ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ನೆರವೇರಿಸಿದ ಪ್ರಧಾನಿ ಮೋದಿ

National News: ಪ್ರಧಾನಿ ಮೋದಿ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ನೆರವೇರಿಸಿದರು. ಇಂದು ಗಂಗಾ ಸಪ್ತಮಿಯಾಗಿದ್ದು, ಇಂದೇ ಮೋದಿ ಗಂಗಾರತಿ ನೆರವೇರಿಸಿ, ನಾಮಪತ್ರ ಸಲ್ಲಿಸುವುತ್ತಿರುವುದು ವಿಶೇಷ.

ಇನ್ನು ನಿನ್ನೆ ಪಾಟ್ನಾದಲ್ಲಿ ಪ್ರಧಾನಿ ಮೋದಿ ಗುರುದ್ವಾರ ಪಾಟ್ನಾ ಸಾಹೀಬ್‌ಗೆ ಭೇಟಿ ನೀಡಿದರು. ಅಲ್ಲಿ ಸಿಖರ ಸಾಂಪ್ರದಾಯಿಕ ಬಟ್ಟೆ, ಪೇಟ ತೊಟ್ಟು, ಅಡಿಗೆ ಮಾಡಿ, ಅಲ್ಲಿ ಬಂದ ಭಕ್ತರಿಗೆಲ್ಲ ಊಟ ಬಡಿಸಿದ್ದಾರೆ. ನಂತರ ಗುರುದ್ವಾರದಲ್ಲಿ ಕರ ಪ್ರಸಾದ ಸ್ವೀಕರಿಸಿದ್ದಾರೆ.

ಬಳಿಕ ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ ಮೋದಿ, ಮತಪ್ರಚಾರ ಮಾಡಿದರು. ಈ ವೇಳೆ ಹಲವು ಬಿಜೆಪಿ ನಾಯಕರು, ಕಾರ್ಯಕರ್ತರು ವಾರಣಾಸಿ ಪ್ರಜೆಗಳು ರೋಡ್‌ಶೋನಲ್ಲಿ ಭಾಗವಹಿಸಿದರು. ಹೂಮಳೆ ಸುರಿಸುವ ಮೂಲಕ, ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಾಯಿತು.

ಕಿಡ್ನ್ಯಾಪ್‌ ಕೇಸ್ : ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು ಮಂಜೂರು

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದೆ: ಪ್ರೀತಂಗೌಡ

ನಮ್ಮ ಶಾಸಕರು ಯಾರೂ ಮಾರಾಟವಾಗಲು ತಯಾರಿಲ್ಲ, ಆಪರೇಶನ್ ಕಮಲ ಬಿಜೆಪಿಯ ಹಗಲುಗನಸು: ಸಿಎಂ ಸಿದ್ದರಾಮಯ್ಯ

About The Author