Hubballi News: ಹುಬ್ಬಳ್ಳಿ: ವಿದ್ಯುತ್ ದರ ಏರಿಕೆ ಖಂಡಿಸಿ, ಕರ್ನಾಟಕ ಬಂದ್ ಕರೆ ಹಿನ್ನೆಲೆ, ವಿವಿಧ ವಾಣಿಜ್ಯೋದ್ಯಮಿಗಳಿಂದಲೂ ಬಂದ್‌ಗೆ ಉತ್ತಮ ಬೆಂಬಲ ಸಿಕ್ಕಿದೆ. ಹಾಗಾಗಿ ಧಾರವಾಡ ಜಿಲ್ಲೆಯ ಬಹುತೇಕ ಉದ್ಯಮ ಇಂದು ಸ್ಥಬ್ಧವಾಗಿದೆ.
ಕೈಗಾರಿಕೆ, ಟ್ರಾನ್ಸ್ ಪೋರ್ಟ್, ಅಟೋಮೊಬೈಲ್, ಜವಳಿ ವ್ಯಾಪಾರಸ್ಥರು ಸೇರಿದಂತೆ ವಿವಿಧ ವ್ಯಾಪಾರ ವಹಿವಾಟು ಸ್ಥಗಿತವಾಗಿದ್ದು, ಕೈಗಾರಿಕೆಗಳನ್ನ ಬಂದ್ ಮಾಡಿ ಉದ್ಯಮಿಗಳು ಪ್ರತಿಭಟನೆಗೆ ಇಳಿದಿದ್ದರು. ತುರ್ತು ಸೇವೆ ಹಾಗೂ ಸಾರಿಗೆ ವ್ಯವಸ್ಥೆ ಹೊರತುಪಡಿಸಿ ವ್ಯಾಪಾರ ವಹಿವಾಟು ಎಲ್ಲವೂ ಬಂದ್ ಆಗಿದ್ದವು.
ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಉದ್ಯಮಿಗಳು, ಪ್ರತಿಭಟನೆ ನಡೆಸಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಚೇರಿಯಿಂದ ತಹಶೀಲ್ದಾರ ಕಚೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಾರ್, ಹೋಟೆಲ್, ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಂಸ್ಥೆಗಳಿಂದ ಬಂದ್ ಗೆ ಬೆಂಬಲ ಸಿಕ್ಕಿದೆ. ಇನ್ನು ಪ್ರತಿಭಟನಾಕಾರರು ಚಿಮಣಿ ಹಿಡಿದು ವಿಭಿನ್ನವಾಗಿ, ಪ್ರತಿಭಟನೆ ಮಾಡಿದ್ದು, ಎಲ್ಲರ ಗಮನ ಸೆಳೆಯಿತು.
ಬ್ರ್ಯಾಂಡ್ ಬೆಂಗಳೂರು ಅಭಿಯಾನದ ವೆಬ್‌ಸೈಟ್ ಅಧಿಕೃತ ರಿಲೀಸ್: ಟ್ವೀಟ್ ಮೂಲಕ ಡಿಕೆಶಿ ವಿವರಣೆ
ಕೋಲಾರದಲ್ಲಿ ಸಚಿವ ಬೋಸರಾಜು.! KC ವ್ಯಾಲಿ, ಅಕ್ಕಿ ಬಗ್ಗೆ ಹೇಳಿದ್ದೇನು.?