ಬೆಂಗಳೂರಿನಲ್ಲಿ ಇಂದು ಕೆಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ(Variation in power supply)ವಾಗಲಿದೆ. ಇಂದು ಹಲವು ಕಡೆ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಂದು ಅಂದರೆ ಫೆಬ್ರವರಿ 10 ರಂದು ಬೆಂಗಳೂರಿನ ದಕ್ಷಿಣ ವಲಯ(South Zone of Bangalore), ಉತ್ತರ ವಲಯ ಮತ್ತು ಪೂರ್ವ ವಲಯ(Eastern Zone)ದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪಶ್ಚಿಮ ವಲಯದಲ್ಲಿ(western zone) ಮಾತ್ರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಪವರ್ ಕಟ್ ಉಂಟಾಗಲಿದೆ.
ಇಂದು ಪವರ್ ಕಟ್ ಇರಲಿರುವ ಏರಿಯಾಗಳು
ಕೆಎಸ್‌ಆರ್‌ಟಿಸಿ ಕ್ವಾರ್ಟರ್ಸ್, ಗೌಡನಪಾಳ್ಯ, ವಸಂತಪುರ ಮುಖ್ಯ ರಸ್ತೆ, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸಂತಪುರ, ಜೆಪಿ ನಗರ 1ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಬನಶಂಕರಿ ಬಿಎಡಿ ಕಾಂಪ್ಲೆಕ್ಸ್, ಕಿಮ್ಸ್ ಕಾಲೇಜು, ಚಿಕ್ಕಲಸಂದ್ರ,ಯಡಿಯೂರು ಕೆರೆ, ಜಯನಗರದ (Jayanagara) ಕೆಲವು ಭಾಗಗಳು, ತೂರಹಳ್ಳಿ ಬಸ್ ನಿಲ್ದಾಣ, ಈಜಿಪುರ, ಮಾರತ್ಹಳ್ಳಿ, ವೀವರ್ಸ್ ಕಾಲೋನಿ ಮತ್ತು ಬಿಡಿಎ 9ನೇ ಹಂತದಲ್ಲಿ ಇಂದು ವಿದ್ಯುತ್ ಪೂರೈಕೆ ಇರುವುದಿಲ್ಲ. ದೊಮ್ಮಲೂರು, ಮಾರುತಿ ನಗರ, ಹಳೆ ಮಡಿವಾಳ, ಡಾಲರ್ಸ್ ಕಾಲೋನಿ, ಎಸ್‌ಜೆಆರ್ ಕಾಲೇಜು ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ಹಾಗೆಯೇ ಬೆಂಗಳೂರು ಪೂರ್ವ ವಲಯ ಪ್ರದೇಶಗಳಲ್ಲಿಯೂ ಇಂದು ಸಂಜೆಯವರೆಗೆ ಕರೆಂಟ್ ಇರುವುದಿಲ್ಲ. ಉದಯ ನಗರ, ಕಸ್ತೂರಿ ನಗರ, ಎ. ನಾರಾಯಣಪುರ, ಕೆಜಿ ಪುರ ಮುಖ್ಯ ರಸ್ತೆ, ಜೋಗುಪಾಳ್ಯ, ಐಟಿಸಿ ಮುಖ್ಯರಸ್ತೆ, ಒಡ್ಡರಪಾಳ್ಯ, ಉಮರ್ ನಗರ, ನಾಗವಾರ, ವರ್ತೂರು ಮುಖ್ಯರಸ್ತೆ, ಹಲಸಹಳ್ಳಿ ರಸ್ತೆ, ಕೆಆರ್ ಪುರಂ ಮಾರುಕಟ್ಟೆ, ಮಹದೇವಪುರ ಮತ್ತು ಜಿಸಿ ಪಾಳ್ಯದಲ್ಲಿ ಪವರ್ ಕಟ್ ಇರಲಿದೆ. ಇನ್ನು ಉತ್ತರ ವಲಯದ ಪ್ರದೇಶಗಳಾದ ರಾಜಾಜಿನಗರ, ಸದಾಶಿವನಗರ, ಬಿಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ನ್ಯೂ ಬಿಇಎಲ್ ರಸ್ತೆ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಸಿಲ್ವೇಪುರ, ಕುಂಬಾರಹಳ್ಳಿ, ಕಲಾನಗರ, ಶಾರದಾಂಬ ನಗರ, ಎಚ್‌ಎಂಟಿ ಲೇಔಟ್, ಬಸವಲಿಂಗಪ್ಪ ನಗರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಕೆ.ಬಿ. ರಂಕಾ ನಗರ, ಹೆಗಡೆ ನಗರ, ದ್ವಾರಕಾ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ, ಮಹೇಶ್ವರಿ ನಗರ, ಎಂಐಸಿಒ ಲೇಔಟ್ ಮತ್ತು ಜೆಸಿ ನಗರದಲ್ಲಿಯೂ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಪವರ್ ಕಟ್ ಇರಲಿದೆ. ಪಶ್ಚಿಮ ವಲಯದಲ್ಲಿ ಮಾತ್ರ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಾಗರಬಾವಿ ಮುಖ್ಯರಸ್ತೆ, ಮಾರುತಿ ನಗರ, ಕೆನರಾ ಬ್ಯಾಂಕ್ ಕಾಲೋನಿ, ಬಸವೇಶ್ವರನಗರ, ಮಂಜುನಾಥ ನಗರ, ಪಾಪಯ್ಯ ಗಾರ್ಡನ್, ಕೆಎಚ್‌ಬಿ 2ನೇ ಹಂತ, ಅಗ್ರಹಾರ ದಾಸರಹಳ್ಳಿ, ಸುಂಕದಕಟ್ಟೆ, ಬಿಎಚ್‌ಇಎಲ್ ಲೇಔಟ್, ರಾಘವೇಂದ್ರ ಇಂಡಸ್ಟ್ರಿಯಲ್ ಎಸ್ಟೇಟ್, ಡಿ ಗ್ರೂಪ್ ಮಾವಿನ ರಸ್ತೆ, ವಿಘ್ನಳ್ಳಿ ರಸ್ತೆ, ಕೆಂಗೇರಿ ಮುಖ್ಯ ರಸ್ತೆ, ದುಬಾಸಿಪಾಳ್ಯ, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ ಮತ್ತು ಭವಾನಿನಗರದ ನಿವಾಸಿಗಳು ವಿದ್ಯುತ್ ಸಮಸ್ಯೆ ಎದುರಿಸಬೇಕಾಗುತ್ತದೆ.

