ಯತ್ನಾಳ್‌ ಬಳಿಕ ಇನ್ನಿಬ್ಬರು ಎಂಎಲ್‌ಗಳಿಗೆ ಬಿಜೆಪಿಯಿಂದ ಗೇಟ್‌ ಪಾಸ್‌..

political news  : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌.ಟಿ.ಸೋಮಶೇಖರ್ ಉಚ್ಛಾಟನೆ ಮಾಡಲಾಗಿದೆ. 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಇಂದು ಆದೇಶ ಹೊರಡಿಸಲಾಗಿದೆ

ಉತ್ತರಕನ್ನಡ ಜಿಲ್ಲೆಯ ಶಾಸಕರಾಗಿದ್ದ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್‌ನಿಂದಲೇ, ಬಿಜೆಪಿಗೆ ಬಂದವರು. ಆದರೆ ಬಿಜೆಪಿಗೆ ಬಂದು ಗೆಲುವು ಸಾಧಿಸಿದ ಬಳಿಕ, ಮತ್ತೆ ಕಾಂಗ್ರೆಸ್ ಪರವಾಗಿ ಇದ್ದಾರೆ. ಇನ್ನು ಎಸ್‌.ಟಿ.ಸೋಮಶೇಖರ್ ಕೂಡ ಕಾಂಗ್ರೆಸ್‌ನಿಂದ ಬಿಜೆಪಿಗೆ ಜಂಪ್ ಮಾಡಿದ್ದರು. ಆದರೆ ಇದೀಗ ಮತ್ತೆ ಕಾಂಗ್ರೆಸ್ ಪರ ಹೇಳಿಕೆ ನೀಡುವುದು, ಬಿಜೆಪಿ ವಿರೋಧವಾಗಿ ನಡೆದುಕ“ಳ್ಳುತ್ತಿರುವ ಹಿನ್ನೆಲೆ, ಇಬ್ಬರನ್ನೂ ಪಕ್ಷದಿಂದ ತೆಗೆದು ಹಾಕಲು ಆದೇಶಿಸಲಾಗಿದೆ.

ಬಿಜೆಪಿ ಸರ್ಕಾಾರವಿದ್ದ ಅವಧಿಯಲ್ಲಿ ಶಿವರಾಮ್ ಹೆಬ್ಬಾರ್ ಕಾರ್ಮಿಕ ಸಚಿವರಾಗಿದ್ದರೆ, ಸೋಮಶೇಖರ್ ಸಹಕಾರ ಸಚಿವರಾಗಿದ್ದರು. 2023ರಲ್ಲಿ ರಾಜ್ಯದಲ್ಲಿ ಕಾಾಂಗ್ರೆಸ್ ಅಧಿಕಾರಕ್ಕೆ ಬಾರದಿದ್ದರೂ ಕೂಡ, ಬಿಜೆಪಿಯಿಂದಲೇ ಗೆದ್ದು ಇಬ್ಬರೂ ಶಾಸಕರಾಗಿದ್ದರು. ಆದರೆ ಇದೀಗ ಕಾಂಗ್ರೆಸ್‌ನಲ್ಲಿ ಹೆಚ್ಚು ಗುರುತಿಸಿಕೊಂಡ ಕಾರಣ, ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ.

ಕೆಲ ತಿಂಗಳ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಾರೆಂದು ಅವರನ್ನು ಸಹ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ವಿರುದ್ಧ ಯತ್ನಾಳ್ ಯಾವಾಗಲೂ ವಾಗ್ದಾಳಿ ನಡೆಸುತ್ತಿದ್ದರು. ಹೀಗಾಗಿ ಇದನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ, ಯತ್ನಾಳ್ ಅವರನ್ನು ಸಹ ಪಕ್ಷದಿಂದ ಉಚ್ಛಾಟಿಸಲಾಗಿತ್ತು.

 

About The Author