Friday, October 18, 2024

Latest Posts

ಬಾಬ್ರಿ ಮಸೀದಿ ಧ್ವಂಸದ ಬ್ಯಾನರ್ ತೆರವುಗೊಳಿಸಿದ ಪೊಲೀಸರ ವಿರುದ್ಧ ಹಿಂದೂಪರ ಸಂಘಟನೆ ಆಕ್ರೋಶ

- Advertisement -

Hubballi News: ಹುಬ್ಬಳ್ಳಿ: ಶ್ರೀರಾಮ ಪ್ರತಿಷ್ಠಾಪನೆ ಹೊತ್ತಿನಲ್ಲಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಯಿಂದ ಮತ್ತೊಂದು ಯಡವಟ್ಟು ನಡೆದಿದೆ.

ಹುಬ್ಬಳ್ಳಿ ನಗರದ ಹಳೇ ದುರ್ಗದ ಬೈಲ್ ಸರ್ಕಲ್, ವಿದ್ಯಾನಗರ, ಮರಾಠಗಲ್ಲಿ ಸೇರಿದಂತೆ ವಿವಿಧೆಡೆ ಬಾಬ್ರಿ ಮಸೀದಿ ಧ್ವಂಸದ ಬ್ಯಾನರ್ ಹಾಕಲಾಗಿತ್ತು. ಇದರಲ್ಲಿ ಮಾಜಿ ಶಾಸಕ ಅಶೋಕ್ ಕಾಟವೇ ಬಾಬ್ರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದ ಕೆಲವೊಂದಿಷ್ಟು ಫೋಟೋಗಳನ್ನು ಬ್ಯಾನರ್‌ನಲ್ಲಿ ಹಾಕಲಾಗಿತ್ತು. ಇದೀಗ ಭದ್ರತಾ ದೃಷ್ಟಿಯಿಂದ, ಮುನ್ನೆಚ್ಚರಿಕಾ ಕ್ರಮವಾಗಿ, ರಾತ್ರೋ ರಾತ್ರಿ ಬ್ಯಾನರ್ ತೆರವುಗೊಳಿಸಲಾಗಿದೆ.

ಇದು ಪ್ರಚೋದನಾತ್ಮಕ ಬ್ಯಾನರ್‌ಗಳೆಂದು, ಕೂಡಲೇ ಎಚ್ಚೆತ್ತ ಪೊಲೀಸರು ಬ್ಯಾನರ್ ತೆರವುಗೊಳಿಸಿದ್ದಾರೆ. ಆದರೆ ಪೊಲೀಸರ ಈ ನಡೆಗೆ, ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದೆ. ಈ ಬಗ್ಗೆ ಮಾತನಾಡಿರುವ ಪ್ರಮೋದ್ ಮುತಾಲಿಕ್, ಹಳೇ ಹುಬ್ಬಳ್ಳಿಯಲ್ಲಿ ಇಡೀ ದೇಶದಲ್ಲಿ ಜನತೆ ಅವರವರೇ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

ಇದರಲ್ಲಿ ಬ್ಯಾನರ್ ಕಟ್ಟುವುದು ಕೂಡ ಒಂದು. ಇಂದಿನ ಪೀಳಿಗೆಗೆ ಅಯೋಧ್ಯೆಯ ಮಂದಿರ ನಿರ್ಮಾಣದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಬ್ಯಾನರ್ ಕಟ್ಟಲಾಗಿದೆ. ಇದರಲ್ಲಿ ಏನು ತಪ್ಪಿದೆ..? ಇದನ್ನು ಯಾರು ಕೆಣಕ್ಕುತ್ತಿಲ್ಲ ಕಾಂಗ್ರೆಸ್ ನವರೇ ಗಲಾಟೆಗೆ ಪ್ರಚೋದನೆ ನೀಡುತ್ತಿದೆ. ಇದಕ್ಕೆ ನನ್ನ ಧಿಕ್ಕಾರವಿದೆ.. ಈ ಕೂಡಲೇ ಅದೇ ಸ್ಥಳದಲ್ಲಿ ಬ್ಯಾನರ್ ಹಾಕಬೇಕು. ಶಿವಮೊಗ್ಗದಲ್ಲಿ ಹಾಕಿದ ಔರಂಗಜೇಬ್ ನ ಕಟೌಟ್ ನನ್ನು ಯಾರು ಪ್ರಶ್ನೆ ಮಾಡಲಿಲ್ಲ. ಅವರ ಮೇಲೆ ಕೇಸ್ ಹಾಕಿಲಿಲ್ಲ. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಮುತಾಲಿಕ್ ಹೇಳಿದ್ದಾರೆ.

‘ಜ.22ಕ್ಕೆ ವಿಶೇಷ ವಿಮಾನದಲ್ಲಿ ನಾನು ರಾಮಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ಹೋಗಲಿದ್ದೇನೆ.’

‘ದೇವೇಗೌಡರು ಈ ರಾಜ್ಯದಲ್ಲಿ ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದ್ರು’

‘ಗಾಂಧಿಜಿಯವರ ಪಾದಯಾತ್ರೆ ಬಳಿಕ ವಿಶ್ವದಲ್ಲಿಯೇ ಭಾರತ್ ಜೋಡೋ ಯಾತ್ರೆ ಅತೀ ದೊಡ್ಡ ಯಾತ್ರೆ’

- Advertisement -

Latest Posts

Don't Miss