Saturday, October 19, 2024

Latest Posts

ಗಮನಸೆಳೆದ ಬಿ.ವೈ. ವಿಜಯೇಂದ್ರ-ಪ್ರೀತಂಗೌಡ್ರ ಬುಲೆಟ್ ಸವಾರಿ: ಕಾರ್ಯಕರ್ತರ ಜೊತೆ ಶಾಸಕರ ನೃತ್ಯ

- Advertisement -

ಹಾಸನ: ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರೀತಂ ಜೆ. ಗೌಡರ ಪರ ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ತಾವೆ ಡಬಲ್ ರೇಡಿಂಗ್ ಚಾಲನೆ ಮಾಡುವುದರ ಮೂಲಕ ಗಮನಸೆಳೆದ್ರೆ. ಕೊನೆಯಲ್ಲಿ ಶಾಸಕ ಪ್ರೀತಂ ಗೌಡ ಅವರು ಮಹಾವೀರ ವೃತ್ತದಲಿ ಕಾರ್ಯಕರ್ತರ ಜೊತೆ ವಾಹನದ ಮೇಲೆ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು.

ನಗರದ ಬೂವನಹಳ್ಳಿ ಹೆಲಿಪ್ಯಾಡ್ ಗೆ ಆಗಮಿಸಿದ ವಿಜಯೆಂದ್ರ ಅವರು, ನಂತರ ಬೈಕ್ ರ‍್ಯಾಲಿ ಮೂಲಕ ಅಲ್ಲಿಂದ ಡೈರಿ ವೃತ್ತ.ಎನ್.ಆರ್.ವೃತ್ತ, ಸಂತೆಪೇಟೆ ವೃತ್ತದವರಗೂ ಬಂದು ಮತ ಯಾಚನೆ ಮಾಡಿ ವಾಪಸ್ ತೆರಳಿದರು. ನಂತರ ಪ್ರೀತಂ ಗೌಡರು ಹಾಸನಾಂಬ ವೃತ್ತದ ಮೂಲಕ ವಲ್ಲಬಾಯಿ ರಸ್ತೆ. ಗಾಂಧಿ ಬಜಾರ್.ಕೆ.ಇ.ಬಿ.ರಸ್ತೆ. ಮಹಾವೀರ್ ವೃತ್ತದವರೆಗೂ ರೋಡ್ ಶೋ ನಡೆಸಿ ಕೊನೆಗೊಳಿಸಿದರು.

ಈ ವೇಳೆ ಮಹಾವೀರ ವೃತ್ತದ ಬಳಿ ಶಾಸಕ ಪ್ರೀತಂ ಜೆ. ಗೌಡ ಅವರು ಉದ್ದೇಶಿಸಿ ಬಹಿರಂಗ ಭಾಷಣದಲ್ಲಿ ಮಾತನಾಡುತ್ತಾ, ಅಭಿವೃದ್ಧಿಗೆ ಪೂರಕವಾದ ಶಾಸಕ ಪ್ರೀತಂ ಜೆ ಗೌಡ ನಿಗೆ ಮತ್ತೆ ಅವಕಾಶ ಕೊಡಬೇಕು. ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಶೇಕಡಾ ೮೦ ಜನ ಅಭಿವೃದ್ಧಿ ನೋಡಿ ಮತ ನೀಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಬಂದ ದೊಡ್ಡ ದೊಡ್ಡ ನಾಯಕರು ಪ್ರೀತಂ ಜೆ. ಗೌಡನನ್ನು ತೆಗೆತಿವಿ, ಓಡಿಸುತ್ತೇವೆ ಎಂದು ಏನೆನೊ ಮಾತನಾಡುತ್ತಾರೆ. ನೆನ್ನೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಸನ ನಗರದ ಕಾರ್ಯಕ್ರಮಕ್ಕೆ ಬಂದರೇ ಜನ ಅಷ್ಟೊಂದು ಇರಲಿಲ್ಲ. ಕಾರ್ಯಕ್ರಮಕ್ಕೆ ಜನ ಸೇರಲಿಲ್ಲ. ಪಾಪ ಅದಕ್ಕಾಗಿಯೇ ಜೆಡಿಎಸ್ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಅವರನ್ನು ಮತಯಾಚನೆ ಮಾಡಲು ಪೆನಷನ್ ಮೊಹಲ್ಲಾ ಬಡಾವಣೆಗೆ ಕಳುಹಿಸುತ್ತಾರೆ ನಮ್ಮ ಅಣ್ಣ ತಮ್ಮಂದಿರ ಬಳಿ. ಇವರು ಇರುವ ಕಡ ಜನ ಬರುತ್ತಿಲ್ಲ ಎಂದು ಜನ ಇರುವ ಕಡೆ ಓಟು ಕೇಳುವ ಪರಿಸ್ಥಿತಿ ಜೆಡಿಎಸ್ ಪಕ್ಷಕ್ಕೆ ಬಂದಿದೆ ಎಂದು ವ್ಯಂಗ್ಯವಾಡಿದರು.

೫ ವರ್ಷಗಳ ಕಾಲ ಯಾರು ಜನಸಾಮಾನ್ಯರ ನಡುವೆ ಇರುತ್ತಾರೆ ಅವರಿಗೆ ಒಲವು ಸಿಗುತ್ತದೆ. ಕೊವಿಡ್ ಸಮಯದಲ್ಲಿ ನಾನು ಜನರ ನಡುವೆ ಇದ್ದೆ. ನಮ್ಮ ತಂಡ ಮನೆ ಮನೆಗೆ ಹೋಗಿ ಆಹಾರದ ಕಿಟ್ ಕೊಡುವ ಕೆಲಸ ಮಾಡಲಾಗಿದೆ. ನಾನು ೧ ಗಂಟೆ ರ‍್ಯಾಲಿ ಮಾಡಲು ಕೇಳಿದಾಗ ಇಷ್ಟೊಂದು ಜನ ಸೇರಿದ್ದಾರೆ ಒಂದು ವಾರ ಪ್ರಚಾರ ಮಾಡಿದರು ಮೂರು ಗಂಟೆ ಕಾದರು ೮೦ ಅಡಿ ರಸ್ತೆಯಲ್ಲಿ ಜನ ಸೇರಲಿಲ್ಲ. ೧೩ನೇ ತಾರಿಖು ಮದ್ಯಾಹ್ನ ಒಂದುವರೆ ಗಂಟೆಗೆ ಇಂಜಿನಿಯರಿಂಗ್ ಕಾಲೇಜು ಬಳಿಯಿಂದ ಮುಗಿಸಿಕೊಂಡು ಇದೆ ಮಹಾವೀರ ವೃತ್ತದಲ್ಲಿ ಸಂಭ್ರಮಾಚರಣೆಯನ್ನು ಜೋರಾಗಿ ಮಾಡೋಣ ಎಂದು ಹೇಳಿದರು.

‘ಹೇಗೂ ಸುಳ್ಳು ಹೇಳ್ತೀರಾ, ಹೊಸ ಸುಳ್ಳುಗಳನ್ನಾದರೂ ಹೇಳೋಕ್ಕಾಗೊಲ್ವಾ ?’

‘ನೀವು ದೇವೇಗೌಡ ಬದುಕಿದ್ದಾಗ ಈ ಶರೀರಕ್ಕೆ ನೋವನ್ನು ಕೊಡಬೇಡಿ’

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದ ಹೆಚ್ಡಿಕೆ

- Advertisement -

Latest Posts

Don't Miss