Political News: ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಜ್ವಲ್ ರೇವಣ್ಣನನ್ನು ಇಂದು ಪೊಲೀಸರು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದರು. ಇಂದು 4 ಗಂಟೆ ಸುಮಾರಿಗೆ, ತೀರ್ಪು ಬಂದಿದ್ದು, ಇನ್ನು 6 ದಿನ ಪ್ರಜ್ವಲ್ ಎಸ್‌ಐಟಿ ಕಸ್ಟಡಿಯಲ್ಲಿರಬೇಕು ಎಂದು ಆದೇಶಿಸಲಾಗಿದೆ.
ಚುನಾವಣೆ ನಡೆದ ಮರುದಿನವೇ ಜರ್ಮನಿಗೆ ತೆರಳಿದ್ದ ಪ್ರಜ್ವಲ್ 7ರಿಂದ 8 ಬಾರಿ ಭಾರತಕ್ಕೆ ಬರಲು ಟಿಕೇಟ್ ಬುಕ್ ಮಾಡಿದ್ದರು. ಬಳಿಕ ಅದನ್ನು ಕ್ಯಾನ್ಸಲ್ ಮಾಡಿದ್ದರು, ಈ ಮೂಲಕ ಲಕ್ಷಾಂತರ ರೂಪಾಯಿ ವ್ಯರ್ಥ ಮಾಡಿದ್ದರು.
ಆದರೆ ಕೆಲ ದಿನಗಳ ಹಿಂದೆ ವೀಡಿಯೋವೊಂದನ್ನು ಬಿಡುಗಡೆ ಮಾಡಿ, ನಾನು ವಿದೇಶಕ್ಕೆ ಹೋಗುವುದು ಚುನಾವಣೆಗೂ ಮುನ್ನವೇ ತೀರ್ಮಾನವಾಗಿತ್ತು. ಆದರೆ ಅಲ್ಲಿ ಹೋದ ಬಳಿಕ ತನಗೆ ಪೆನ್‌ಡ್ರೈವ್ ಸುದ್ದಿ ಗೊತ್ತಾಗಿ, ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ಕೇಳಿ, ಡಿಪ್ರೆಶನ್‌ಗೆ ಹೋಗಿದ್ದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದರು.
ಅಲ್ಲದೇ, ಕುಮಾರಣ್ಣ, ದೇವೇಗೌಡರು ಮತ್ತು ಅಪ್ಪ ಅಮ್ಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಮೇ 31ಕ್ಕೆ ನಾನು ಭಾರತಕ್ಕೆ ಬಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ಹೇಳಿದ್ದರು. ಅದರಂತೆ, ಪ್ರಜ್ವಲ್ ವಿಚಾರಣೆಗೆ ಹಾಜರಾಗಿದ್ದು, ಇದೀಗ ಎಸ್‌ಐಟಿ ಕಸ್ಟಡಿಗೆ ಇನ್ನೂ ಒಂದು ವಾರ ಪ್ರಜ್ವಲ್‌ನನ್ನು ಒಪ್ಪಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಿಂಹ ಘರ್ಜನೆ ಮಾಡುತ್ತಿರುವ ನೂತನ ಡಿ.ಸಿ.ಪಿ.ಕುಶಾಲ್ ಚೌಕ್ಸೆ
ಜೂನ್ 2ರಿಂದ ಜೂನ್ 5ರವರೆಗೆ ಕೃ.ವಿ.ವಿ ಮತ ಎಣಿಕೆ ಕೇಂದ್ರದ ಸುತ್ತ ಪ್ರತಿಬಂಧಕಾಜ್ಞೆ ಜಾರಿ