Friday, November 22, 2024

Latest Posts

Hijab Controversy ವಿಚಾರಣೆ ನಾಳೆಗೆ ಮುಂದೂಡಿಕೆ..!

- Advertisement -

ಹಿಜಾಬ್ ವಿವಾದ (Hijab Controversy) ಪ್ರಕರಣ ಸಂಬಂಧಿಸಿ ಹೈಕೋರ್ಟ್​ನಲ್ಲಿ (high court) ಪ್ರಕರಣನಡೆಯುತ್ತಿದ್ದು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿ ಆದೇಶ ನೀಡಲಾಗಿದೆ. ಹಿಜಾಬ್ ವಿವಾದದ ವಿಚಾರಣೆಗೆ ರಚಿಸಲಾಗಿರುವ ತ್ರಿಸದಸ್ಯ ಪೀಠ ಮಧ್ಯಂತರ ಆದೇಶವನ್ನೇ ಪಾಲಿಸಬೇಕು ಎಂದು ತಿಳಿಸಿದೆ. ಅರ್ಜಿದಾರರ ಪರವಾಗಿ ದೇವದತ್ ಕಾಮತ್ (Devadat Kamath), ಸರ್ಕಾರದ ಪರವಾಗಿ ಪ್ರಭುಲಿಂಗ ಕೆ.ನಾವದಗಿ (Prabhulinga K.Navadagi) ಹಾಗೂ ಇತರರು ವಾದ ಮಂಡಿಸಿದ್ದಾರೆ. ಇದೇವೇಳೆ, ಮಾಧ್ಯಮಗಳಲ್ಲಿ ಅರ್ಜಿದಾರರು ಮಾಹಿತಿ ನೀಡದಂತೆ ನಿರ್ಬಂಧಿಸಲು ಮನವಿ ಮಾಡಲಾಗಿದೆ. ಸಮವಸ್ತ್ರ, ಹಿಜಾಬ್ ಧರಿಸುವ ಬಗ್ಗೆ ಸರ್ಕಾರದ ಆದೇಶಗಳು, ಶಾಸಕರ ಆದೇಶಗಳು, ಕಾಲೇಜು ಅಭಿವೃದ್ದಿ ಸಮಿತಿಗೆ (College Development Committee) ಹಿಜಾಬ್ ನಿರ್ಬಂಧಿಸುವ ಅಧಿಕಾರವಿಲ್ಲ ಎಂಬ ಬಗ್ಗೆ ಇಂದು ವಾದ ಮಾಡಲಾಗಿದೆ. ಸರ್ಕಾರ ತನ್ನ ಜವಾಬ್ದಾರಿಯನ್ನು ಇತರರಿಗೆ ಹಸ್ತಾಂತರ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಕೇರಳ, ಮದ್ರಾಸ್, ಬಾಂಬೆ, ಮಲೇಷಿಯಾ ಕೋರ್ಟ್​ಗಳ ತೀರ್ಪನ್ನು ಉಲ್ಲೇಖಿಸಿ ದೇವದತ್ಕಾಮತ್ ವಾದ ಮಂಡಿಸಿದ್ದಾರೆ. ಇನ್ನಷ್ಟು ಸಾಂವಿಧಾನಿಕ ಅಂಶಗಳ ಅಧ್ಯಯನ ಇರುವ ಕಾರಣ ವಿಚಾರಣೆಯನ್ನು ತ್ರಿಸದಸ್ಯ ಪೀಠ ನಾಳೆ 2:30ಕ್ಕೆ ಮುಂದೂಡಿ ಆದೇಶ ನೀಡಿದೆ.

- Advertisement -

Latest Posts

Don't Miss