪ್ರತೀಕಾರ ತೆಗೆದುಕೊಳ್ಳಬೇಕೆಂದು ಹವಣಿಸುತ್ತಿರುವಾಗ ‘ಶತ್ರುಗಳ ಶುಭಚಿಂತಕರಂತೆ’, ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಪಾಕಿಸ್ತಾನದೊಂದಿಗಿರುವ ‘ನೆಂಟಸ್ತನ’ ‘ಅವಿನಾಭಾವ’ ಸಂಬಂಧವನ್ನು ಜಗಜ್ಜಾಹೀರು ಮಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಕಿಂಚಿತ್ತು ನೈತಿಕತೆ, ದೇಶಾಭಿಮಾನವಿದ್ದರೆ ಸಂಧಿಗ್ದದ ಪರಿಸ್ಥಿತಿಯಲ್ಲಿ ಈ ರೀತಿಯಾದ ಅನುಚಿತ ವರ್ತನೆ ಪ್ರದರ್ಶಿಸುತ್ತಿರಲಿಲ್ಲ. ಸಶಸ್ತ್ರ ಪಡೆಗಳನ್ನು ಜಾತ್ಯತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಬೆಂಬಲಿಸಬೇಕಾಗಿದ್ದ ಸಮಯದಲ್ಲಿ ಈ ರೀತಿಯಾದ ಅಲ್ಪತನ ಪ್ರದರ್ಶನ ಮಾಡುವುದು ಬೇಕಾಗಿರಲಿಲ್ಲ ಎಂದಿದ್ದಾರೆ.

- Advertisement -

Latest Posts

Don't Miss