Horoscope: ಮಾತು. ನಮ್ಮ ಜೀವನದ 1 ಭಾಗ. ಮಾತಿನಿಂದಲೇ ನಾವು ನಮ್ಮ ಭಾವನೆ ವ್ಯಕ್ತಪಡಿಸುತ್ತೇವೆ. ವ್ಯವಹಾರಗಳು ಸಾಗುವುದು ಕೂಡ ಮಾತಿನಿಂದಲೇ. ಹೀಗಾಗಿ ಮಾತು ಅನ್ನೋದು ಮನುಷ್ಯನ ಆಸ್ತಿ ಇದ್ದ ಹಾಗೆ. ಆದರೆ ಅದನ್ನು ಸದುಪಯೋಗ ಮಾಡಿಕ“ಳ್ಳಲು ಆ ಮನುಷ್ಯನಿಗೆ ಬರಬೇಕು. ಆದರೆ ಅದೇ ಮಾತು ಹೆಚ್ಚಾದರೆ, ಮಾನಸಿಕ ನೆಮ್ಮದಿಯೇ ಹಾಳಾಗುತ್ತದೆ. ಇಂದು ನಾವು ಯಾವ ರಾಶಿಯವರನ್ನು ನೀವು ಮಾತಿನಲ್ಲಿ ಗೆಲ್ಲಲು ಸಾಧ್ಯವಿಲ್ಲ ಅಂತಾ ತಿಳಿಯೋಣ ಬನ್ನಿ..
ವೃಷಭ: ವೃಷಭ ರಾಶಿಯವರು ಅತೀ ಉತ್ತಮವಾಗಿ ಮಾತನಾಡುವವರು. ಹಾಗಾಗಿಯೇ ಈ ರಾಶಿಯವರು ಶಿಕ್ಷಕ ವೃತ್ತಿ ಅವಲಂಬಿಸಿರುತ್ತಾರೆ. ಅದೇ ರೀತಿ ಇವರು ವಾದ ಮಾಡುವುದರಲ್ಲಿಯೂ ನಿಸ್ಸೀಮರು. ಇವರ ವಾದದಲ್ಲಿ ಅರ್ಥವಿರುತ್ತದೆ. ಯಾವುದೇ ವಿಷಯವನ್ನು ಆ ವಾದದಲ್ಲಿ ಅವರು ಸರಿಯಾಗಿ ಅರ್ಥ ಮಾಡಿಸಬಲ್ಲವರಾಗಿರುತ್ತಾರೆ.
ಸಿಂಹ: ನಾಯಕತ್ವದ ಗುಣವುಳ್ಳ ಸಿಂಹ ರಾಶಿಯವರನ್ನು ಕೂಡ ಮಾತಿನಲ್ಲಿ ಯಾರೂ ಕೂಡ ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ ಸಿಂಹ ರಾಶಿಯವರಿಗೆ ಮಾತಿನಲ್ಲೇ ಎಲ್ಲರನ್ನೂ ಗೆಲ್ಲುವ ಶಕ್ತಿ ಇರುತ್ತದೆ. ಅಲ್ಲದೇ ಹಾಸ್ಯ ಪ್ರವೃತ್ತಿಯವರೂ ಆಗಿರುವ ಸಿಂಹ ರಾಶಿಯವರು, ಮಾತಿನ ಮೂಲಕವೇ ಪ್ರಸಿದ್ಧರಾಗುತ್ತಾರೆ.
ತುಲಾ: ತುಲಾ ರಾಶಿಯವರು ಮಾತಿನ ಮಲ್ಲರು. ಇವರು ಯಾವ ರೀತಿಯಾಗಿ ಮಾತಿನಿಂದಲೇ ಜನರನ್ನು ಆಕರ್ಷಿಸುತ್ತಾರೋ, ಅದೇ ರೀತಿ ಕೋಪ ಬಂದಾಗ ವಾದಿಸುವುದರಲ್ಲಿಯೂ ಮುಂದು.
ಧನು: ಧನು ರಾಶಿಯವರು ಮಾತಿನಲ್ಲಿ ಚುರುಕಾಗಿರುತ್ತಾರೆ. ಯಾರು ಪ್ರೀತಿಯಿಂದ ಮಾತನಾಡುತ್ತಾರೋ, ಅವರ ಜತೆ ಪ್ರೀತಿಯಿಂದ ಮಾತನಾಡುತ್ತಾರೆ. ಜಗಳಕ್ಕೆ ಬಂದರೆ ಎದುರಿನವರ ಸೋಲು ನಿಶ್ಚಿತ. ಎಲ್ಲಕ್ಕಿಂತ ಮುಖ್ಯವಾಗಿ ಧನು ರಾಶಿಯವರು ಹಲವು ವಿಷಯಗಳ ಬಗ್ಗೆ ಹೆಚ್ಚು ತಿಳಿದಿರುತ್ತಾರೆ.




