ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ!

Vijayanagara News: ವಿಜಯನಗರ: ಪ್ರೀತಿಸಿ ಮದುವೆಯಾದ (Love Marriage) ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪತಿ, ಕೊನೆಗೆ ತಾನೇ ಪೊಲೀಸ್‌ ಠಾಣೆಗೆ ಹೋಗಿ ಶರಣಾಗಿರುವ ಘಟನೆ, ವಿಜಯನಗರ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ನಡೆದಿದೆ.

ಮೂಲತಃ ಮೈಸೂರು ಜಿಲ್ಲೆ ಹೆಚ್‌.ಡಿ ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಡಿಂಪಲ್‌ (36) ಕೊಲೆಯಾದ ಮಹಿಳೆ. ನೆಲ್ಲುಕುದುರಿ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಶ್ರೀಕಾಂತ ಕೊಲೆ ಆರೋಪಿ.

ಡಿಂಪಲ್‌ ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯಾಧಿಕಾರಿಯಾಗಿದ್ದರು.‌ ಕಳೆದ ವರ್ಷ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ ತಾಂಡಾದ ನಿವಾಸಿ ಹಾಗೂ ನೆಲ್ಲುಕುದುರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಕಾಂತನನ್ನ ಪ್ರೀತಿಸಿ ಮದುವೆಯಾಗಿದ್ದರು.

ಡಿಂಪಲ್‌ಗೆ ಇದು 3ನೇ ಮದುವೆ, ಶ್ರೀಕಾಂತ್‌ಗೆ 2ನೇ ಮದುವೆ. ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ವಾಸವಾಗಿದ್ದ ದಂಪತಿ ಪರಸ್ಪರ ಅನ್ನೋನ್ಯವಾಗಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಶುಕ್ರವಾರ (ನ.25) ರಾತ್ರಿ ಏಕಾಏಕಿಯಾಗಿ ಇಬ್ಬರ ನಡುವೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೆಂಡತಿಯನ್ನ ಕೊಲೆ ಮಾಡಿದ ನಂತರ ಶ್ರೀಕಾಂತ ಗ್ರಾಮದ ಪೊಲೀಸ್ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಇಟ್ಟಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಮಿತ್ ಶಾ ನಮ್ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು : ವಿ.ಸೋಮಣ್ಣ ಅಳಲು

ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ: ಶ್ರೀರಾಮುಲು ಏನಂದ್ರು ಗೊತ್ತಾ?

ವಿಜಯಪುರಕ್ಕೆ ನಾನೇ ಸಿಎಂ ಎಂದ ಯತ್ನಾಳ್

About The Author