Wednesday, August 6, 2025

Latest Posts

‘ಪ್ರಣವಾನಂದ ಸ್ವಾಮೀಜಿ ಅಲ್ಲ ಸ್ವಾಮೀಜಿನೇ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ’

- Advertisement -

Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಚೆಕ್ ಬೌನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ಕೊಟ್ಟಿದ್ದಾರೆ. ನೋಡಿ ಮಾದ್ಯಮದವರು ಮಾಹಿತಿ ಕರೆಕ್ಟ್ ಹಾಕಿ. ನಾನು ಸೆಟ್ಲಮೆಂಟ್ ಮಾಡಿಕೊಂಡಿದ್ದೇವೆ. ಜನವರಿ 31 ರೊಳಗೆ ನಾವೇ ಕೊಡ್ತೀವಿ ಎಂದು ಸೆಟ್ಲಮೆಂಟ್ ಮಾಡಿಕೊಂಡಿದ್ದೇವೆ. ಕೋರ್ಟ್ ಮನ್ನಣೆ ಮಾಡಿದ್ದೇವೆ. ಶಿಕ್ಷೆಗೆ ಗುರಿ ಆಗತ್ತೆ ಅಂದ್ರೆ ತಪ್ಪಾಗತ್ತೆ ಎಂದು ಹೇಳಿದ್ದಾರೆ.

ಇದು ನಮ್ಮ ತಂದೆಯವರ ಕಾಲದ್ದು. ಅದನ್ನು ನಿಮಗೆ ಹೇಳೋ ಅವಶ್ಯಕತೆ ಇಲ್ಲ. ಇದು ಹಳೇ ಕೇಸ್ ಚೆಕ್ ಬೌನ್ಸ್ ಬಿಟ್ಟ ಬಿಡಿ, ಅದು ಚೇಂಜ್ ಮಾಡಿ. ಇದು ವಯಕ್ತಿಕ ಅಲ್ಲ, ಕಂಪನಿಗೆ ಸಂಭಂದಿಸಿದ್ದು. ನೀವು ನೋಡಿ ಹಾಕಿ ಎಂದ ಮಧು ಬಂಗಾರಪ್ಪ ಹೇಳಿದ್ದಾರೆ.

ಪ್ರಣವಾನಂದ ಸ್ವಾಮೀಜಿ ಅಲ್ಲ ಸ್ವಾಮೀಜಿನೇ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ ಎನ್ನುವ ಮೂಲಕ, ಪ್ರಣಾವನಂದ ಸ್ವಾಮೀಜಿ ತಲೆಕೆಟ್ಟೋರು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಬಿಕೆ ಹರಿಪ್ರಸಾದ್‌ ಹೇಳಿಕೆಗೂ ನೋ ಕಾಮೆಂಟ್ ಎಂದ ಮಧು ಬಂಗಾರಪ್ಪ, ಗೋವಿಂದ್ ಕಾರಜೋಳಗೂ ಟಾಂಗ್ ಕೊಟ್ಟಿದ್ದಾರೆ.

ಗೋವಿಂದ ಕಾರಜೋಳ ಏನಿದ್ದಾರೆ ಇವಾಗ..? ಅವರು ಯಾಕೆ ಸೋತರಂತೆ? ಎಂದು ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.  ಶಾಲಾ ಶೌಚಾಲಯ ಮಕ್ಕಳಿಂದ ಕ್ಲೀನಿಂಗ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಇದಕ್ಕೆ ಹೊಸ ಕಾನೂನು‌ ಮಾಡ್ತೀದಿವಿ. ನಾಳೆ ನಾಡಿದ್ದು ಹೊಸ ಆದೇಶ ಬರತ್ತೆ. ಮಕ್ಕಳ ಕಡೆ ಯಾರೂ ಇಂತಹ ಕೆಲಸ ಮಾಡಸಬಾರದು. ಕೆಲವು ಕಡೆ ನಾವು ‌ಕೇಸ್ ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.

ಶಿಕ್ಷಕರ ನೇಮಕಾತಿ ವಿಚಾರದ ಬಗ್ಗೆ ಮಧು ಬಂಗಾರಪ್ಪ ಮಾತನಾಡಿದ್ದು, ಈಗಾಗಲೇ 13 ಸಾವಿರ ಶಿಕ್ಷಕರನ್ನು ತೆಗೆದುಕೊಂಡಿದ್ದೇವೆ. ಮುಂದಿನ ಬಜೆಟ್ ಗೆ ಮುಖ್ಯಮಂತ್ರಿಗೆ ಇನ್ನು ಹೆಚ್ಚಿನ ಬೇಡಿಕೆ ಇಟ್ಟಿದ್ದೇವೆ. ಅನುದಾನಿತ ಶಾಲೆಗಳಿಗೂ ಕೂಡ ಹೆಚ್ಚು ಶಿಕ್ಷಕರನ್ನು ತೆಗೆದುಕೊಳ್ಳಬೇಕಿದೆ. 2015ರಿಂದ ತೆಗೆದುಕೊಂಡಿಲ್ಲ ಹೀಗಾಗಿ ಅವರನ್ನು ತೆಗೆದುಕೊಳ್ಳಬೇಕು. ಅದನ್ನು ಕೂಡ ಮುಂದಿನ ವರ್ಷದಲ್ಲಿ ತೆಗೆದುಕೊಳ್ತೀವೆ. ನಮ್ಮ ಸರ್ಕಾರ ಬಂದು 7 ತಿಂಗಳಲ್ಲಿ 13 ಸಾವಿರ ತೆಗೆದುಕೊಂಡಿದ್ದೇವೆ. ಇನ್ನು 43 ಸಾವಿರ ಶಿಕ್ಷಕರ ಕೊರತೆ ಇದೆ. ಮುಖ್ಯಮಂತ್ರಿಗಳು ಜಾಸ್ತಿ ಕೊಡ್ತೀವಿ ಅಂತಾ ಹೇಳಿದ್ದಾರೆ ಎಂದರು.

ಕನ್ನಡ ಪರ ಹೋರಾಟಗಾರರ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ,  ಕಾನೂನು ಸುವ್ಯವಸ್ಥೆ ಹೆಚ್ಚು ಕಡಿಮೆ ಆದಾಗ ಹೀಗಾಗುತ್ತೆ. ನ್ಯಾಯಾಲಯದಲ್ಲಿರೋದ್ರಿಂದ್ರ ನಾನು ಹೆಚ್ಚು ಹೇಳೋಕೆ ಹೋಗೋದಿಲ್ಲ. ಅವರಿಗೂ ಗೌರವ ಕೊಡಬೇಕು. ಅವರು ಕೇಳಿದ್ದನ್ನು ಅನುಷ್ಠಾನ ಮಾಡಬೇಕು, ಅದು ಕೊರತೆ ಇದೆ ಎಂದು ಹೇಳಿದ್ದಾರೆ.

ಕನ್ನಡ ನಾಮಫಲಕ ವಿಚಾರ: ಹುಬ್ಬಳ್ಳಿಯಲ್ಲಿ ಬಾರುಕೋಲು ಹಿಡಿದು ಪ್ರತಿಭಟನೆ

ಕೊಬ್ಬರಿಗೆ ಬೆಲೆ ಏರಿಕೆ: ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಮಾಜಿ ಸಿಎಂ ಕುಮಾರಸ್ವಾಮಿ

40 ವರ್ಷದ ಅನುಭವದಲ್ಲಿ ಇಂತಹ ದರಿದ್ರ ಸರ್ಕಾರ ನೋಡಿಲ್ಲ: ಗೋವಿಂದ ಕಾರಜೋಳ

- Advertisement -

Latest Posts

Don't Miss