- Advertisement -
ಹಾಸನ: ಹಾಸನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಪ್ರೀತಂಗೌಡ, ವಿಧಾನಸೌಧದಲ್ಲಿ ನಿನ್ನೆ ಲಕ್ಷಾಂತರ ರೂಪಾಯಿ ಹಣ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿ ಇದ್ದವೇಳೆ ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರ ಕಛೇರಿಯಲ್ಲಿ ಹಣ ಸಿಕ್ಕಿತ್ತು.ಅದರ ಬಗ್ಗೆ ಕಾಂಗ್ರೆಸ್ ಅವರು ಮೊದಲು ಉತ್ತರ ಕೊಡಲಿ. ಮಂತ್ರಿ ಚೇಂಬರ್ ನಲ್ಲಿ ಹಣ ಸಿಕ್ಕಿದ್ರೆ ಲೆಕ್ಕ ಕೊಡಲ್ಲ, ಯಾರೊ ಇಂಜಿನಿಯರ್ ಹತ್ರಾ ಹಣ ಸಿಕ್ಕಿದ್ರೆ ನಾವು ಉತ್ತರ ಕೊಡೋಕೆ ಆಗುತ್ತಾ..? ಎಂದು ಪ್ರೀತಂ ಪ್ರಶ್ನಿಸಿದ್ದಾರೆ..
ಅಲ್ಲದೇ, ಆ ಇಂಜಿನಿಯರ್ ಬಿಜೆಪಿ ಸದಸ್ಯ ಅಲ್ಲಾ ನಾವು ಅವರ ವಕ್ತಾರರೂ ಅಲ್ಲ. ಸರ್ಕಾರ ಬಿಜೆಪಿದು ಇದೆ ಎಂದರೆ ಕಾಂಗ್ರೆಸ್ ಜೆಡಿಎಸ್ ಅವರದು ಏನು ನಡೆಯೋದೆ ಇಲ್ಲಾ ಅಂತಾನಾ..? ಅವನು ಯಾರು ಏನು ಎಂದು ಚರ್ಚೆ ಮಾಡೋದು ಬಿಡಿ ತನಿಖೆಯಿಂದ ಎಲ್ಲಾ ಹೊರ ಬರುತ್ತೆ ಎಂದು ಪ್ರೀತಂಗೌಡ ಹೇಳಿದ್ದಾರೆ.
- Advertisement -