Political News: ನಮ್ಮ ಹಳೆಯ ಬಾಸ್ ಕುಮಾರಸ್ವಾಮಿ ಭಸ್ಮಾಸುರ ಇದ್ದ ಹಾಗೆ. ಅವರು ಎಲ್ಲಿ ಹೋಗುತ್ತಾರೋ, ಅಲ್ಲಿನವರ ತಲೆ ಮೇಲೆ ಕೈ ಇಟ್ಟು ಬಿಡುತ್ತಾರೆ ಎಂದು ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಬಾಲಕೃಷ್ಣ, ಮುಂದೆ ಕೂಡ ಎನ್‌ಡಿಎ ಸರ್ಕಾರವೇ ಬರಲಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ನಾವು ಕೂಡ ನಮ್ಮ ಸರ್ಕಾರವೇ ಬರುತ್ತೇವೆ ಎಂದು ಹೇಳುತ್ತೇವೆ. ಅಂತಿಮವಾಗಿ ತೀರ್ಪು ನೀಡುವವರು ಜನರು ಎಂದಿದ್ದಾರೆ.
ಅಲ್ಲದೇ, ಕುಮಾರಸ್ವಾಮಿ ಅವರಿಗೆ ಕೇಂದ್ರದಿಂದ ನಮಗೆ ಸಾಮಾಜಿಕ ನ್ಯಾಯ ಕೊಡಿಸಲು ಹೇಳಿ. ಕೈಗಾರಿಕೆ ಮಾಡಿದ್ರೆ ಮಾಗಡಿಯಲ್ಲಿ 150 ಎಕರೆ ಜಾಗ ನೀಡುತ್ತೇವೆ. ಕೈಗಾರಿಕೆ ಸ್ಥಾಪಿಸಿ ಉದ್ಯೋಗ ನೀಡುತ್ತಾರಾ ಕೇಳಿ. ಬರೀ ಕಥೆ ಹೇಳಿಕ“ಂಡು ಓಡಾಡಿದ್ರೆ ಏನೂ ಆಗುವುದಿಲ್ಲ ಎಂದು ಬಾಲಕೃಷ್ಣ ಕಿಡಿಕಾರಿದ್ದಾರೆ.
ಅಲ್ಲದೇ ಕುಮಾರಸ್ವಾಮಿಯವರು ರಾಜ್ಯದಲ್ಲಿ ಎಲ್ಲಿಯೂ ಕೈಗಾರಿಕೆ ಮಾಡಲಿಲ್ಲ. ಬರೀ ಚಾಕೋಲೇಟ್ ಕ“ಡುತ್ತ ತಿರುಗಾಡುತ್ತಿದ್ದಾರೆ ಎಂದು ಸಚಿವ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.




