Hubli News: ಹುಬ್ಬಳ್ಳಿ: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬಾಗಲಕೋಟೆಯಿಂದ ಹುಬ್ಬಳ್ಳಿಗೆ ಆಗಮಿಸಿದ್ದು, ಹುಬ್ಬಳ್ಳಿಯಿಂದ ಕರ್ನಾಟಕ ಭವನದ ಉದ್ಘಾಟನೆಗಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು.
ಈ ವೇಳೆ ಏರ್ಪೋರ್ಟ್‌ನಲ್ಲಿ ಮಾಧ್ಯಮದ ಜೊತೆ ಮಾತನಾಡಿರುವ ಡಿಕೆಶಿ, ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾನೆಯಿದೆ. ಸಂಸತ್ತಿನ ಅಧಿವೇಶನದ ಮತ್ತು ಸಿಎಂ ಕಾಲಿನ ಸಮಸ್ಯೆಯಿಂದ ಉದ್ಘಾಟನೆ ತಡವಾಗಿದೆ. ನಾಲ್ಕು ಎಂಎಲ್ ಸಿ ಸ್ಥಾನ ಖಾಲಿಯಿದೆ ಹೀಗಾಗಿ ಹೈಕಮಾಂಡ್ ಬಳಿ ಆ ಬಗ್ಗೆ ಚರ್ಚೆ ಮಾಡಲು ತೆರಳುತ್ತಿದ್ದೆನೆ. ಬಹಳಷ್ಟು ದಿನ ಖಾಲಿಯಿಟ್ಟುಕೊಂಡು ಕೂರಲು ಆಗಲ್ಲ. ಯಾವುದೇ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಇಲ್ಲ. ಮಾಧ್ಯಮಗಳಲ್ಲಿ ಯಾರೋ ಸುಳ್ಳು ಮಾಹಿತಿ ನೀಡಿದ್ದಾರೆ. ಅದು ಸಿಎಂ ವಿವೇಚನೆಗೆ ಬಿಟ್ಟಿದ್ದು, ಅದರ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಡಿಕೆಶಿ ಹೇಳಿದ್ದಾರೆ.
ಇನ್ನು ಯತ್ನಾಳ್ ಕಾಂಗ್ರೆಸ್ ಸೇರುವ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, ಇದು ಸತ್ಯಕ್ಕೆ ದೂರು ಆಗಿದ್ದು. ಯತ್ನಾಳ ಕಾಂಗ್ರೆಸ್ ಗೆ ಬರೋದು ಎಲ್ಲಾ ಸುಳ್ಳು. ನಮಗ್ಯಾಕೆ ಅವರ ಪಾರ್ಟಿ ಸುದ್ದಿ. ಅವರುಂಟು ಅವರ ಪಾರ್ಟಿ ಉಂಟು ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿರುವ ಡಿಕೆಶಿ, ವಕ್ಪ್ ಬೋರ್ಡ್ ಮಸೂದೆ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ.