Saturday, July 5, 2025

Latest Posts

Political News: ಗೆದ್ದರೂ ಗೊಂದಲದಲ್ಲಿ ರಾಹುಲ್ ಗಾಂಧಿ..!

- Advertisement -

Political News: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 2 ಸ್ಥಾನಗಳಲ್ಲೂ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಗೊಂದಲದಲ್ಲಿದ್ದಾರೆ. ರಾಯ್ ಬರೇಲಿ ಮತ್ತು ವಯನಾಡು ಈ 2ಕ್ಷೇತ್ರಗಳಲ್ಲಿ ಯಾವ ಸ್ಥಾನ ಉಳಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದೇನೆ ಎಂದು ಸ್ವತಃ ರಾಹುಲ್ ಹೇಳಿದ್ದಾರೆ.

ಚುನಾವಣಾ ಗೆಲುವಿನ ಬಳಿಕ ಮೊದಲ ಬಾರಿಗೆ ಬುಧವಾರ ವಯನಾಡಿಗೆ ಆಗಮಿಸಿದ ರಾಹುಲ್, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ – ಯಾವುದೇ ನಿರ್ಧಾರ ತೆಗೆದುಕೊಂಡರೂ ಎರಡೂ ಕ್ಷೇತ್ರದ ಜನರು ಸಂತೋಷದಿಂದ ಸ್ವೀಕರಿಸುತ್ತಾರೆ ಆದರೂ ಯಾವ ಕ್ಷೇತ್ರದ ಸಂಸದನಾಗಬೇಕು ಎನ್ನುವ ಸಂದಿಗ್ದತೆಯಲ್ಲಿ ಸಿಲುಕಿದ್ದೇನೆ ಎಂದರು. ಲೋಕಸಭೆಗೆ ಎರಡನೇ ಬಾರಿಗೆ ಆಯ್ಕೆ ಮಾಡಿದ ವಯನಾಡಿನ ಮತದಾರರಿಗೆ ಧನ್ಯವಾದಗಳನ್ನು ಹೇಳುವುದರ ಜೊತೆಗೆ ನಿಮ್ಮನ್ನು ಶೀಘ್ರದಲ್ಲಿಯೇ ನೋಡಲು ಎದುರು ನೋಡುತ್ತಿದ್ದೇನೆ ಎನ್ನುವ ಮೂಲಕ ಮತ್ತೊಮ್ಮೆ ವಯನಾಡಿನ ಸಂಸದರಾಗುವ ಬಗ್ಗೆ ಸುಳಿವು ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಮಾತನಾಡಿದ ರಾಹುಲ್ – ಪ್ರಧಾನಿಯವರಿಗೆ ಬಂದಂತೆ ನನಗೆ ಯಾವುದೇ ದೇವರಿಂದ ಮಾರ್ಗದರ್ಶನ ಬಂದಿಲ್ಲ. ಪ್ರಧಾನಿ ಮೋದಿಯವರಿಗೆ ದೇಶದ ಪ್ರಮುಖ ವಿಮಾನ ನಿಲ್ಧಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಅದಾನಿ ಕೈಗೊಪ್ಪಿಸುವಂತೆ ದೇವರು ಹೇಳಿದ್ಧಾರೆ. ಆದರೆ ನಾನು ಸಾಮಾನ್ಯ ಮನುಷ್ಯ, ದೇಶದ ಬಡ ಜನರೇ ನನ್ನ ದೇವರು. ಅವರೊಂದಿಗೆ ಮಾತನಾಡಿ ಅವರು ಏನು ಹೇಳುತ್ತಾರೋ ಅದನ್ನೇ ನಾನು ಪಾಲಿಸುತ್ತೇನೆ ಎಂದು ವ್ಯಂಗ್ಯವಾಡಿದರು.

2024ರ ಲೋಕಸಭಾ ಚುನಾವಣೆಯು ಭಾರತದ ಸಂವಿಧಾನವನ್ನು ರಕ್ಷಿಸುವ ಹೋರಾಟವಾಗಿತ್ತು, ಆ ಹೋರಾಟದಲ್ಲಿ ದ್ವೇಷವನ್ನು ಪ್ರೀತಿ ಮತ್ತು ವಾತ್ಸಲ್ಯದಿಂದ ಹಾಗೂ ಅಹಂಕಾರವನ್ನು ವಿನಮೃತೆಯಿಂದ ಸೋಲಿಸಲಾಗಿದೆ. ಭಾರತದ ಜನರ ಈ ಸ್ಪಷ್ಟ ಸಂದೇಶದಿಂದ ಪ್ರಧಾನಿ ಮೋದಿ ಈಗಲಾದರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಲಿ ಎಂದು ರಾಹುಲ್ ಕಟುವಾಗಿ ನುಡಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗೆ ಎರಡೂ ಕ್ಷೇತ್ರದ ಮತದಾರರು ಕೈ ಹಿಡಿದಿದ್ದು ಭಾರೀ ಅಂತರದ ಗೆಲುವನ್ನ ದಾಖಲಿಸಿದ್ದಾರೆ. ಕೇರಳದ ವಯನಾಡಿನಲ್ಲಿ 6,47,445 ಮತಗಳನ್ನು ಪಡೆದು 3,64,422 ಮತಗಳ ಬಾರೀ ಅಂತರದಿಂದ ಗೆಲುವು ಪಡೆದ ರಾಹುಲ್, ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ 6,87,649 ಮತಗಳನ್ನು ಗಳಿಸಿ 3,90,030 ಮತಗಳ ಅಂತರದಿಂದ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ಧಾರೆ. ಆದರೆ ಸದ್ಯಕ್ಕೆ ರಾಹುಲ್ ಗಾಂಧಿಗೆ ಒಂದು ಕ್ಷೇತ್ರವನ್ನು ಬಿಟ್ಟುಕೊಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್

Sandalwood News: ಪವಿತ್ರಾ ಮೊಬೈಲ್‌ಗೆ ಮರ್ಮಾಂಗದ ಚಿತ್ರ ಕಳಿಸಿದ್ದ ರೇಣುಕಾಸ್ವಾಮಿ!

Darshan Arrest Case: ಆರೋಪಿಗಳು 13 ಅಲ್ಲ, 17 ಜನ!

- Advertisement -

Latest Posts

Don't Miss