Political News: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಂತ್ರಸ್ತೆ ದೂರು ನೀಡಿದ್ದು, ಪ್ರಜ್ವಲ್ ಮತ್ತು ರೇವಣ್ಣ ಇಬ್ಬರೂ ನನ್ನ ಮೇಲೆ ದೌರ್ಜನ್ಯವೆಸಗಿದ್ದಾರೆಂದು ದೂರು ನೀಡಿದ್ದಾರೆ.
ಆದರೆ ಸಂತ್ರಸ್ತೆಯ ಅತ್ತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆ ನೀಡಿರುವ ದೂರು ಸುಳ್ಳು. ಭವಾನಿ ರೇವಣ್ಣ ನಮ್ಮ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಅವರು ಕಷ್ಟಕಾಲದಲ್ಲಿ ನಮ್ಮ ಜೊತೆ ಇದ್ದವರು. ಇದೆಲ್ಲ ರಾಜಕೀಯ ಪ್ರೇರಿತವಾಗಿದೆ. ಸಂತ್ರಸ್ತೆಯೇ ಸರಿ ಇಲ್ಲ. ಆಕೆ ಯಾವುದೇ ಆಮಿಷಕ್ಕೆ ಈ ರೀತಿ ಮಾಡಿದ್ದಾಳೆ. ಪ್ರಜ್ವಲ್ ಒಳ್ಳೆಯ ವ್ಯಕ್ತಿ. ಆತ ಹೀಗೆಲ್ಲ ಮಾಡುವವನಲ್ಲ ಎಂದು ಸಂತ್ರಸ್ತೆಯ ಅತ್ತೆ ಹೇಳಿಕೆ ನೀಡಿದ್ದಾರೆ.
ಅಲ್ಲದೇ, ಸಂತ್ರಸ್ತೆ ಸಾವ ಮಾಡಿಕೊಂಡಿದ್ದಳು, ಜಮೀನು ಸಹ ಮಾರಾಟ ಮಾಡಿದ್ದಳು. ಚುನಾವಣಾ ಸಮಯದಲ್ಲಿ ದೇವೇಗೌಡರ ಮನೆಗೆ ಕಪ್ಪುಚುಕ್ಕೆ ತರಲು ಈ ರೀತಿಯಾಗಿ ಮಾಡಲಾಗಿದೆ. ಆದರೆ ನಮ್ಮ ಮನೆಯವರಿಂದ ಗೌಡರ ಮನೆಗೆ ಕೆಟ್ಟ ಹೆಸರು ಬರಬಾರದು ಎಂದು ನಾನು ಇಲ್ಲಿ ಮಾತನಾಡುತ್ತಿದ್ದೇನೆ. ಮಂಜುನಾಥ ಸ್ವಾಮಿಯ ಮೇಲಾಣೆ ಭವಾನಿ ಅಮ್ಮನವರ ಕುಟುಂಬದವರು ಹೀಗೆ ಮಾಡಿರೋದಿಲ್ಲ. ಸಂತ್ರಸ್ತೆಯ ನಡತೆಯೇ ಸರಿ ಇಲ್ಲ ಅಂತಾ ಸ್ವತಃ ಆಕೆಯ ಅತ್ತೆಯೇ ಹೇಳಿದ್ದಾರೆ.
ಇಷ್ಟೇ ಅಲ್ಲದೇ, 5 ವರ್ಷದ ಹಿಂದೆ ನಡೆದ ದೌರ್ಜನ್ಯದ ಬಗ್ಗೆ ಈಗೇಕೆ ದೂರು ನೀಡಿದ್ದಾರೆ..? 5 ವರ್ಷದ ಹಿಂದೆಯೇ ದೂರು ನೀಡಬೇಕಿತ್ತು. ಆವಾಗ ಎಲ್ಲಿ ಹೋಗಿದ್ದರು..? ಎಲೆಕ್ಷನ್ ಹೊತ್ತಿಗೆ ದೂರು ನೀಡಿದ್ದಾರೆಂದರೆ, ಇದು ಚುನಾವಣಾ ಪ್ರೇರಿತ ಕೆಲಸವೇ ಎಂದು ಸಂತ್ರಸ್ತೆಯ ಅತ್ತೆ ದೂರಿದ್ದಾರೆ.
ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ: ಮುರುಗೇಶ್ ನಿರಾಣಿ