Friday, July 11, 2025

Latest Posts

Political News: ನಿರ್ಮಲಾ ವಿರುದ್ಧ ಬಿಜೆಪಿ ನಾಯಕರಿಂದಲೇ ಬಂಡಾಯ

- Advertisement -

Political News: ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೋದಿ ಜೊತೆ 72 ಸಚಿವರೂ ಕೂಡ ಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಆದರೆ, ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರು ಮಂತ್ರಿಯಾಗಿರುವುದಕ್ಕೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ.

ಮೋದಿ 2.0 ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ, 3.0 ಸರ್ಕಾರದಲ್ಲೂ ಕ್ಯಾಬಿನೆಟ್ ದರ್ಜೆಯ ಸಚಿವೆಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ, ನಿರ್ಮಲಾ ಅವರನ್ನು ಮಂತ್ರಿ ಮಾಡಿರುವುದಕ್ಕೆ ಕಮಲ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಅಷ್ಟಕ್ಕೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಕೆಂಗಣ್ಣಿಗೆ ನಿರ್ಮಲಾ ಗುರಿಯಾಗಿದ್ದೇಕೆ ಎನ್ನುವ ಇಂಟ್ರೆಸ್ಟಿಂಗ್ ಸ್ಟೋರಿಯನ್ನು ತೋರಿಸ್ತೀವಿ ನೋಡಿ..

ವಿತ್ತ ಸಚಿವೆಯಾಗಿ ನಿರ್ಮಲಾ ತೆಗೆದುಕೊಂಡ ನಿರ್ಧಾರಗಳು ಮಧ್ಯಮ ವರ್ಗದವರಿಗೆ ಖುಷಿ ತಂದಿಲ್ಲ. ಮಿಡಲ್ ಕ್ಲಾಸ್ ಜನರ ಮೇಲೆ ಹೆಚ್ಚಿನ ತೆರಿಗೆ ಹೇರಿದ್ದು, ಬೆಲೆ ಏರಿಕೆ ಜನರ ಕೋಪಕ್ಕೆ ಕಾರಣವಾಗಿದೆ. ಅಲ್ಲದೇ, ನಿರ್ಮಲಾ ನೀಡುತ್ತಿದ್ದ ಹೇಳಿಕೆಗಳು ದೇಶದ ಮಧ್ಯಮ ವರ್ಗದ ಜನರನ್ನು ಕೆರಳಿಸಿವೆ. ಬೆಲೆ ಏರಿಕೆ ಕುರಿತು ಮಾಧ್ಯಮಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ನಿರ್ಮಲಾ ಸೀತಾರಾಮನ್ ಹಲವು ಬಾರಿ ಉದ್ದಟನದಿಂದ ಉತ್ತರ ನೀಡುತ್ತಿದ್ದರು.

ಕರ್ನಾಟಕದ ವಿಚಾರಕ್ಕೆ ಬಂದರೆ ಬರ ಪರಿಹಾರದ ಹಣ ಬಿಡುಗಡೆ ವಿಷಯದಲ್ಲಿ ಸುಳ್ಳು ಹೇಳಿ ಸಿಲುಕಿಕೊಂಡರು. ಅಲ್ಲದೇ, ಸುಪ್ರೀಂಕೋರ್ಟ್​​ನಿಂದ ಛೀಮಾರಿ ಹಾಕಿಸಿಕೊಂಡರು. ಇದು ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆಯಾಗಲು ಕಾರಣ ಎಂದು ಬಿಜೆಪಿ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಸರ್ಕಾರ ಟ್ಯಾಕ್ಸ್ ಕಟ್ಟುವ ಮಧ್ಯಮ ವರ್ಗವನ್ನು ಕಡೆಗಣಿಸಿದ್ದೇ ಬಿಜೆಪಿ ಈ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.

ಇನ್ನೂ ಈರುಳ್ಳಿ ಬೆಲೆ ಗಗಕ್ಕೇರಿದಾಗ ನಾನು ಈರುಳ್ಳಿ ತಿನ್ನುವುದಿಲ್ಲ ಎಂದು ನಿರ್ಮಲಾ ಅವರು ಬಾಲಿಶತನದ ಹೇಳಿಕೆಗಳನ್ನು ನೀಡಿದ್ದರು. ಬಡವರ ಹಾಗೂ ಮಧ್ಯಮ ವರ್ಗದವರ ಕಷ್ಟವನ್ನು ವಿತ್ತ ಸಚಿವೆ ಅರ್ಥ ಮಾಡಿಕೊಳ್ಳಲಿಲ್ಲ. ಬರ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೃಷ್ಣ ಬೈರೇಗೌಡ ಅವರು ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದಾಗ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದರು. ಇದನ್ನು ಸ್ವತಃ ಬಿಜೆಪಿ ಬೆಂಬಲಿಗರೇ ವಿರೋಧಿಸಿದ್ದಾರೆ.

ದಾಖಲೆ ವೀರನಿಗೆ ಬೆಟ್ಟದಷ್ಟು ಸವಾಲು, ಕೇಳಬೇಕಿದೆ ಜನಸಾಮಾನ್ಯರ ಅಹವಾಲು..!

ಉಪಚುನಾವಣೆ ದಿನಾಂಕ ಘೋಷಣೆ

ದೊಡ್ಮನೆಯ ಕುಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ- ಯುವ ದಾಂಪತ್ಯದಲ್ಲಿ ಬಿರುಗಾಳಿ!

- Advertisement -

Latest Posts

Don't Miss