Political News: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹದಗೆಟ್ಟಿದ್ದು, ದ್ರವಾಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಈ ವಿಷಯದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ಸಚಿವ ಸಂತೋಷ್ ಲಾಡ್, ಪ್ರಧಾನಿ ಮೋದಿಯನ್ನು ಮತ್ತು ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳಿಗೇ ಕೊಳ್ಳಿ ಇಟ್ಟ ಮಹಾನುಭಾವರಿಗೆ ಒಬ್ಬ ವಿಜ್ಞಾನಿಯ, ಸಾಮಾಜಿಕ ಹೋರಾಟಗಾರನ ಅಮರಣಾಂತ ಉಪವಾಸ ಸತ್ಯಾಗ್ರಹ ದೊಡ್ಡ ವಿಷಯವೇ ಅಲ್ಲ! ಶ್..! ಇದು ಮೋದಿಜಿ ಸರ್ಕಾರ, ಇಲ್ಲಿ ನ್ಯಾಯಕ್ಕಿಂತ, ವ್ಯಕ್ತಿ ಪ್ರತಿಷ್ಠೆಯೇ ಮುಖ್ಯ! ಎಷ್ಟು ವಿದ್ಯಾರ್ಥಿಗಳ ಭವಿಷ್ಯ ಹಾಳಾದರೆ ಅವರಿಗೇನು? ಯಾರೋ ವಿಜ್ಞಾನಿ ಉಪವಾಸ ಮಾಡಿ ಪ್ರತಿಭಟಿಸಿದರೆ ಯಾರಿಗೇನು?
ನಮ್ಮ ದೇಶ ಭಾರತ, ನಾವು ಭಾರತೀಯರು ಮತ್ತು ಇನ್ನೇನು ನಾವು ವಿಶ್ವಗುರುವಾಗಲಿದ್ದೇವೆ! ಎಂದು ಸಂತೋಷ್ ಲಾಡ್ ಕೇಂದ್ರ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳಿಗೇ ಕೊಳ್ಳಿ ಇಟ್ಟ ಮಹಾನುಭಾವರಿಗೆ ಒಬ್ಬ ವಿಜ್ಞಾನಿಯ, ಸಾಮಾಜಿಕ ಹೋರಾಟಗಾರನ ಅಮರಣಾಂತ ಉಪವಾಸ ಸತ್ಯಾಗ್ರಹ ದೊಡ್ಡ ವಿಷಯವೇ ಅಲ್ಲ!
ಶ್..! ಇದು ಮೋದಿಜಿ ಸರ್ಕಾರ, ಇಲ್ಲಿ ನ್ಯಾಯಕ್ಕಿಂತ, ವ್ಯಕ್ತಿ ಪ್ರತಿಷ್ಠೆಯೇ ಮುಖ್ಯ!
ಎಷ್ಟು ವಿದ್ಯಾರ್ಥಿಗಳ ಭವಿಷ್ಯ ಹಾಳಾದರೆ ಅವರಿಗೇನು?
ಯಾರೋ ವಿಜ್ಞಾನಿ ಉಪವಾಸ ಮಾಡಿ… pic.twitter.com/p1NRWzcmW6
— Santosh Lad Official (@SantoshSLadINC) July 17, 2026




