Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಮೈಕ್ರೋ ಫೈನಾನ್ಸ್ ಗಲಾಟೆ ಬಗ್ಗೆ ಹೇಳಿಕೆ ನೀಡಿದ್ದಾರೆ.
ಮೈಕ್ರೋ ಫೈನಾನ್ಸ್ ಕರ್ನಾಟಕ ಅಷ್ಟೆ ಅಲ್ಲ ಇಡೀ ಇಂಡಿಯಾದಲ್ಲಿದೆ. ಪಕ್ಷಾತೀತವಾಗಿ ಎಲ್ಲರೂ ಮಾತಾಡಿದ್ದಾರೆ. ಕೆಲ ಫೈನಾನ್ಸ್ ಏಜೆನ್ಸಿ ಥ್ರೂ ಇ ತರಹ ಕೆಲಸ ಮಾಡುತ್ತಿದಾರೆ. ಇಡೀ ದೇಶದಲ್ಲಿ ಇದು ಬಂದ್ ಆಗಬೇಕು ಎಂದು ಸಂತೋಷ್ ಲಾಡ್ ಆಗ್ರಹಿಸಿದ್ದಾರೆ. ಅಲ್ಲದೇ, ಸಾಧಕ ಬಾಧಕ ಎಲ್ಲವನ್ನೂ ನೋಡಬೇಕು. ಒಂದೇ ಸರಿ ನಿಲ್ಲಸೋದು ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ಸರ್ಕಾರ ತೀರ್ಮಾನ ಮಾಡತ್ತೆ ಎಂದು ಲಾಡ್ ಹೇಳಿದ್ದಾರೆ.
ರಾಮುಲು ಬಗ್ಗೆ ನನಗೆ ಅತ್ಯಂತ ಗೌರವ ಇದೆ. ರಾಮುಲು ನಮ್ಮ ಜಿಲ್ಲೆಯವರು, ನನ್ನ ಗ್ರೇಟ್ ಫ್ರೆಂಡ್. ಪಕ್ಷಕ್ಕೆ ಬಂದ್ರೆ ನಾನು ವಯಕ್ತಿಕವಾಗಿ ಸ್ವಾಗತ ಮಾಡತೀನಿ. ಸಿಎಮ್ ಡಿಸಿಎಮ್ ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ. ಚುನಾವಣೆ ಮುಂಚೆ ಅಧ್ಯಕ್ಷರು ಸಂಪರ್ಕ ಮಾಡಿರೋ ವಿಚಾರ ನನಗೆ ಮಾಹಿತಿ ಇಲ್ಲ.
ಅಧ್ಯಕ್ಷರು ಸಂಪರ್ಕ ಮಾಡಿರಬಹುದು. ರಾಮಲು ಬಡವರ ಪರ ನಾಯಕ. ಅವರ ಸಮುದಾಯದ ದೊಡ್ಡ ನಾಯಕ . ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ರೂ ನಾನು ಅವರನ್ನು ಗೌರವಿಸ್ತೀನಿ. ಪಕ್ಷಕ್ಕೆ ಬಂದರೆ ಒಳ್ಳೆಯದು. ನನ್ನ ವಯಕ್ತಿಕ ಅಭಿಪ್ರಾಯದ ಪ್ರಕಾರ ರಾಮುಲು ಬಂದರೆ ಒಳ್ಳೆಯದು. ನಾನು ರಾಮುಲು ಅವರ ಜೊತೆ ಮಾತಾಡಿಲ್ಲ. ಬೆಳವಣಿಗೆ ಆದ ಬಳಿಕ ಸತ್ಯವಾಗಲೂ ಮಾತಾಡಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.




