Sunday, March 3, 2024

Latest Posts

ನಾವು ಗೆದ್ದಿದ್ದೀವಿ ಅಂತ ಬೀಗಲ್ಲ- ವಿಶ್ವಕ್ಕೆ ಮಂಡ್ಯದ ಬೆಲೆ ಗೊತ್ತಾಗಿದೆ- ರಾಕ್ ಲೈನ್ ವೆಂಕಟೇಶ್

- Advertisement -

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸ್ವಾಭಿಮಾನವನ್ನ ಎತ್ತಿಹಿಡಿದಿದೆ ಅಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.

ಚುನಾವಣೆಯಲ್ಲಿ ಸುಮಲತಾ ಗೆಲುವು ಕುರಿತಾಗಿ ಮಾತನಾಡಿದ ರಾಕ್ ಲೈನ್, ಮಂಡ್ಯದ ಮತದಾರರು ಸುಮಲತಾರಿಗೆ ಗೆಲುತಂದುಕೊಟ್ಟಿದ್ದಾರೆ, ಮಂಡ್ಯ ಜನತೆಗೆ ನನ್ನ ಧನ್ಯವಾದ. ಇವತ್ತು ಅಂಬರೀಶ್ ಇದ್ದಿದ್ದರೆ ಬಹಳ ಖುಷಿ ಪಡುತ್ತಿದ್ದರು. ರೈತರ ಸಂಘ, ಬಿಜೆಪಿ, ಕಾಂಗ್ರೆಸ್, ಯಶ್, ದರ್ಶನ್ ಸೇರಿದಂತೆ ಎಲ್ಲರೂ ಸುಮಲತಾ ಗೆಲುವಿಗೆ ದುಡಿದ್ದಾರೆ.

ನಾವು ಗೆದ್ದಿದ್ದೀವಿ ಅಂತ ಮೀಸೆ ತಿರುವಲ್ಲ, ಹಾಗೇ ಸೋತಿದ್ದರೆ ಮನೆಯಲ್ಲಿ ಕೂರುತ್ತಿರಲಿಲ್ಲ. ಗೆದ್ದ ಸಂತೋಷವೇನೋ ಇದೆ. ಆದ್ರೆ ನಾವು ಯಾರನ್ನೂ ದೇಷಿಸೋದಾಗಲೀ, ಟೀಕಿಸೋದಾಗಲೀ ಮಾಡೋದಿಲ್ಲ. ಅಂಬರೀಶ್ ಎಲ್ಲಾ ಪಕ್ಷದ, ಎಲ್ಲಾ ವರ್ಗದ ಜನರನ್ನು ಪ್ರೀತಿಸುತ್ತಿದ್ರು. ಇಡೀ ವಿಶ್ವಕ್ಕೆ ಮಂಡ್ಯ ಜಿಲ್ಲೆ ಏನು ಅಂತ ಗೊತ್ತಾಗಿದೆ. ಮಂಡ್ಯದ ಮಹಿಳೆಯರು ತಮ್ಮ ತಂಗಿ, ತಮ್ಮ ಮಗಳು ಅಂತ ಸುಮಲತಾರಿಗೆ ಗೆಲುವು ತಂದುಕೊಟ್ಟಿದ್ದಾರೆ ಅಂತ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.

- Advertisement -

Latest Posts

Don't Miss