Saturday, July 5, 2025

Latest Posts

ಮಗ.. ಅಮ್ಮ.. ತಂದೆ.. ತಾಯಿ.. ಎಲ್ಲಾ ಜ್ಞಾಪಕಕ್ಕೆ ಬರ್ತಾ ಇದ್ದಾರೆ : ಭವಾನಿಗೆ ಪ್ರೀತಂ ಟಾಂಗ್..

- Advertisement -

ಹಾಸನ: ಸ್ವರೂಪ್ ನನ್ನ ಮಗ ಎಂಬ ಭವಾನಿ ರೇವಣ್ಣ ಹೇಳಿಕೆ ವಿಚಾರಕ್ಕೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಅವರ ಪ್ರೀತಿ ಸ್ವರೂಪ್ ಅವರ ಮೇಲಿದೆ ಅದು ಗೊತ್ತಾಗಿದೆ. ಅವರಿಬ್ಬರೂ ಪರಸ್ಪರ ಯಾವುದೇ ರೀತಿಯ ಮಾತನಾಡಿಕೊಳ್ಳದೇ, ನಮ್ಮ ಹಾಸನದ ಪಾಸಿಟಿವ್ ಎನರ್ಜಿ ಇದೆ, ಅಭಿರುಚಿ ಇದೆ ಅದನ್ನ ಹೋಗೋದಕ್ಕೆ ಬಿಡದೇ, ಇಬ್ಬರೂ ಹೊಂದಾಣಿಕೆ ಮಾಡಿಕೊಂಡಿರೋದು ಉತ್ತಮವಾದ ಬೆಳವಣಿಗೆ. ಅವರ ಪಕ್ಷದ ದೃಷ್ಟಿಯಿಂದ ಒಳ್ಳೆಯದು. 2024ಕ್ಕೆ ಅವರ ಮಗ ಎಂಪಿ ಕ್ಯಾಂಡಿಡೇಟ್ ಆಗೋದ್ರಿಂದ ಅವರು ಈ ಎಲ್ಲಾ ಸರ್ಕಸ್ ಮಾಡಬೇಕಾಗುತ್ತೆ. ಅವರು ಚುನಾವಣೆ ಮಾಡ್ತಾ ಇರೋದು 2023 ರ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿ ಅಂತಾ ಅಲ್ಲ. 2024ಕ್ಕೆ ಹಾಸನ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಮಾಡೋದಕ್ಕೆ. ಕಾರ್ಯಕರ್ತರನ್ನ ಉಳಿಸಿಕೊಳ್ಳಬೇಕು ಅನ್ನೋ ಕಾರಣಕ್ಕೆ ಚುನಾವಣೆ ಮಾಡ್ತಾ ಇದ್ದಾರೆ ಎಂದು ಪ್ರೀತಂಗೌಡ ಭವಾನಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಇದೆಲ್ಲದರದ್ದೂ‌ 1947 ರಲ್ಲಿ ಮಾಡಿದ್ರೆ ಈ ತರ ಎಲ್ಲಾ ಮಾಡಿದ್ರ ಜನರಿಗೆ ಅರ್ಥ ಆಗ್ತಾ ಇರಲಿಲ್ಲ ಅಂತಾ ಅನ್ಕೋಬಹುದು. ಆಗ ಮಾಧ್ಯಮ ಸ್ಟ್ರಾಂಗ್ ಇರಲಿಲ್ಲ, ಇವಾಗ ಏನ್ ಮಾಡಿದ್ರೂ ಜನಸಾಮಾನ್ಯರಿಗೆ ಅರ್ಥ ಆಗುತ್ತೆ. ಯಾವ ಕಾರಣಕ್ಕೆ ಒಪ್ಪಿಕೊಂಡಿದ್ದಾರೆ, ಯಾವ ಕಾರಣಕ್ಕೆ ಕೆಲಸ ಮಾಡ್ತಾ ಇದ್ದಾರೆ. ಬಿಟ್ಟೋಗಿದ್ದ ದತ್ತಣ್ಣನನ್ನ ವಾಪಸ್ಸು ಹೋಗಿ ಎಲ್ಲರೂ ಹೋಗಿ ಕರ್ಕೊಂಡ್ ಬಂದಿದ್ದು ಯಾಕೆ..?  ಹಾಸನದಲ್ಲಿ ಯಾರೂ ಕ್ಯಾಂಡಿಡೆಟ್..?  ಹೆಸರು ಗೊತ್ತಿಲ್ಲ ಅಂತಾ ಹೇಳಿದವರು, ಇವಾಗ ನನ್ನ ಮಗ ಅಂತಾ ಹೇಳ್ತಾ ಇದ್ದಾರೆ ಎಲ್ಲಾ ಸಹಜ ಅಲ್ವಾ..? ರಾಜಕಾರಣ ಅಲ್ವಾ..? ಎಂದು ಪ್ರೀತಂಗೌಡ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

2024ರದ್ದು ಜ್ಞಾಪಕ ಆಗ್ತಿದೆ, 2023 ರದ್ದು ರಿಸಲ್ಟ್ ಮುಗಿದು ಹೋಗಿದೆ. 2024ಕ್ಕೆ ನಾವೇನಾದ್ರೂ ಉಳ್ಕೋಬೇಕು ಅಂದ್ರೆ ಏನಾದ್ರೂ ತಂತ್ರ ಮಾಡ್ಬೇಕಲ್ಲ ಅಂತಾ. ಮಗ.. ಅಮ್ಮ.. ತಂದೆ.. ತಾಯಿ.. ಎಲ್ಲಾ ಜ್ಞಾಪಕಕ್ಕೆ ಬರ್ತಾ ಇದ್ದಾರೆ. ಅದಕ್ಕೆ ಮುಂಚೆ ಏನೇನ್ ಮಾತಾಡಿದ್ದಾರೆ ಅನ್ನೋದು ಅವರವರಿಗೆ ಬಿಟ್ಟಂತ ವಿಚಾರ. ಅವರಿಬ್ಬರೂ ಒಂದಾಗಿರೋವಂತಹದ್ದು ಅವರ ಪಾರ್ಟಿಗೆ ಒಳ್ಳೆಯದು . ಅವರು ಅದೇ ರೀತಿ ಇದ್ದು ಪಾರ್ಟಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಿ . ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಲೇಬೇಕು .  ವಿರೋಧ ಪಕ್ಷ ಇರಲಿಲ್ಲ ಅಂದ್ರೆ ಪರಿಣಾಮಕಾರಿಯಾಗಿ ಕೆಲಸ ಮಾಡೋದಕ್ಕೆ ಆಗೋದಿಲ್ಲ.  ಹಾಗಾಗಿ ಅವರ ಪಾರ್ಟಿ ಬಗ್ಗೆ ಏನೂ ಮಾತಾಡೋದಿಲ್ಲ ಎಂದು ಪ್ರೀತಂಗೌಡ ಹೇಳಿದ್ದಾರೆ.

ಡಬಲ್ ಇಂಜಿನ್ ಎಂದರೇ ಡಬಲ್ ಅಭಿವೃದ್ಧಿ ಎಂದರ್ಥ : ಪ್ರಧಾನಿ ನರೇಂದ್ರ ಮೋದಿ..

ಚರ್ಚೆ ಹುಟ್ಟುಹಾಕಿದ ದಿ ಕೇರಳ ಸ್ಟೋರಿ ಟ್ರೇಲರ್‌..

ಮಹಿಳೆಯರೊಂದಿಗೆ ಪ್ರಚಾರಕ್ಕಿಳಿದ ಮಂಜುಳಾ ಲಿಂಬಾವಳಿ..

- Advertisement -

Latest Posts

Don't Miss