ಪ್ರಿಯಾಂಕ್ ಖರ್ಗೆ ಪತ್ನಿಗೆ ಬ್ರೇನ್ ಟ್ಯೂಮರ್: ಸಹೋದರನಿಗೂ ಅನಾರೋಗ್ಯ..

ಮುಂಬೈ: ಒಂದೆಡೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಅದಕ್ಕಾಗಿ ಪ್ರಚಾರ ಮಾಡಬೇಕು. ಇನ್ನೊಂದೆಡೆ ಪತ್ನಿಯ ಆರೋಗ್ಯ ಮತ್ತು ಒಡಹುಟ್ಟಿದ ಸಹೋದರನ ಆರೋಗ್ಯ ಹಾಳಾಗಿದೆ. ಅವರ ಕಾಳಜಿಯೂ ಮಾಡಬೇಕು. ಹೀಗೆ ಸರಿಯಾಗಿ ಪ್ರಚಾರ ಮಾಡಲೂ ಆಗದೇ, ಪತಿ, ಸಹೋದರನ ಜೊತೆ ಸರಿಯಾಗಿ ಇರಲೂ ಆಗದೇ ಇರುವಂಥ ಪರಿಸ್ಥಿತಿಗೆ ಬಂದಿರುವವರು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ.

ಪ್ರಿಯಾಂಕ್ ಪತ್ನಿ ಶೃತಿ ಖರ್ಗೆಗೆ ಬ್ರೇನ್ ಟ್ಯೂಮರ್ ಆಗಿದೆ. ಈಗಾಗಲೇ ಶಸ್ತ್ರಚಿಕಿತ್ಸೆಯಾಗಿದ್ದು, ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಒಡಹುಟ್ಟಿದ ಸಹೋದರನಿಗೂ ಅನಾರೋಗ್ಯ ಉಂಟಾಗಿದೆ. ಚಿತ್ತಾಪುರ ಅಭ್ಯರ್ಥಿಯಾಗಿರುವ ಪ್ರಿಯಾಂಕ್‌ ಖರ್ಗೆಗೆ ಈ ಕಾರಣದಿಂದಲೇ, ಕ್ಷೇತ್ರದಲ್ಲಿ ಸರಿಯಾಗಿ ಪ್ರಚಾರ ಮಾಡಲು ಆಗುತ್ತಿಲ್ಲ.

ಹಾಗಾಗಿ ಒಂದೆರಡು ದಿನ ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿ ಮಾಡಿದರೆ, ಇನ್ನೆರಡು ದಿನ ಸಹೋದರನ ಜೊತೆಗಿರುತ್ತಾರೆ. ಮತ್ತೆ ಕೆಲ ದಿನ ಕ್ಷೇತ್ರಕ್ಕೆ ಬಂದು ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಿಯಾಂಕ್‌ ಗೆಲುವಿಗಾಗಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಚಿತ್ತಾಪುರದಲ್ಲಿ ಮೇ 6ರಂದು ಬೃಹತ್ ಕಾಂಗ್ರೆಸ್ ಸಮಾವೇಶ ನಡೆಸಲಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ: ಹೆಚ್ಡಿಕೆ ಬಗ್ಗೆ ಭವಿಷ್ಯ ನುಡಿದ ಹೆಚ್ಡಿಡಿ..

‘ಸಮಾಜಘಾತುಕರಿಗೆ ಆಗಬೇಕಾದ ನೋವು, ಬಿಜೆಪಿಗರಿಗೆ ಯಾಕಾಗುತ್ತಿದೆ..?’

ಪದ್ಮಶ್ರೀ ಪುರಸ್ಕೃತ ಸುಕ್ರಿಗೌಡ, ತುಳಸಿಗೌಡರನ್ನ ಭೇಟಿಯಾದ ಮೋದಿ..

About The Author