Friday, April 18, 2025

Latest Posts

ಮೂರು ಕೃಷಿ ಕಾನೂನು ರದ್ದು ಮಸೂದೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

- Advertisement -

ನವದೆಹಲಿ : ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬುಧವಾರ ಒಪ್ಪಿಗೆ ನೀಡಿದ್ದಾರೆ.

ಚಳಿಗಾಲದ ಅಧಿವೇಶನದ ಮೊದಲ ದಿನದಂದು ಎರಡೂ ಸದನಗಳಲ್ಲಿ ಧ್ವನಿ ಮತಗಳಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸಂಸತ್ತು ಸೋಮವಾರ ಅನುಮೋದನೆ ನೀಡಿತ್ತು.

ಇನ್ನು ಕೃಷಿ ಕಾನೂನುಗಳ ರದ್ದತಿ ಮಸೂದೆ- 2021 ಔಪಚಾರಿಕವಾಗಿ ಹಿಂತೆಗೆದುಕೊಳ್ಳಲು ಅಧ್ಯಕ್ಷರ ಒಪ್ಪಿಗೆಯೊಂದು ಬಾಕಿ ಇತ್ತು. ಸಧ್ಯ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದು, ಕೃಷಿ ಮಸೂದೆಗಳು ರದ್ದಾಗಿವೆ.

- Advertisement -

Latest Posts

Don't Miss