Friday, July 11, 2025

Latest Posts

2 ಲಕ್ಷ ಬಂಡವಾಳ ಹಾಕಿ ಮಾಡಬಹುದಾದ ಲಾಭದಾಯಕ ಉದ್ಯಮಗಳಿವು.. ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು 2 ಲಕ್ಷ ಬಂಡವಾಳ ಹಾಕಿ ಮಾಡಬಹುದಾದ 5 ಉದ್ಯಮಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಇನ್ನುಳಿದ ಉದ್ಯಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಹಿಟ್ಟಿನ ಗಿರಣಿ: ಹಲವು ಮನೆಗಳಲ್ಲಿ ಪ್ರತಿದಿನ ಚಪಾತಿ, ರೊಟ್ಟಿ ತಯಾರಿಸಲೇಬೇಕು. ಇನ್ನು ಇದನ್ನ ತಯಾರಿಸೋಕ್ಕೆ, ಹಿಟ್ಟಿನ ಅವಶ್ಯಕತೆ ಖಂಡಿತ ಇದೆ. ಹಾಗಾಗಿ ನೀವು ಮನೆಯಲ್ಲೇ ಹಿಟ್ಟು ಬೀಸುವ ಮಷಿನ್ ತರಿಸಿಕೊಂಡು, ಗೋದಿ, ರಾಗಿ, ಅಕ್ಕಿ, ಜೋಳದ ಹಿಟ್ಟುಗಳನ್ನ ತಯಾರಿಸಿ, ಪ್ಯಾಕ್ ಮಾಡಿ ಮಾರಬಹುದು. ಆದ್ರೆ ನಿಮ್ಮ ಹಿಟ್ಟು ಉತ್ತಮ ಕ್ವಾಲಿಟಿಯದ್ದಾಗಿರಬೇಕು. ಆ ಮಷಿನ್‌ಗೆ 1ರಿಂದ ಒಂದೂವರೆ ಲಕ್ಷದತನಕ ಇರುತ್ತದೆ.

ಮೊಬೈಲ್ ಟೆಂಪರ್ಡ್ ಗ್ಲಾಸ್ ತಯಾರಿಕೆ: ಈಗಿನ ಕಾಲದಲ್ಲೂ ಮೊಬೈಲ್ ಬಳಸದ ವ್ಯಕ್ತಿ ಇದ್ರೆ, ಅದು ಪವಾಡವೇ ಸರಿ. ಯಾಕಂದ್ರೆ ಊಟ ಬಿಟ್ಟಾದ್ರೂ ಇರ್ತೀವಿ ಆದ್ರೆ ಮೊಬೈಲ್ ಬಿಟ್ಟಲ್ಲ ಅನ್ನೋ ಕಾಲ ಇದು. ಹಾಗಾಗಿ ಮೊಬೈಲ್‌ಗೆ ಸಂಬಂಧಿಸಿದಂತೆ ಯಾವುದೇ ಉದ್ಯಮ ಆರಂಭಿಸಿದ್ರೂ, ಅದರಿಂದ ಲಾಭ ಬಂದೇ ಬರುತ್ತದೆ. ಮೊಬೈಲ್ ಟೆಂಪರ್ಡ್ ಗ್ಲಾಸ್ ತಯಾರಿಸಲು ಕೂಡ ಮಷಿನ್ ಅವಶ್ಯಕತೆ ಇದೆ. ಒಂದೂವರೆ ಲಕ್ಷದಿಂದ 2 ಲಕ್ಷದವರೆಗೆ ಈ ಮಷಿನ್ ಲಭ್ಯವಿದೆ.

ಅಗರಬತ್ತಿ ಉದ್ಯಮ: ಅಗರಬತ್ತಿ ತಯಾರಿಸುವ ಮಷಿನ್ ಕೊಂಡುಕೊಂಡು, ನೀವು ಈ ಉದ್ಯಮವನ್ನ ಶುರು ಮಾಡಬಹುದು. ಒಂದುವರೆ ಲಕ್ಷದ ತನಕ ಈ ಮಶಿನ್ ಬೆಲೆ ಇರುತ್ತದೆ. ನಾವಿಲ್ಲಿ ಮಾಹಿತಿ ಕೊಡುತ್ತಿರುವ ಮಷಿನ್‌ಗಳನ್ನ ನೀವು ಮನೆಯಲ್ಲೇ ಬಳಸಬಹುದು. ಆದ್ರೆ ಅದಕ್ಕಾಗಿ ದೊಡ್ಡ ರೂಮ್ ಬೇಕಾಗುತ್ತದೆ.

ನೂಡಲ್ಸ್ ಮೇಕಿಂಗ್ ಬ್ಯುಸಿನೆಸ್: ಮಕ್ಕಳಿಂದ ಹಿಡಿದು ಹಿರಿಯರವರೆಗೂ ನೂಡಲ್ಸನ್ನ ಹಲವರು ಇಷ್ಟಪಡ್ತಾರೆ. ಹಾಗಾಗಿ ನೀವು ಸ್ವಚ್ಛತೆ ಕಾಪಾಡಿ, ಕ್ವಾಲಿಟಿಯೊಂದಿಗೆ ರುಚಿಕರ ನೂಡಲ್ಸ್ ತಯಾರಿಸಿ, ಮಾರಿದ್ರೆ, ಲಾಭ ಕಟ್ಟಿಟ್ಟ ಬುತ್ತಿ. ನೂಡಲ್ಸ್ ಮಾಡೋಕ್ಕೆ ಮಷಿನ್ ಕೂಡ ಲಭ್ಯವಿದೆ. ಒಂದೂವರೆ ಲಕ್ಷಕ್ಕೆ ಈ ಮಷಿನ್ ಸಿಗುತ್ತದೆ. ನೀವು ಇದರಲ್ಲಿ ನೂಡಲ್ಸ್ ಜೊತೆ, ಶ್ಯಾವಿಗೆ ಕೂಡ ತಯಾರು ಮಾಡಬಹುದು.

ಹಪ್ಪಳದ ಉದ್ಯಮ: ಹಪ್ಪಳದ ಉದ್ಯಮ ಮಾಡುವುದು ಕಷ್ಟವಲ್ವಾ..? ಅದಕ್ಕೆ ಒಂದಿಷ್ಟು ಮಹಿಳೆಯರು ಸೇರಬೇಕು. ಅವರು ಸರಿಯಾಗಿ ಹಪ್ಪಳ ಮಾಡದಿದ್ದಲ್ಲಿ, ನಷ್ಟವಾಗಬಹುದು. ಮತ್ತು ಅವರು ಸ್ವಚ್ಛತೆಯನ್ನ ಕಾಪಾಡ್ತಾರಾ ಅನ್ನೋ ಹತ್ತು ಹಲವು ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸಬಹುದು. ಆದ್ರೆ ಇದೆಲ್ಲ ಈ ಹಿಂದೆ ನಡೆಯುತ್ತಿದ್ದ ಕೆಲಸ. ಈಗ ಹಪ್ಪಳದ ಮಷಿನ್ ಸಿಗುತ್ತದೆ. ಇದರಲ್ಲಿ ಹಿಟ್ಟು ಹಾಕಿದರೆ, ರೌಂಡ್ ರೌಂಡ್ ಪಾಪಡ್ ನಿಮ್ಮ ಕೈ ಸೇರುತ್ತದೆ. ಈ ಮಷಿನ್ ಬೆಲೆ 1 ಲಕ್ಷದ ತನಕ ಇರುತ್ತದೆ. ಇದಕ್ಕೆ ಒಂದಿಬ್ಬರನ್ನ ಕೆಲಸಕ್ಕೆ ಇಟ್ಟುಕೊಂಡರೆ ಸಾಕು.

- Advertisement -

Latest Posts

Don't Miss