www.karnatakatv.net:ಪ್ರೀತಿ – ಪ್ರೇಮ ಇಂತಹ ಕಾನ್ಸೆಪ್ಟ್ ಹೊಂದಿರುವ ಹಲವು ಸಿನಿಮಾಗಳನ್ನು ಮಾಡಿ ಲವ್ಲಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಪ್ರೇಮ್ ಅಭಿನಯದ 25ನೇ ಚಿತ್ರ ಪ್ರೇಮಂ ಪೂಜ್ಯಂ ಇದಾಗಿದೆ.
ಡಾಕ್ಟರ್ ವೃತ್ತಿ ಮಾಡುತ್ತಿದ್ದ ರಾಘವೇಂದ್ರ ಅವರು ಮೊದಲ ಬಾರಿ ಡೈರೆಕ್ಷನ್ ಮಾಡಿ ಸೈ ಎನಿಸಿ ಕೊಂಡಿದ್ದಾರೆ.ಕಳೆದ 2ವರ್ಷಕ್ಕು ಮೊದಲಿನಿಂದಲೇ ಪ್ರೇಮಂ ಪೂಜ್ಯಂ ಚಿತ್ರದ ಕೆಲಸಗಳು ಪ್ರಾರಂಭ ವಾಗಿದ್ದವು, ಕೊರೋನ ಕಾರಣ ದಿಂದಾಗಿ ಸುಮ್ಮನಾಗಿದ್ದ ಚಿತ್ರತಂಡ ಲಾಕ್ಡೌನ ನಂತರ ಬಾಕಿ ಇದ್ದ ಮಿಕ್ಕ ಎಲ್ಲ ಕೆಲಸಗಳನ್ನೂ ಪೂರ್ಣಗೊಳಿಸುತ್ತು.
ಕಳೆದ ತಿಂಗಳ 29ನೇ ದಿನಾಂಕದಂದೆ ಚಿತ್ರ ಬಿಡುಗಡೆಯಾಗುವುದಾಗಿ ಚಿತ್ರತಂಡ ಗೋಷಿಸಿತ್ತು, ಆದರೆ ಅದೇ ದಿನಂದಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಭಜರಂಗಿ -2 ಚಿತ್ರ ಬಿಡುಗಡೆಯಾಗುತಿದ್ದ ಕಾರಣ ಪ್ರೇಮಂ ಪೂಜ್ಯಂ ಚಿತ್ರದ ಬಿಡುಗಡೆಯನ್ನು ಇಂದಿಗೆ (ನವೆಂಬರ್ 12ಕ್ಕೆ) ಮುಂದೂಡಲಾಗಿತ್ತು . ಸದ್ಯ ಇಂದು ತೆರೆ ಕಂಡಿರುವ ಚಿತ್ರ ಉತ್ತಮ ಓಪನಿಂಗ್ ಅನ್ನು ಪಡೆದುಕೊಂಡಿದೆ.
ಇನ್ನೂ ಈ ಚಿತ್ರದಲ್ಲಿ ಪ್ರೇಮ್ ಜೊತೆಗೆ ಬೃಂದಾ ಆಚರ್ಯ, ಮಾಸ್ಟರ್ ಆನಂದ್, ಐಂದ್ರಿತಾ ರೈ, ಸಾಧಕೋಕಿಲಾ, ಅವಿನಾಶ್, ಮಾಳವಿಕ ಅವಿನಾಶ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರದಿಂದ ಬೃಂದಾ ಆಚಾರ್ಯ ಅವರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಪ್ರೇಮಂ ಪೂಜ್ಯಂ ಚಿತ್ರದಲ್ಲಿನ ಹಾಡುಗಳು ಹಾಗೂ ಸ್ಕ್ರೀನ್ ಪ್ಲೇ ಪ್ಲಸ್ ಪಾಯಿಂಟ್ ಆಗಿದೆ. ಚಿತ್ರದಲ್ಲಿ ಛಾಯಗ್ರಾಹಕರಾದ ನವೀನ್ ಅವರ ಕೆಲಸಕ್ಕೆ ಪ್ರೇಕ್ಷಕರು ಮಾನಸೋತಿದ್ದಾರೆ. ಮೊದಲಬಾರಿ ನಿರ್ದೇಶನ ಮಾಡಿರುವ dr.ರಾಘವೇಂದ್ರ ಅವರ ನಿರ್ದೇಶನವನ್ನು ಜನರು ಮೆಚ್ಚಿದ್ದಾರೆ.
ಒಟ್ಟಾರೆ ಪ್ರೇಮಂ ಪೂಜ್ಯಂ ನೋಡಿದ ಜನರು ವಾವ್ ಎನ್ನುತ್ತಿದ್ದಾರೆ.
ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.

