- Advertisement -
ಜಕಾರ್ತಾ: ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣೋಯ್ ಇಂಡೋನೇಷ್ಯಾ ಓಪನ್ ಸೂಪರ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರವಾರ ನಡೆದ ಪುರುಷರ ಎರಡನೆ ಸುತ್ತಿನಲ್ಲಿ ವಿಶ್ವದ 23ನೇ ಶ್ರೇಯಾಂಕಿತ ಆಟಗಾರ ಪ್ರಣೋಯ್ ವಿಶ್ವದ 12ನೇ ರ್ಯಾಂಕ್ ಆಟಗಾರ ಹಾಂಗ್ ಕಾಂಗ್‍ನ ಲಾಂಗ್ ಆಂಗಸ್ ಅವರನ್ನು 21-11,21-18 ಅಂಕಗಳಿಂದ ಮಣಿಸಿ 16ನೇ ಸುತ್ತಿಗೆ ಲಗ್ಗೆ ಹಾಕಿದರು.
ಮತ್ತೊರ್ವ ಆಟಗಾರ ಸಮೀರ್ ವರ್ಮಾ ಮಲೇಷ್ಯಾದ ಲೀ ಜೀ ಜಿಯಾ ವಿರುದ್ಧ 10-21, 13-21 ಅಂಕಗಳಿಂದ ಸೋಲು ಕಂಡರು. ಕಳೆದ 7 ಮುಖಾಮುಖಿಯಲ್ಲಿ ಲೀ ವಿರುದ್ಧ 5ನೇ ಬಾರಿ ಸೋಲು ಕಂಡಿದ್ದಾರೆ.
ಮಹಿಳಾ ಡಬಲ್ಸ್‍ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗು ಎನ್.ಸಿಕ್ಕಿ ರೆಡ್ಡಿ ಚೀನಾದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫಾನ್ ವಿರುದ್ಧ 16-21, 13-21 ಅಂಕಗಳಿಂದ ಮಣಿದರು.
- Advertisement -