Hubballi News: ಹುಬ್ಬಳ್ಳಿ: ಅದು ನೂರಾರು ಕೋಟಿ ಬೆಲೆ ಬಾಳುವ ಆಸ್ತಿ. ಆದರೆ ಕಡಿಮೆ ದುಡ್ಡಿಗೆ ರಿಯಲ್ ಎಸ್ಟೇಟ್ ಕುಳಗಳ ಪಾಲಾಗುತ್ತಿದೆ. ಕೇಂದ್ರ ಸರ್ಕಾರದ ಮೇಲುಸ್ತುವಾರಿಯಲ್ಲಿರುವ ಇಲಾಖೆಯಲ್ಲಿಯೇ ಇಂತಹದೊಂದು ಬೇಜವಾಬ್ದಾರಿ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲುಸ್ತುವಾರಿಯಲ್ಲಿರುವ ಭಾರತೀಯ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದ ಸರಿಸುಮಾರು 300 ಕೋಟಿ ರೂಪಾಯಿ ಬೆಲೆಬಾಳುವ ಭಾರಿ ಮೌಲ್ಯದ ಜಮೀನು ಕೇವಲ 83 ಕೋಟಿ ರೂ.ಗಳಿಗೆ ರಿಯಲ್ ಎಸ್ಟೇಟ್ ಕುಳಗಳ ಪಾಲಾಗುವ ಭೀತಿ ಎದುರಾಗಿದೆ. ಹೌದು.. ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಇರುವ ಹುಬ್ಬಳ್ಳಿಯ ರೈಲು ನಿಲ್ದಾಣದಿಂದ ಕೇವಲ 4 ಕಿಮೀ ದೂರದಲ್ಲಿರುವ ಹಾಗೂ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣದಿಂದ 2 ಕಿಮೀ ದೂರ ಇರುವ ಹುಬ್ಬಳ್ಳಿಯ ಎಂಟಿಎಸ್ ಕಾಲನಿಯ ಸಂಪೂರ್ಣ 13 ಎಕರೆ ಭೂಮಿ ಹಾಗೂ ಹಾಲಿ ಇರುವ ಕಟ್ಟಡಗಳ ಸಹಿತ ಈಗ 83 ಕೋಟಿಗೆ 99 ವರ್ಷಗಳ ಲೀಸ್ ನೀಡಲು ಮುಂದಾಗಿದೆ. ಹುಬ್ಬಳ್ಳಿಯ ನೂರಾರು ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಆಸ್ತಿ ಅಗ್ಗದ ದರದಲ್ಲಿ ಪರಭಾರೆಯಾಗುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಎಂಟಿಎಸ್ ಕಾಲನಿಯ 13 ಎಕರೆ ಭೂಮಿಯನ್ನು 83 ಕೋಟಿಗೆ 99 ವರ್ಷ ಲೀಸ್ ಗೆ ನೀಡಲು ರೈಲ್ವೆ ಇಲಾಖೆ ಮುಂದಾಗಿದ್ದು, ಜನವರಿ 18ರಂದು ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹರಾಜು ಪ್ರಕ್ರಿಯೆಯಲ್ಲಿ
ಪ್ರಭಾವಿಗಳ ಕೈವಾಡದ ಶಂಕೆ ವ್ಯಕ್ತವಾಗಿದ್ದು, ರೈಲು ಭೂ ಅಭಿವೃದ್ಧಿ ಪ್ರಾಧಿಕಾರದಿಂದ 13 ಎಕರೆ ಜಾಗವನ್ನು ಲೀಸ್ ಗೆ ನೀಡಲು ಪ್ಲಾನ್ ಮಾಡಿ 13 ಎಕರೆ 83 ಕೋಟಿ ರೂಪಾಯಿಗಳಿಗೆ 99 ವರ್ಷ ಲೀಸ್ ಕೊಡಲು ಪ್ಲಾನ್ ಮಾಡಿದ್ದಾರೆ. ಎಂಟಿಎಸ್ ಕಾಲನಿಯ ಸುತ್ತಲಿನ ಪ್ರದೇಶದ ಅತ್ಯಂತ ಬೆಲೆ ಬಾಳುವ ಜಾಗ. ರಾಷ್ಟ್ರೀಯ ಹೆದ್ದಾರಿ ಹೊಂದಿಕೊಂಡರು ವಾಣಿಜ್ಯ ಬಳಕೆಯ ಜಾಗ. ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರು ಎಂಟಿಎಸ್ ಕಾಲೋನಿ. ದುಬಾರಿ ಬೆಲೆಯ ಭೂಮಿಯನ್ನು ಅಗ್ಗದ ದರಕ್ಕೆ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.
ಒಟ್ಟಿನಲ್ಲಿ ನೈರುತ್ಯ ರೈಲ್ವೆ ಪ್ರಾಧಿಕಾರದ ಅಧಿಕಾರಿಗಳ ಬಗ್ಗೆ ಮೂಡಿದೆ ಸಂಶಯದ ಗುಮಾನಿ ಎದುರಾಗಿದ್ದು, ಈಗಾಗಲೇ ಎರಡು ಬಾರಿ ಟೆಂಡರ್ ಕರೆದಿದ್ದ ರೈಲ್ವೆ ಪ್ರಾಧಿಕಾರ, ಪ್ರತಿ ಎಕರೆಗೆ ಸರಾಸರಿ 6.5 ಕೋಟಿ ಮೌಲ್ಯ ಕೋಟ್ ಮಾಡಿತ್ತು. ಭಾರಿ ಬೆಲೆಯ ಜಮೀನಾಗಿ ಮಾರ್ಪಟ್ಟಿದೆ. ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿ ಹೊಂದಿರುವ ರೈಲ್ವೆ ಇಲಾಖೆಗೆ ನಾನಾ ರೀತಿಯಲ್ಲಿ ಜಾಗೆಯ ಅವಶ್ಯಕತೆ ಇದ್ದರೂ ನಗರದ ಹೃದಯಭಾಗದಲ್ಲಿರುವ ಈ ಜಮೀನನ್ನು 99 ವರ್ಷಗಳ ಕಾಲ ಲೀಸ್ ಆಧಾರದ ಮೇಲೆ ಖಾಸಗಿ ರಿಯಲ್ ಎಸ್ಟೇಟ್ ವ್ಯಕ್ತಿಗಳಿಗೆ ಹರಾಜು ಮಾಡಲು ಮುಂದಾಗಿರುವುದು ನಾನಾ ಸಂಶಯಗಳಿಗೆ ಕಾರಣವಾಗಿದೆ.
ಶಾನುಬೋಗರ ಮಾತು ಕೇಳಿದ್ದರೆ ನಾನು ಕುರಿ ಕಾಯ್ಕೊಂಡು ಇರಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ
‘ನನ್ನ ಕನಸಿನಲ್ಲಿ ಬಂದ ರಾಮ, ನಾನು ಜ.22ರಂದು ಅಯೋಧ್ಯೆಗೆ ಹೋಗುವುದಿಲ್ಲವೆಂದು ಹೇಳಿದ್ದಾನೆ’