Hubli News: ಹುಬ್ಬಳ್ಳಿ: ರಾಜ್ಯದಲ್ಲಿ ಯುವಕರಿಗೆ ಉದ್ಯೋಗ, ರೈತರಿಗೆ ಸರಿಯಾದ ಮಳೆ ಬೆಳೆ, ದೇಶದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಲಿ ಎಂದು ಹುಬ್ಬಳ್ಳಿಯ ಯುವಕರ ತಂಡವೊಂದು ತಿರುಪತಿ ಯಾತ್ರೆ ಕೈಗೊಂಡಿದೆ.
ಹೌದು, ಇಲ್ಲಿನ ರಾಮನಗರ ಸೇರಿದಂತೆ ಹುಬ್ಬಳ್ಳಿಯ ವಿವಿಧೆಡೆಯ 135 ಕ್ಕೂ ಹೆಚ್ಚು ಯುವಕರು ಯುವ ನಾಯಕರಾದ ಸಂತೋಷ ಛಲವಾದಿ ಹಾಗೂ ಸತೀಶ್ ಛಲವಾದಿ ಅವರ ನೇತೃತ್ವದಲ್ಲಿಂದು ರಾಮನಗರದಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದವರೆಗೆ ಪಾದಯಾತ್ರೆ ಕೈಗೊಂಡು ಬಳಿಕ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ರೈಲಿನ ಮೂಲಕ ತೆರಳಿದರು.
ಈ ವೇಳೆ ಮಾತನಾಡಿದ ಯುವ ಮುಖಂಡ ಸಂತೋಷ ಛಲವಾದಿ, ದೇಶದಲ್ಲಿ ಯುವಕರು ವಿದ್ಯಾವಂತರಾದರು ಸರಿಯಾದ ಕೆಲಸ ಸಿಗುತ್ತಿಲ್ಲ, ಬೀಕರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಉತ್ತಮ ಮಳೆಯಾಗಿ ರೈತರಿಗೆ ಉತ್ತಮ ಬೆಳೆ ಸಿಗುವಂತಾಗಲಿ, ಎಲ್ಲರಿಗೂ ಒಳ್ಳೆಯದು ಆಗಲಿ ಎಂದು ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಲು ಹೋಗುತ್ತಿದ್ದೇವೆ. ಎಲ್ಲರಿಗೂ ಆ ಭಗವಂತ ಒಳ್ಳೆಯದು ಮಾಡಲಿ ಎಂದರು.
ಬಳಿಕ ಹಿರಿಯರಾದ ಚಂದ್ರಕಾಂತ ಯಾದವ್ ಮಾತನಾಡಿ, ಛಲವಾದಿ ಸಹೋದರರ ನೇತೃತ್ವದಲ್ಲಿ ಈ ವೊಂದು ತಿರುಪತಿ ಯಾತ್ರೆ ನಡೆಯುತ್ತಿದೆ. ಆ ಭಗವಂತ ಉತ್ತಮ ಮಳೆ ಕೊಟ್ಟು ಜನರನ್ನು ಸುಭಿಕ್ಷೆಯಿಂದ ಇಡಲಿ, ಹಾಗೂ ದೇಶದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಲಿ ಎಂದು ಯಾತ್ರೆ ಕೈಗೊಂಡಿದ್ದೇವೆ ಎಂದು ಹೇಳಿದರು.
ಒಟ್ಟಿನಲ್ಲಿ ಸ್ವಲ್ಪ ಸಮಯ ಸಿಕ್ಕರೆ ಸಾಕು, ಯುವಕರು ಗೋವಾ, ಪಾರ್ಟಿ, ಪಬ್, ಬಾರು, ಮೋಜು ಮಸ್ತಿ ಎಂದು ಹೋಗುತ್ತಿರುವ ಸಂದರ್ಭದಲ್ಲಿ ರಾಮನಗರದ ಯುವಕರು ಕೈಗೊಂಡ ತಿರುಪತಿ ಯಾತ್ರೆ ಇತರರಿಗೆ ಮಾದರಿ.
ನಾನು ಬದುಕಿರುವವರೆಗೆ ಕನ್ನಡಿಗನೇ, ಆರ್.ಸಿ.ಬಿ ಯ ಹೆಮ್ಮೆಯ ಅಭಿಮಾನಿಯೇ: ಸಿಎಂ ಸಿದ್ದರಾಮಯ್ಯ
ಭೂತಾನ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ.. ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವ
ಮೊಣಕಾಲಿನಲ್ಲಿ ನಡೆದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾನ್ವಿ ಕಪೂರ್