Wednesday, October 15, 2025

Latest Posts

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಸರ್ಕಾರಕ್ಕೆ ನೋಟಿಸ್

- Advertisement -

ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ತಮ್ಮ ವಿರುದ್ಧ ಬಂದಿರುವ ತೀರ್ಪು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿದ್ದ ಶಿಕ್ಷೆಯನ್ನ ರದ್ದುಗೊಳಿಸುವಂತೆ ಅವರು ಮೇಲ್ಮನವಿ ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಅಕ್ಟೋಬರ್ 9 ರಂದು ಹೈಕೋರ್ಟ್ ವಿಭಾಗೀಯ ಪೀಠದ ನ್ಯಾಯಮೂರ್ತಿ ಕೆ.ಎಸ್. ಮುದ್ಗಲ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ ಟಿ ಅವರನ್ನೊಳಗೊಂಡ ಪೀಠವು ಅರ್ಜಿ ವಿಚಾರಣೆ ನಡೆಸಿತು. ಪ್ರಜ್ವಲ್ ರೇವಣ್ಣ ಪರ ವಕೀಲರಿಗೆ ಸಮಗ್ರ ಮೇಲ್ಮನವಿಯ ಸಾರಾಂಶವನ್ನು ಸಲ್ಲಿಸಲು ಸೂಚನೆ ನೀಡಿದ ಹೈಕೋರ್ಟ್, ಪ್ರತಿವಾದಿಯಾಗಿ ವಾದಿಸಲು Special Public Prosecutor ನೇಮಕದ ಕುರಿತಾಗಿ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಗಿದೆ.

ಮೇಲ್ಮನವಿಯಲ್ಲಿ ಪ್ರಜ್ವಲ್ ರೇವಣ್ಣ ಪರ ವಕೀಲರ ವಾದವೇನು? ಅಂದ್ರೆ ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವಾಗಿಸಿ FIR ದಾಖಲಿಸಲಾಗಿದೆ. 2023 ರಲ್ಲಿ ಫಾರ್ಮ್ ಹೌಸ್ ನ ಗೃಹಪ್ರವೇಶದಲ್ಲಿ ಮಹಿಳೆ ಪಾಲ್ಗೊಂಡಿದ್ದಾರೆ. ಅತ್ಯಾಚಾರವಾಗಿದ್ದರೆ ಮಹಿಳೆ ಗೃಹಪ್ರವೇಶಕ್ಕೆ ಹೇಗೆ ಬರುತ್ತಿದ್ದರು. ಅಲ್ಲದೇ ಈ ಮಹಿಳೆಯಿಂದ 3 ವರ್ಷದ ಬಳಿಕ ಪೊಲೀಸರು ದೂರು ಪಡೆದಿದ್ದಾರೆ. ಸ್ಟೋರ್ ರೂಮಿನಲ್ಲಿ ಬಟ್ಟೆ, ಕೂದಲಿದ್ದ ಬ್ಯಾಗ್ ಅನ್ನು ಮಹಿಳೆ ಗುರುತಿಸಿಲ್ಲ. ಬ್ಯಾಟರಿ, ಪೇಂಟ್ ಇದ್ದ ರೂಮಿನಲ್ಲಿ ಮಹಿಳೆಯ ಉಡುಪು ಸಿಕ್ಕಿತೆಂದು ಹೇಳಿದ್ದಾರೆ.

ಲಾಕ್ ಆಗಿದ್ದ ರೂಮಿನಲ್ಲಿ ವೀರ್ಯಾಣುವಿದ್ದ ಬಟ್ಟೆ ಸಿಗಲು ಸಾಧ್ಯವೇ? ಕೂದಲನ್ನು ಸುತ್ತಿ ಬ್ಯಾಗ್ ನಲ್ಲಿ ಇಟ್ಟ ರಹಸ್ಯ ತಿಳಿಯುತ್ತಿಲ್ಲ. ಮಹಿಳೆಯ CrPC 164 ಹೇಳಿಕೆಯನ್ನು ಕೋರ್ಟ್ ಗೆ ಹಾಜರುಪಡಿಸಿಲ್ಲ. ವಿಡಿಯೋ ಇತ್ತು ಅಂತ ಆರೋಪಿಸಲಾದ ಮೊಬೈಲ್ ಅನ್ನೇ ವಶಕ್ಕೆ ಪಡೆದಿಲ್ಲ. FSL ವರದಿಯಲ್ಲೂ ವಿರೋಧಾಭಾಸಗಳಿವೆ. ಹೀಗಾಗಿ ಶಿಕ್ಷೆ ರದ್ದುಪಡಿಸುವಂತೆ ಪ್ರಜ್ವಲ್ ರೇವಣ್ಣ ಪರ ವಕೀಲರು ಹೈಕೋರ್ಟ್ ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತೀರ್ಪುನ್ನು ಕೋರ್ಟ್ ಕೇವಲ ನಾಲ್ಕೇ ತಿಂಗಳಲ್ಲಿ ಪ್ರಕಟಿಸಿರುವುದು ದಾಖಲೆಯಾಗಿದೆ. ಮುಂದೆ ಏನು? ಪ್ರಜ್ವಲ್ ರೇವಣ್ಣ ಮೇಲ್ಮನವಿಗೆ ರಾಜ್ಯ ಸರ್ಕಾರ ಪರವಾಗಿ ಯಾವ ರೀತಿಯ ವಾದ ನಡೆಯಲಿದೆ? ಹೈಕೋರ್ಟ್ ಇದೇ ತೀರ್ಪುವನ್ನು ಮುಂದುವರೆಸುತ್ತದೆಯಾ ಅಥವಾ ಯಾವುದೇ ತಿದ್ದುಪಡಿ ಅಥವಾ ತಾತ್ಕಾಲಿಕ ನಿರೋಧ ಸೂಚಿಸುತ್ತದೆಯಾ ಎಂಬುದನ್ನು ಅಕ್ಟೋಬರ್ 28ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ತಿಳಿದುಬರಲಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss