Political News: ಮೋದಿ ಪ್ರಯಾಣಿಸುವ ವಿಮಾನದ ಮೇಲೆ ಉಗ್ರರ ದಾಳಿ ಬೆದರಿಕೆ

Political News: ಪ್ರಧಾನಿ ಮೋದಿ ಫ್ರಾನ್ಸ್, ಅಮೆರಿಕಾ ಪ್ರವಾಸದಲ್ಲಿದ್ದು, ಮೋದಿ ಪ್ರಯಾಾಣಿಸುತ್ತಿದ್ದ ವಿಮಾನದ ಮೇಲೆ ಉಗ್ರರು ದಾಳಿ ಮಾಡಲಿದ್ದಾರೆಂದು ಪೊಲೀಸರಿಗೆ ಸುದ್ದಿ ಬಂದಿದೆ.

ಮೋದಿ ಅವರು ಈಗಾಗಲೇ ಫ್ರಾನ್ಸ್‌ನಲ್ಲಿದ್ದಾರೆ. ಆದರೆ ಅವರು ಪ್ರವಾಸ ಕೈಗೊಳ್ಳೋಕ್ಕೂ ಮುನ್ನವೇ, ಪ್ರಧಾನಿ ಅವರು ಪ್ರಯಾಣಿಸುವ ವಿಮಾನದ ಮೇಲೆ ದಾಳಿ ಮಾಡಲು ಕೆಲವರು ಪ್ರಯತ್ನ ಮಾಡಿದ್ದಾರೆ ಎಂದು ಮುಂಬೈ ಪೋಲೀಸ್ ಅಧಿಕಾರಿಗಳಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ತಿಳಿಸಿದ್ದನಂತೆ.

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಸದ್ಯ ಮೋದಿಯವರು ಫ್ರಾನ್ಸ್ ಪ್ರವಾಸದಲ್ಲಿದ್ದು, ಬಳಿಕ ಅಮೆರಿಕ ಪ್ರವಾಸ ಮುಗಿಸಿ, ಭಾರತಕ್ಕೆ ಹಿಂದಿರುಗಲಿದ್ದಾರೆ.

About The Author