Friday, October 17, 2025

Latest Posts

Political News: ಪ್ರಧಾನಿ ಮೋದಿ ತಿಂಗಳ ಸಂಬಳ ಎಷ್ಟು?

- Advertisement -

National News: ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ರಾಷ್ಟ್ರಭವನದ ಹೊರಗಡೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಆದರೆ, ಮೋದಿ ಅವರು ತಿಂಗಳ ಸ್ಯಾಲರಿ ಎಷ್ಟು? ಅವರಿಗೆ ಯಾವ ಯಾವ ಭತ್ಯೆ ನೀಡಲಾಗುತ್ತದೆ? ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ.

ಪ್ರಧಾನಿ ಮೋದಿ ಅವರ ತಿಂಗಳ ವೇತನ 1.66 ಲಕ್ಷ ರೂಪಾಯಿ. ಒಂದು ವರ್ಷಕ್ಕೆ 19.20 ಲಕ್ಷ ರೂಪಾಯಿ ಸ್ಯಾಲರಿ ಪಡೆಯುತ್ತಾರೆ.

ಮೋದಿ ಅವರ ಪ್ರತಿ ತಿಂಗಳ ಸಂಬಳದಲ್ಲಿ 50 ಸಾವಿರ ರೂಪಾಯಿ ಫಿಕ್ಸೆಡ್ ಸ್ಯಾಲರಿಯಾಗಿ ನೀಡಲಾಗುತ್ತದೆ. ಇತರ ಭತ್ಯೆಯಾಗಿ 6 ಸಾವಿರ, ಸಂಸದರ ಭತ್ಯೆ 3 ಸಾವಿರ, ಪ್ರಧಾನಿ ಮಂತ್ರಿ ತಮ್ಮ ಕಾರ್ಯಾಲಯದಿಂದ ಹೊರಭಾಗದಲ್ಲಿ ಕೆಲಸ ಮಾಡಿದರೆ ಪ್ರತಿ ದಿನದ ವೆಚ್ಚ 3 ಸಾವಿರ ಪಡೆಯುತ್ತಾರೆ. ಈ ಭತ್ಯೆಗಳನ್ನು ಒಟ್ಟುಗೂಡಿಸಿದರೆ ತಿಂಗಳಿಗೆ 90,000 ರೂಪಾಯಿ. ಹೀಗಾಗಿ ಪ್ರಧಾನ ಮಂತ್ರಿ ಫಿಕ್ಸೆಡ್, ಭತ್ಯೆ, ಸಂಸದರ ಭತ್ಯೆ ಸೇರಿದಂತೆ ಒಟ್ಟು 1.66 ಲಕ್ಷ ರೂಪಾಯಿ ತಿಂಗಳ ವೇತನವಾಗಿ 1.66 ಲಕ್ಷ ರೂಪಾಯಿ ನೀಡಲಾಗುತ್ತದೆ.

ವೇತನ ಜೊತೆಗೆ ಮೋದಿ ಅವರು ಹಲವು ರೀತಿಯ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಪ್ರಧಾನಿಗೆ ಬಾಡಿಗೆ ರಹಿತಿ ಐಷಾರಾಮಿ ಅಧಿಕೃತ ಮನೆ ನೀಡಲಾಗುತ್ತದೆ. 7 ಆರ್‌ಸಿಆರ್ ಎಂದೇ ಖ್ಯಾತಿ ಗೊಂಡಿರುವ ಭಾರತದ ಪ್ರಧಾನಿ ಮನೆ 7 ರೇಸ್ ಕೋರ್ಸ್ ರಸ್ತೆ, ನವಹೆದಲಿಯಲ್ಲಿದೆ. ಇನ್ನು ಪ್ರಧಾನಿಗಳ ಪ್ರಯಾಣಕ್ಕೆ ವಿಶೇಷ ಭದ್ರತೆಗಳನ್ನೊಳಗೊಂಡ ವಾಹನ ನೀಡಲಾಗುತ್ತದೆ. ಜೊತೆಗೆ ಪ್ರಧಾನಿಗೆ ವಿಮಾನ, ಹೆಲಿಕಾಪ್ಟರ್ ಪ್ರಯಾಣದ ಸೌಲಭ್ಯವೂ ನೀಡಲಾಗುತ್ತದೆ. ಪ್ರಧಾನಿಯ ಅಧಿಕೃತ ವಿಮಾನ ಏರ್ ಇಂಡಿಯಾ ಒನ್ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.

ವೈದ್ಯಕೀಯ ಸೌಲಭ್ಯ ಸಂಪೂರ್ಣ ಉಚಿತವಾಗಿದೆ. ದಿನದ 24 ಗಂಟೆಯೂ ಪ್ರಧಾನಿಗೆ ವೈದ್ಯಕೀಯ ಸೌಲಭ್ಯ, ವೈದ್ಯರ ತಂಡ ಲಭ್ಯವಿರುತ್ತದೆ. ಇನ್ನು ಪ್ರಧಾನಿ ಕುಟುಂಬಕ್ಕೂ ಉಚಿತ ವೈದ್ಯಕೀಯ ಸೌಲಭ್ಯವಿದೆ. ಇನ್ನು ಪ್ರಧಾನಿಗಳಿಗೆ ಪಿಂಚಣಿ ಸೌಲಭ್ಯವೂ ಲಭ್ಯವಿದೆ. ಸುದೀರ್ಘ ಸೇವೆ ಬಳಿಕ ನಿವೃತ್ತಿಯಾದಾಗ ಮಾಜಿ ಪ್ರಧಾನಿಗೆ ಪಿಂಚಣಿ ಸೌಲಭ್ಯವೂ ನೀಡಲಾಗುತ್ತದೆ.

ದಾಖಲೆ ವೀರನಿಗೆ ಬೆಟ್ಟದಷ್ಟು ಸವಾಲು, ಕೇಳಬೇಕಿದೆ ಜನಸಾಮಾನ್ಯರ ಅಹವಾಲು..!

ಉಪಚುನಾವಣೆ ದಿನಾಂಕ ಘೋಷಣೆ

 

- Advertisement -

Latest Posts

Don't Miss