Saturday, July 12, 2025

Latest Posts

ಧಾರವಾಡ ವಿದ್ಯಾಗಿರಿ ಠಾಣೆ ಎದುರು ಪ್ರತಿಭಟನೆ: ಫಯಾಜ್ ಬೆಂಬಲಿಸಿದವರು ಪೊಲೀಸ್ ವಶಕ್ಕೆ

- Advertisement -

Dharwad News: ಧಾರವಾಡ: ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಮೊನ್ನೆಯಷ್ಟೇ ನಡೆದ ನೇಹಾ ಹಿರೇಮಠ ಹತ್ಯೆ ಸಂಬಂಧ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ನೇಹಾ ಹತ್ಯೆ ಮಾಡಿದ ಫಯಾಜ್‌ನನ್ನು ಗಲ್ಲಿಗೇರಿಸುವಂತೆ ಪ್ರತಿಭಟನೆ ನಡೆಯುತ್ತಿರುವಾಗ ಧಾರವಾಡದಲ್ಲಿ ಇಬ್ಬರು ಅನ್ಯ ಕೋಮಿನ ಯುವಕರು ಫಯಾಜ್‌ನನ್ನು ಬೆಂಬಲಿಸಿ ಜಸ್ಟೀಸ್ ಫಾರ್ ಟ್ರು ಲವ್ ಎಂಬ ಸಂದೇಶ ಹಾಕಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿ ಬಿಟ್ಟಿದ್ದಾರೆ.

ಈ ಪ್ರಕರಣವನ್ನು ಖಂಡಿಸಿ ಬಜರಂಗದಳದ ಕಾರ್ಯಕರ್ತರು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೇ ಫಯಾಜ್‌ನನ್ನು ಬೆಂಬಲಿಸಿ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಹರಿಬಿಟ್ಟ ಧಾರವಾಡದ ಸಾದಿಕ್ ಇಮಾಮ್ ಸಾಬ್ ತಡಕೋಡ ಹಾಗೂ ಆದಿಲ್ ಎಂಬ ಇಬ್ಬರು ಯುವಕರನ್ನು ಬಜರಂಗದಳದ ಕಾರ್ಯಕರ್ತರೇ ವಿದ್ಯಾಗಿರಿ ಠಾಣೆ ಪೊಲೀಸರಿಗೆ ಒಪ್ಪಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ರಾಜ್ಯದೆಲ್ಲೆಡೆ ನೇಹಾ ಹಿರೇಮಠ ಹತ್ಯೆ ಸಂಬಂಧ ಪ್ರತಿಭಟನೆಗಳು ನಡೆಯುತ್ತಿರುವಾಗ ಧಾರವಾಡದ ಇಬ್ಬರು ಯುವಕರು ಫಯಾಜ್‌ನನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿಬಿಟ್ಟಿದ್ದಕ್ಕೆ ಇದೀಗ ದೊಡ್ಡಮಟ್ಟದಲ್ಲೇ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಇಬ್ಬರು ಯುವಕರನ್ನು ವಶಕ್ಕೆ ಪಡೆದಿರುವ ವಿದ್ಯಾಗಿರಿ ಠಾಣೆ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ರಾಜ್ಯದಲ್ಲಿ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು: ಚಕ್ರವರ್ತಿ ಸೂಲಿಬೆಲೆ

ವಿಧಾನಸಭೆ ಸೋಲನ್ನ ಬದಿಗಿಡೋಣ.. ಲೋಕಸಭೆಯಲ್ಲಿ Modi ಗೆಲ್ಲಿಸೋಣ: ಬಿ.ವೈ.ವಿಜಯೇಂದ್ರ

ಕಾಂಗ್ರೆಸ್ 28 ಸ್ಥಾನ ಸೋತರೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಖುಷಿ: ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss