Sunday, October 5, 2025

Latest Posts

ಈರುಳ್ಳಿ ಮಾಲೆ ಧರಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು

- Advertisement -

Hubli News: ಹುಬ್ಬಳ್ಳಿ: ಈರುಳ್ಳಿ ಬೆಂಬಲ ಬೆಲೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತವಾಗಿ ಕ್ವಿಂಟಲ್ ಈರುಳ್ಳಿಗೆ ೧೨೦೦ ರಿಂದ ೧೫೦೦ ವರೆಗೆ ಇದ್ದು, ೧ ಕ್ವಿಂಟಲ್ ಗೆ ೩೫೦೦ ರಿಂದ ಗರಿಷ್ಠ ೫೦೦೦ ವರೆಗೆ ಈರುಳ್ಳಿಗೆ ಬೆಂಬಲ ಬೆಲೆ ನೀಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು, ಈರುಳ್ಳಿ ರಫ್ತು ನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಈರುಳ್ಳಿಯನ್ನು ಅತಿ ಹೆಚ್ಚು ಬೆಳೆಯುವ ಗದಗ ಜಿಲ್ಲೆಯಲ್ಲಿ ಈರುಳ್ಳಿ ಶೇಖರಣಾ ಘಟಕ ಸ್ಥಾಪನೆ ಸೇರಿದಂತೆ ಮೊದಲಾದ ಬೇಡಿಕೆಗಳಿಗೆ ಅವರು ಸರ್ಕಾರಕ್ಕೆ ಹಕ್ಕೋತ್ತಾಯ ಮಾಡಿದರು.

ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳನ್ನು ಉಗ್ರವಾದ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕಣ್ಣಾ ಉಳ್ಳಾಗಡ್ಡಿ, ಬಸವರಾಜ ಹಡಪದ, ತಿಪ್ಪಣ್ಣಾ ತಲ್ಲೂರ ಸೇರಿದಂತೆ ಉಪಸ್ಥಿತರಿದ್ದರು. ರೈತರು ಕೊರಳಿನಲ್ಲಿ ಉಳ್ಳಾಗಡ್ಡಿ ಧರಸಿದ್ದು ಪತ್ರಿಕಾಗೋಷ್ಠಿಯಲ್ಲಿ ಗಮನ ಸೆಳೆಯಿತು.

‘ರಾಜ್ಯದಲ್ಲಿ ಏನೇ ಕೆಲಸ ಮಾಡಿದರೂ, ಮೋದಿ ಅವರ ಕೆಲಸವನ್ನು ಓವರ್ ಟೇಕ್ ಮಾಡಲು ಸಾಧ್ಯವಿಲ್ಲ’

ಜಗದೀಶ್ ಶೆಟ್ಟರ್‌ಗೆ ಅಮಿತ್ ಶಾ ಏನಂತ ಮಾತು ಕೊಟ್ಟಿದ್ದಾರೆ..?

ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಾಯಕತ್ವದ ಬಗ್ಗೆ ಶೆಟ್ಟರ್ ಹೇಳಿದ್ದೇನು..?

- Advertisement -

Latest Posts

Don't Miss