ಬೆಂಗಳೂರು: ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತುನ 26ನೇ ಅಧ್ಯಕ್ಷರಾಗಿ ಡಾ. ಮಹೇಶ್ ಜೋಶಿ ಅವರು ಆಯ್ಕೆಯಾಗಿದ್ದಾರೆ. ರಾಜ್ಯದ ಒಟ್ಟು 420 ಮತಕೇಂದ್ರಗಳಲ್ಲಿ ಭಾನುವಾರ ನಡೆದ ಮತದಾನದಲ್ಲಿ 1.59 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದಾರೆ. ನಿನ್ನೆ ರಾತ್ರಿಯ ವೇಳೆಗೆ 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಫಲಿತಾಂಶ ಪ್ರಕಟವಾಗಿತ್ತು. ಈ ಪೈಕಿ ಮಹೇಶ್ ಜೋಷಿಯವರಿಗೆ 51169 ಮತಗಳು ಲಭಿಸಿದ್ದು ಪ್ರಥಮ ಸ್ಥಾನದಲ್ಲಿದ್ದಾರೆ. ಹಾಗೆಯೇ ಎರಡನೇ ಸ್ಥಾನದಲ್ಲಿ ಡಾ. ಶೇಖರ ಗೌಡ ಮಾಲಿ ಪಾಟೀಲ್ ಅವರಿಗೆ 17656 ಮತಗಳು ಲಭಿಸಿವೆ. ಹೊರರಾಜ್ಯಗಳಾದ ಆಂಧ್ರಪ್ರದೇಶ ,ಕೇರಳ ಮಹಾರಾಷ್ಟ್ರ, ತಮಿಳುನಾಡು, ಗೋವಾದಿಂದ ರವಾನೆಯಾಗುವ ಒಟ್ಟು 4679 ಅಂಚೆ ಮತಗಳು. ವಿಳಾಸದಲ್ಲಿ ಮತದಾರ ಇಲ್ಲದ ಕಾರಣಕ್ಕೆ 13 ಮತಗಳು ವಾಪಸಾಗಿದೆ. ಆದರೆ ಪ್ರಥಮ ಹಾಗೂ ದ್ವಿತೀಯ ಅಭ್ಯರ್ಥಿಗಳ ನಡುವಿನ ಅಂತರ ಜಾಸ್ತಿ ಇರುವ ಕಾರಣ ಈ ಮತಗಳ ಎಣಿಕೆ ಔಪಚಾರಿಕತೆಗಷ್ಟೇ ಮೀಸಲಾಗುತ್ತದೆ. ನವೆಂಬರ್ 24ರ ಬುಧವಾರ ಚುನಾವಣಾ ಅಧಿಕಾರಿ ಜಿ ಎಂ ಗಂಗಾಧರಸ್ವಾಮಿ ಅಧಿಕೃತವಾಗಿ ಫಲಿತಾಂಶ ಘೋಷಿಸಲಿದ್ದಾರೆ.
ದೂರದರ್ಶನ ಚಂದನ ವಾಹಿನಿಯಲ್ಲಿ ಅಧಿಕಾರಿಯಾಗಿ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ ಮೂಲಕ ಮಂಜುನಾಥ್ ಜೋಶಿಯವರು ಕರ್ನಾಟಕದ ಮನೆಮಾತಾಗಿದ್ದರು.