ಹಾಸನ: ಹಾಸನ ನಗರಸಭೆ ಅಧ್ಯಕ್ಷರಾಗಿ ಮೋಹನ್ ಅವರು ಬಂದು ೨೦ ತಿಂಗಳೆ ಕಳೆದಿದ್ದು, ಇದುವರೆಗೂ ಕೇವಲ ಎರಡು ಸಭೆ ನಡೆಸಲಾಗಿದೆ. ಮಾರ್ಚ್ ೩೦ ರಂದು ನಡೆದಂತಹ ಬಜೆಟ್ ಮೀಟಿಂಗ್ ನಲ್ಲಿ ನಾವು ಯಾವ ವಿಷಯ ಒಪ್ಪಿಕೊಂಡಿಲ್ಲ ಅದನ್ನೆಲ್ಲಾ ಸರ್ವಾನುಮತ ಎಂದು ಬರೆದುಕೊಂಡಿದ್ದಾರೆ. ಕಳೆದ ತಿಂಗಳು ೧೦ ರಂದು ನಡೆದ ಕಳೆದ ಸಭೆಯಲ್ಲಿ ವಿಷಯವಾರು ಚರ್ಚೆ ಮಾಡಿ ಯಾವ ವಿಷಯ ಒಪ್ಪಿಕೊಳ್ಳಬೇಕು ಮತ್ತು ಬೇಡ ಎಂಬುದಕ್ಕೆ ಕೈ ಎತ್ತುವುದರ ಮೂಲಕ ತೋರಿಸಿದ್ದರೂ ಸಹ ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರು ಅಕ್ರಮ ಕೈಗೊಂಡಿರುವ ಎಲ್ಲಾದಕ್ಕೂ ಬಿಲ್ ಮಾಡಿಕೊಂಡಿದ್ದು, ಒಪ್ಪದಿರುವ ವಿಷಯಕ್ಕೂ ಪೇಮೆಂಟ್ ಮಾಡಿಕೊಂಡಿರುವುದಾಗಿ ಗಂಭೀರವಾಗಿ ಆರೋಪಿಸಿದರು.
ನೀರು ಎಂದುಕೊಂಡು ಡಿಸೇಲ್ ಕುಡಿದು ಸಾವನ್ನಪ್ಪಿದ ಕಂದಮ್ಮ..
ಇನ್ನು ಲೋಕಾಪಯೋಗಿ ಇಲಾಖೆಯಲ್ಲಿ ಆಗದಿರುವ ಕೆಲಸಕ್ಕೂ ಕೂಡ ನಗರಸಭೆಯಲ್ಲಿ ಕಳ್ ಬಿಲ್ ಮಾಡಿರುವದನ್ನೆಲ್ಲಾ ನಾವುಗಳು ಪತ್ತೆ ಹಚ್ಚಿ ಇದನ್ನೆಲ್ಲಾ ಲೋಕಾಯುಕ್ತ ಇಲಾಖೆಗೆ ತನಿಖೆ ಮಾಡಲು ಒಪ್ಪಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಸಚಿವರಿಗೆ, ಡಿಎಂಗೆ ಬರೆದಿರುವುದರಿಂದ ನಡವಳಿಕೆ ಕೊಡುತ್ತಿಲ್ಲ. ಕೊಡುವಂತೆ ಮನವಿ ಕೊಡಲಾಗಿದ್ದರೂ ಕೂಡ ೭ ದಿನ ಕಳೆದರೂ ಕೊಟ್ಟಿಲ್ಲ ಎಂದು ದೂರಿದ ಅವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಾವುಗಳು ಪ್ರತಿಭಟನೆ ಮೂಲಕ ಲೋಕಾಯುಕ್ತ ಇಲಾಖೆಗೆ ಒಪ್ಪಿಸಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ, ಪೌರಾಡಳಿತ ಸಚಿವರಿಗೆ, ಜಿಲ್ಲಾ ಸಚಿವರಿಗೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಅಫ್ಘಾನಿಸ್ತಾನದ ಶಾಲೆಯೊಂದರಲ್ಲಿ ಬಾಂಬ್ ಸ್ಪೋಟ, 10ಕ್ಕೂ ಹೆಚ್ಚು ಮಕ್ಕಳು ಸಾವು..
ಪ್ರತಿಭಟನಯಲ್ಲಿ ನಗರಸಭೆ ಜೆಡಿಎಸ್ ಸದಸ್ಯರಾದ ಗಿರೀಶ್ ಚನ್ನವೀರಪ್ಪ, ಸಿ. ಕ್ರಾಂತಿ, ಸಿ.ಆರ್. ಶಂಕರ್, ಸಯ್ಯಾದ್ ಅಕ್ಬರ್, ವಾಸುದೇವ್, ಚಂದ್ರೇಗೌಡ, ಜೆ. ಮಂಜುನಾಥ್, ನವೀನ್, ರಫೀಕ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಅಕ್ಮಲ್ ಇತರರು ಉಪಸ್ಥಿತರಿದ್ದರು.