Sunday, April 20, 2025

Latest Posts

Sandalwood News: ರಶ್ಮಿಕಾ-ಶ್ರೀಲೀಲಾಗೆ ಏನಾಯ್ತು? ಬಯಸಿದ್ದು ಈಡೇರಲಿಲ್ಲ!

- Advertisement -

Sandalwood News: ಅವರಿಬ್ಬರೂ ಕನ್ನಡದ ನಟಿಯರು. ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾ ಮಾಡಿ ಸೈ ಅನಿಸಿಕೊಂಡ್ರು. ಆಮೇಲೆ ಇನ್ನೂ ದೊಡ್ಡದ್ದಾಗಿ ಬೆಳೆಯಬೇಕು ಅಂದುಕೊಂಡ್ರು ಸ್ಯಾಂಡಲ್ ವುಡ್ ಬಿಟ್ಟು ಹೊರಟು ಹೋದ್ರು. ಏನೋ ಆಗುತ್ತೆ ಅಂದುಕೊಂಡ್ರು. ಇನ್ನೇನೋ ಆಗೋಗಿದೆ. ಅವರು ಬಯಸಿದ್ದೇ ಒಂದು ಈಗ ಆಗಿದ್ದೇ ಇನ್ನೊಂದು. ಹೌದು, ಇದು ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ವಿಷಯ. ಕನ್ನಡದಲ್ಲಿ ತಕ್ಕಮಟ್ಟಿಗೆ ತಮ್ಮದ್ದೊಂದು ಠಸ್ಸೆ ಒತ್ತಿ ಅತ್ತ ಟಾಲಿವುಡ್, ಕಾಲಿವುಡ್ ಗೂ ಜಿಗಿದು ಬಾಲಿವುಡ್ ಗೆ ಎಂಟ್ರಿ ಕೊಟ್ಟವರು. ಹಾಗೆ ನೋಡಿದರೆ, ಕನ್ನಡದಲ್ಲಿ ಅವಕಾಶಗಳು ಹುಡುಕಿ ಬಂದರೂ, ಇವರಿಬ್ರು ಕನ್ನಡ ಸಿನಿಮಾಗಳಿಗೆ ಗುಡ್ ಬೈ ಹೇಳಿದ್ರು. ಅತ್ತ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿ ಅಲ್ಲಿಂದ ಬಾಲಿವುಡ್ ಅಂಗಳಕ್ಕೂ ಜಿಗಿದ್ರು. ಅಲ್ಲಿ ದೊಡ್ಡದ್ದಾಗಿ ಏನೋ ಆಗಿಬಿಡುತ್ತೆ ಅಂದುಕೊಂಡ್ರು ಆದರೆ… ಅವರ ಕನಸು ನುಚ್ಚುನೂರಾಗಿದೆ.

ಯೆಸ್, ಇವರಿಬ್ಬರ ನಸೀಬು ಅದೇಕೋ ಚೆನ್ನಾಗಿಲ್ಲ ಅನ್ಸುತ್ತೆ. ಸದ್ಯ ರಶ್ಮಿಕಾ ಮಂದಣ್ಣ ಅವರ ಗೆಲುವಿನ ಓಟಕ್ಕೆ ‘ಸಿಕಂದರ್’ ಬ್ರೇಕ್ ಹಾಕಿದ್ದಾನೆ. ಅತ್ತ ಶ್ರೀಲೀಲಾ ಅಭಿನಯದ ‘ರಾಬಿನ್‌ಹುಡ್’ ಚಿತ್ರದ ಸೋಲು ಕೂಡ ಹೀನಾಯವಾಗಿದೆ. ಸಿನಿಮಾ ಸೋಲು-ಗೆಲುವು ಕಾಮನ್. ಆದರೆ, ಇವರಿಬ್ಬರು ನಟಿಸಿರುವ ಸಿನಿಮಾಗಳು ಸೋತಿರೋದಷ್ಟೇ ಅಲ್ಲ, ಅವರ ರೋಲ್ ಗಳ ಬಗ್ಗೆ ಇದೀಗ ಟ್ರೋಲ್ ಶುರುವಾಗಿದೆ. ಒಂದಷ್ಟು ಮಂದಿ ಕಾಮೆಂಟ್ಸ್ ಮೂಲಕ ನಿಂದಿಸೋಕೆ ಶುರುಮಾಡಿದ್ದಾರೆ. ಕಥೆ, ಪಾತ್ರ ಆಯ್ಕೆ ಮಾಡಿಕೊಳ್ಳೋಕೆ ಬರೋದಿಲ್ವ ಅಂತ ಟೀಕಿಸುತ್ತಿದ್ದಾರೆ.

ಅಂದಹಾಗೆ, ನಿತಿನ್ ಅಭಿನಯದ ‘ರಾಬಿನ್‌ಹುಡ್’ ಚಿತ್ರ ರಿಲೀಸ್ ಆಗಿದೆ. ವೆಂಕಿ ಕುಡುಮುಲ ಈ ಚಿತ್ರದ ನಿರ್ದೇಶಕರು. ಆಸ್ಟ್ರೇಲಿಯಾ ಕ್ರಿಕೆಟರ್ ಡೇವಿಡ್ ವಾರ್ನರ್ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕಾಮಿಡಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇನ್ನು ಈ ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಂಡವಾಳ ಹಾಕಿತ್ತು.

ಅತ್ತ, ಎ.ಆರ್. ಮುರುಗದಾಸ್ ನಿರ್ದೇಶನದ ‘ಸಿಕಂದರ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೋಡಿಯಾಗಿ ರಶ್ಮಿಕಾ ಮಿಂಚಿದ್ದಾರೆ. ಇತ್ತೀಚೆಗೆ ಸಿನಿಮಾ ರಿಲೀಸ್ ಆಗಿದೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ, ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ತೆರೆಗೆ ಬಂದಿತ್ತು. ಆದರೆ ಪ್ರೇಕ್ಷಕರು ಸಿನಿಮಾ ನೋಡಲು ನಿರಾಸಕ್ತಿ ತೋರಿಸಿದ್ದಾರೆ. ನಿಜ ಹೇಳೋದಾದರೆ, ಪ್ರೇಕ್ಷಕರು ಬರದೇ ಸಿನಿಮಾ ಶೋಗಳನ್ನೇ ಕ್ಯಾನ್ಸಲ್ ಮಾಡುವಂತಹ ಪರಿಸ್ಥಿತಿ ಬಂದೊದಗಿದೆ.

ಹಾಗ ನೋಡಿದರೆ, ‘ರಾಬಿನ್ ಹುಡ್’ ಚಿತ್ರಕ್ಕೆ ಮೊದಲು ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗಿದ್ದರು. ಈ ಹಿಂದೆ ವೆಂಕಿ ಕುಡುಮುಲ ನಿರ್ದೇಶನದ ‘ಭೀಷ್ಮ’ ಚಿತ್ರದಲ್ಲಿ ನಿತಿನ್ ಹಾಗೂ ರಶ್ಮಿಕಾ ನಟಿಸಿ ಸೈ ಎನಿಸಿಕೊಂಡಿದ್ದರು. ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಶುರುವಾಗಿತ್ತು. ಆದರೆ ದಿಢೀರನೆ ರಶ್ಮಿಕಾ ಚಿತ್ರದಿಂದ ಹೊರ ಬಂದರು. ಅವರ ಜಾಗಕ್ಕೆ ಶ್ರೀಲೀಲಾ ಎಂಟ್ರಿಯಾಗಿದ್ದರು.

‘ಸಿಕಂದರ್’ ಸಿನಿಮಾಗೆ ಅವಕಾಶ ಸಿಗುತ್ತಿದ್ದಂತೆಯೇ ರಶ್ಮಿಕಾ ಡೇಟ್ಸ್ ಸಮಸ್ಯೆ ಕಾರಣ ಕೊಟ್ರು. ಇಲ್ಲ ಸಲ್ಲದ ನೆಪ ಹೇಳಿದ್ರು. ಹಾಗಾಗಿ ‘ರಾಬಿನ್‌ಹುಡ್’ ಚಿತ್ರದಿಂದ ರಶ್ಮಿಕಾ ಹೊರ ಬಂದ್ರು. ಅದೇನೆ ಇರಲಿ, ಇದೀಗ ‘ರಾಬಿನ್‌ಹುಡ್’ ಸಿನಿಮಾದ ರಿಸಲ್ಟ್ ನೋಡಿದ ಅವರ ಫ್ಯಾನ್ಸ್ ಆ ಸಿನಿಮಾದಿಂದ ರಶ್ಮಿಕಾ ಹೊರಬಂದಿದ್ದು ಒಳ್ಳೇದೇ ಆಯ್ತು ಅಂದುಕೊಳ್ಳುತ್ತಿದ್ದಾರೆ. ಆದರೆ, ಅತಿಯಾದ ನಂಬಿಕೆ, ಆಸೆ, ಕನಸು ಕಟ್ಟಿಕೊಂಡು ಬಾಲಿವುಡ್ ಅಂಗಳಕ್ಕೆ ಎಂಟ್ರಿಕೊಟ್ಟು ಸಿಕಂದರ್ ಸಿನಿಮಾದಲ್ಲಿ ಕಾಣಿಸಿಕೊಂಡ ರಶ್ಮಿಕಾಗೆ ಅಲ್ಲೂ ನಿರಾಸೆ ಮೂಡಿಸಿತು. ‘ಸಿಕಂದರ್’ ಸಿನಿಮಾ ಕೂಡ ಸೋಲು ಅನುಭವಿಸಿದೆ.

ಅದೇನೆ ಇರಲಿ, ರಶ್ಮಿಕಾ ಮಂದಣ್ಣ ತಾನು ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಮಾತಿತ್ತು. ಅವರು ನಟಿಸಿದ ‘ಅನಿಮಲ್’, ‘ಪುಷ್ಪ’-2, ‘ಛಾವ’ ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದವು. ಆದರೆ ಅದೇಕೋ ಏನೋ, ‘ಸಿಕಂದರ್’ ಮಾತ್ರ ಸೋಲಿನ ದವಡೆಗೆ ಸಿಲುಕಿತು. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಂತಹ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡರೂ ಯಾವುದೇ ಯೂಸ್ ಆಗಲಿಲ್ಲ ಅನ್ನುವಂತಾಗಿದೆ. ಸದ್ಯ ರಶ್ಮಿಕಾ ಕೈಯಲ್ಲಿ ‘ತಮ’ ಎಂಬ ಮತ್ತೊಂದು ಬಾಲಿವುಡ್ ಸಿನಿಮಾ ಇದೆ. ಟಾಲಿವುಡ್‌ ಅಂಗಳದಲ್ಲಿ ಶ್ರೀಲೀಲಾ ಕ್ರೇಜ್ ಮೆಲ್ಲನೆ ಕಡಿಮೆ ಆಗುತ್ತಿದೆ. ಒಂದು ತಮಿಳು ಚಿತ್ರದಲ್ಲಿ ಮಾತ್ರ ಶ್ರೀಲೀಲಾ ನಟಿಸುತ್ತಿದ್ದಾರ. ಬಾಲಿವುಡ್‌ನಲ್ಲಿ 2 ಅವಕಾಶಗಳು ಸಿಕ್ಕಿತ್ತು. ಆ ಪೈಕಿ ಒಂದು ಸಿನಿಮಾದಿಂದಲೂ ಕೂಕ್ ಕೊಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಅದೇನೆ ಇರಲಿ, ಈ ಇಬ್ಬರು ಕನ್ನಡದ ನಟಿಯರು, ಕನ್ನಡದಲ್ಲಿ ಬಂದ ಅವಕಾಶಗಳನ್ನು ಒಲ್ಲೆ ಅಂತ ಹೇಳಿ, ಅತ್ತ ಬಾಲಿವುಡ್ ಕಡೆ ಮುಖ ಮಾಡಿ, ಅಲ್ಲೇನೋ ಪವಾಡ ಮಾಡ್ತೀವಿ ಅಂದ್ರು. ಅವರ ಲೆಕ್ಕಾಚಾರ ಈಗ ಉಲ್ಟಾ ಹೊಡೆದಿದೆ. ಸದ್ಯ ಶ್ರೀಲೀಲಾ ಸರದಿ ಶುರುವಾಗುತ್ತಿದೆ. ಈ ಬೆಡಗಿ ಈಗಷ್ಟೇ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅದೃಷ್ಟ ಹೇಗಿದೆ ಅನ್ನೋದನ್ನು ಕಾದು ನೋಡಬೇಕಿದೆ.

- Advertisement -

Latest Posts

Don't Miss