ಒಡಿಶಾ : ಗಣರಾಜ್ಯೋತ್ಸವ(Republic Day) ಆಚರಣೆ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಚುನಾವಣಾ ಪ್ರಚಾರ(Election Campaign) ಮಾಡಬಾರದು ಎಂದು ಒಡಿಶಾ ರಾಜ್ಯ ಚುನಾವಣಾ ಆಯೋಗ(Odisha State Election Commission) ತಿಳಿಸಿದೆ. ಒಡಿಶಾದಲ್ಲಿ ಪಂಚಾಯತ್ ಚುನಾವಣೆ(Panchayat election) ನಡೆಯಲಿರುವ ಕಾರಣ, ಅಲ್ಲಿ ನೀತಿ ಸಂಹಿತೆ ಜಾರಿ(Enforcement of Code of Conduct)ಯಲ್ಲಿದೆ. ಹೀಗಾಗಿ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು(Political parties)ಮತ್ತು ನೇತಾರರು ಚುನಾವಣಾ ಪ್ರಚಾರ ಹಾಗೂ ಚುನಾವಣಾ ಭಾಷಣ ಮಾಡುವಂತಿಲ್ಲ, ಆದರೆ ಗಣರಾಜ್ಯೋತ್ಸವ ಆಚರಣೆಗೆ ಹಾಗೂ ಸಾಂಸ್ಕೃತಿಕ ಸಭೆಗೆ(cultural gathering)ಅದೇ ರೀತಿಯಲ್ಲಿ ನಿರ್ಬಂಧವಿಲ್ಲ. ಗಣರಾಜ್ಯೋತ್ಸವ ಆಚರಣೆಯಲ್ಲಿ ನಾಯಕರು, ಸಚಿವರು, ಅಧಿಕಾರಿಗಳು ಭಾಗವಹಿಸುವುದಕ್ಕೆ ಯಾವುದೇ ನಿರ್ಬಂಧವಿಲ್ಲ, ಎಂದು ಒಡಿಶಾ ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.