Monday, July 22, 2024

Latest Posts

Sandalwood News: ಪವಿತ್ರಾ ಮೊಬೈಲ್‌ಗೆ ಮರ್ಮಾಂಗದ ಚಿತ್ರ ಕಳಿಸಿದ್ದ ರೇಣುಕಾಸ್ವಾಮಿ!

- Advertisement -

Sandalwood News: ಗೆಳತಿ ಪವಿತ್ರಾಗೌಡ ಕುರಿತು ಇನ್​ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯ ಹತ್ಯೆಯಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇನ್​ಸ್ಟಾಗ್ರಾಂನಲ್ಲಿ ತನ್ನ ಪ್ರಿಯತಮೆಗೆ ಮರ್ಮಾಂಗ ಫೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಬರುವಂತೆ ರೇಣುಕಾಸ್ವಾಮಿ ಆಹ್ವಾನಿಸಿದ್ದೇ ನಟ ದರ್ಶನ್ ಅವರು ಸಿಟ್ಟಿಗೇಳಲು ಕಾರಣ ಎಂದು ತಿಳಿದುಬಂದಿದೆ.

ಕಳೆದ ವರ್ಷ ಇನ್​ಸ್ಟಾಗ್ರಾಂನಲ್ಲಿ ದರ್ಶನ್ ಪತ್ನಿ ವಿಲಯಲಕ್ಷ್ಮೀ ಕುರಿತು ಪವಿತ್ರಾಗೌಡ ಪರೋಕ್ಷವಾಗಿ ಪೋಸ್ಟ್ ಹಾಕಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆ ವಿವಾದದ ನಂತರ ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಪದೇ ಪದೇ ಮೆಸೇಜ್ ಮಾಡಿ ಕಾಟ ಕೊಡಲು ಶುರುಮಾಡಿದ್ದರು. ತನ್ನನ್ನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದ್ದ ಸ್ವಾಮಿ, ಇನ್​ಸ್ಟಾಗ್ರಾಂನಲ್ಲಿ ಪವಿತ್ರಾರವರ ಫೋಟೋಗಳಿಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುತ್ತಿದ್ದ.

ಇಂಟ್ರೆಸ್ಟಿಂಗ್ ಸ್ಟೋರಿ ಅಂದರೆ, ಇನ್​ಸ್ಟಾಗ್ರಾಂನಲ್ಲಿ ತನೀಶಾ ರೆಡ್ಡಿ 2205 ಎಂಬ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದಿದ್ದ ರೇಣುಕಾಸ್ವಾಮಿ, ಪ್ರೋಫೈಲ್​ಗೆ ಯುವತಿಯೊಬ್ಬಳ ಚಿತ್ರವನ್ನು ಹಾಕಿದ್ದ. ಅಸಲಿಗೆ ಸ್ವಾಮಿ ಹಾಕಿದ್ದ ಮೆಸೇಜ್​ನನ್ನು ನಾವು ನಿಮಗೆ ನೇರವಾಗಿ ತೋರಿಸ್ತೀವಿ. ಅದ್ರಲ್ಲಿ ನಾವೇನು ಎಡಿಟ್ ಮಾಡಿಲ್ಲ. ಅದನ್ನೊಮ್ಮೆ ನೀವೇ ಓದಿಕೊಳ್ಳಿ.

How come darshan sir not travelling with you. he is seen only with his wife vijaylakshmi. ashte bidi paapa nivu keep, keep he in the society. issue madi joker aghidhu public nallie, same nimma fiend pavitra xyz. so pls u take her, this time karnataka janna avli jyothe nimminu serisi adbitharu publicenalli.

ಹೀಗೆ ಹಲವು ಬಾರಿ ಸ್ವಾಮಿ ಅವರು ಪವಿತ್ರಾಗೌಡ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕಿದ್ದ. ಇದಲ್ಲದೇ ಇನ್​​​ಸ್ಟಾಗ್ರಾಂನಲ್ಲಿ ಪವಿತ್ರಾಗೌಡರಿಗೆ ಖಾಸಗಿಯಾಗಿ ನಿರಂತರವಾಗಿ ಅಶ್ಲೀಲ ಮೆಸೇಜ್​ಗಳನ್ನು ಕಳುಹಿಸಿದ್ದ. ಇದು ಅತಿರೇಕಕ್ಕೆ ಹೋಗಿ ಮರ್ಮಾಂಗದ ಫೋಟೋವನ್ನು ಕಳುಹಿಸಿ ವಿಕೃತಿ ಮೆರೆದಿದ್ದ. ಈ ಮಸೇಜ್​ನ್ನು ಪವಿತ್ರಾ ಅವರು ದರ್ಶನ್​ಗೆ ತೋರಿಸಿದ್ದರು. ಇದರಿಂದ ಕೆರಳಿದ ದಾಸ ರೆಡ್ಡಿ ಹೆಸರಿನ ಖಾತೆ ಬಗ್ಗೆ ವಿಚಾರಿಸಿದಾಗ ಈತ ರೇಣುಕಾಸ್ವಾಮಿ ಎಂಬುದು ಗೊತ್ತಾಗಿದೆ. ಬಳಿಕ ಬೆದರಿಸಿ ಎಚ್ಚರಿಕೆ ಕೊಡಲು ಕರೆತಂದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಕಳುಹಿಸುತ್ತಿದ್ದ ಕಾಮೆಂಟ್​ಗಳಿಗೆ ಪವಿತ್ರಾಗೌಡ ಹಾಗೂ ಆಕೆಯ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದರು. ಟೈಮ್ ಬರುತ್ತೆ ಆಗ ಉತ್ತರಿಸುತ್ತೇನೆ ಎಂದು ಸ್ವಾಮಿಗೆ ಪವಿತ್ರಾ ಎಚ್ಚರಿಕೆಯನ್ನು ನೀಡಿದ್ದರು.
ಇನ್​ಸ್ಟಾಗ್ರಾಂನಲ್ಲಿ ಪವಿತ್ರಾಗೆ ಕಾಟ ಕೊಡುತ್ತಿರುವುದು ರೇಣುಕಾಸ್ವಾಮಿ ಎಂಬುದು ದರ್ಶನ್ ಅ್ಯಂಡ್ ಟೀಮ್​ಗೆ ಗೊತ್ತಾಗಿದೆ. ಆಗ ಸ್ವಾಮಿ ಕುರಿತು ದಾಸನ ಗ್ಯಾಂಗ್ ಸಂಪೂರ್ಣ ಮಾಹಿತಿ ಕಲೆಹಾಕಲು ಮುಂದಾಯಿತು.

ಚಿತ್ರದುರ್ಗದ ಔಷಧ ಅಂಗಡಿಯಲ್ಲಿ ರೇಣುಕಾಸ್ವಾಮಿ ಕೆಲಸ ಮಾಡುವ ವಿಚಾರ ಗೊತ್ತಾದಾಗ, ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರ ರೇಣುಕಾಸ್ವಾಮಿಯನ್ನು ಖೆಡ್ಡಾಕ್ಕೆ ಕೆಡವಿದ್ದಾನೆ. ಕೆಲ ದಿನಗಳ ಕಾಲ ಯುವತಿ ಸೋಗಿನಲ್ಲಿ ಸ್ವಾಮಿ ಜೊತೆ ಚಾಟ್ ಮಾಡಿದ್ದ ರಾಘವೇಂದ್ರ, ಅಂತಿಮವಾಗಿ ಶನಿವಾರ ಭೇಟಿ ಮಾಡುವಂತೆ ತಿಳಿಸಿದ್ದ. ಚಳ್ಳಕೆರೆ ಗೇಟ್​ ಬಳಿ ಬರುತ್ತಿದ್ದಂತೆ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು, ಹತ್ಯೆಮಾಡಲಾಗಿದೆ.

ಬೆಣ್ಣಿ ಹಳ್ಳ ಹಾಗೂ ತುಪ್ರಿ ಹಳ್ಳಕ್ಕೆ ಸಚಿವ ಸಂತೋಷ್ ಲಾಡ್ ಭೇಟಿ

ಮಿಲಿಟರಿ ವಿಮಾನ ಪತನ: ಮಲಾವಿಯ ಉಪಾಧ್ಯಕ್ಷ ಸೇರಿ 9 ಜನರ ದುರ್ಮರಣ

ಪತ್ನಿ ಈ ಕೆಲಸ ಮಾಡುವುದಿಲ್ಲವೆಂದು ಡಿವೋರ್ಸ್‌ ಕೇಳಿದ ಪತಿ: ಈ ರೀತಿ ತೀರ್ಪು ನೀಡಿದ ಕೋರ್ಟ್

- Advertisement -

Latest Posts

Don't Miss