Friday, December 27, 2024

Latest Posts

ಮನೆಯಲ್ಲೇ ಪ್ರೋಟಿನ್ ಪೌಡರ್ ಮಾಡುವುದು ಹೇಗೆ..?

- Advertisement -

ವಿದ್ಯಾರ್ಥಿಗಳ ಬುದ್ಧಿ ಶಕ್ತಿ ಉತ್ತಮವಾಗಿರಬೇಕು ಅಂದ್ರೆ ಪೌಷ್ಟಿಕಾಂಶ ಯುಕ್ತ ಆಹಾರ ಸೇವಿಸಬೇಕು. ಅಂಥ ಪೌಷ್ಟಿಕಾಂಶ ಯುಕ್ತ ಆಹಾರಗಳಲ್ಲಿ ಡ್ರೈಫ್ರೂಟ್ಸ್‌ ಕೂಡ ಒಂದು. ಆದ್ರೆ ಕೆಲವರು ಡ್ರೈಫ್ರೂಟ್ಸ್‌ನ್ನ ಡೈರೆಕ್ಟ್ ಆಗಿ ತಿನ್ನಲು ಇಚ್ಛಿಸುವುದಿಲ್ಲ. ಅಂಥವರಿಗೆ ಪ್ರೋಟಿನ್ ಪೌಡರ್ ಮಾಡಿ, ಅದನ್ನ ಹಾಲಿನಲ್ಲಿ ಹಾಕಿ ಕೊಡಬೇಕು. ಆಗ ಒಣ ಹಣ್ಣಿನ ಪೋಷಕಾಂಶದ ಜೊತೆಗೆ ಹಾಲು ಕೂಡ ದೇಹ ಸೇರುತ್ತದೆ. ಹಾಗಾದ್ರೆ ಪ್ರೋಟಿನ್ ಪೌಡರ್ ಮಾಡೋದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಒಂದು ಕಪ್ ಶೇಂಗಾ, ಒಂದು ಕಪ್ ಬಾದಾಮಿ, ಒಂದು ಕಪ್ ಪಿಸ್ತಾ, ಒಂದು ಕಪ್ ಗೋಡಂಬಿ, ಒಂದು ಕಪ್ ವಾಲ್ನಟ್ ತೆಗೆದುಕೊಳ್ಳಿ. ಈ ಎಲ್ಲವನ್ನೂ ಒಂದೊಂದಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿದರೆ, ಪ್ರೋಟಿನ್ ಪೌಡರ್ ರೆಡಿ. ಒಂದು ಸ್ಪೂನ್ ಪ್ರೋಟಿನ್ ಪೌಡರ್‌ನ್ನು ಒಂದು ಗ್ಲಾಸ್ ಹಾಲಿಗೆ ಸೇರಿಸಿ ಕುಡಿಯಬೇಕು. ಬೆಳಿಗ್ಗೆ ಶಾಲೆಗೆ ಹೋಗುವ ಹೊತ್ತಿಗೆ ಕುಡಿದರೆ ಒಳ್ಳೆಯದು.

ಇನ್ನು ದೊಡ್ಡವರು ಕೂಡ ಈ ಪ್ರೋಟಿನ್ ಪೌಡರ್ ಬಳಸಬಹುದು. ಸೌಂದರ್ಯ ವರ್ಧನೆಗೆ ರಾತ್ರಿ ಮಲಗುವ ವೇಳೆ ಪ್ರೋಟಿನ್ ಪೌಡರ್ ಮತ್ತು ಹಾಲಿನ ಜೊತೆ, ಸ್ವಲ್ಪ ಕೇಸರಿ ದಳವನ್ನು ಸೇರಿಸಿ ಕುದಿಸಿ ಕುಡಿಯಿರಿ. ಇನ್ನು ಜಿಮ್‌ಗೆ ಹೋಗಿ ದೇಹ ದಂಡಿಸುವವರು, ಈ ಪ್ರೋಟಿನ್ ಪೌಡರ್ ಜೊತೆ ಎರಡು ಖರ್ಜೂರ, ಅಂಜೂರ ಮತ್ತು ಒಂದು ಬಾಳೆ ಹಣ್ಣು ಸೇರಿಸಿ ಮಿಕ್ಸಿ ಮಾಡಿ, ಬನಾನಾ ಮಿಲ್ಕ್‌ಶೇಕ್ ಮಾಡಿ ಕುಡಿಯಬಹುದು.

- Advertisement -

Latest Posts

Don't Miss