ತುಮಕೂರು: ಜಿಲ್ಲೆಯಲ್ಲಿ ನಡೆದ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಅಂತ ಖಂಡಿಸಿ ಇಂದು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.
ತುಮಕೂರು ತಾಲೂಕಿನ ಛೋಟಾ ಸಾಬರ ಪಾಳ್ಯದಲ್ಲಿ ದನಮೇಯಿಸಲು ಹೋಗಿದ್ದ ಮಹಿಳೆ ಮೇಲೆಯ ಅತ್ಯಾಚಾರ ಕೊಲೆ ಪ್ರಕರಣ ಮತ್ತೆ ಸದ್ದು ಮಾಡಿದೆ. ಈ ಪ್ರಕರಣ ನಡೆದು ಒಂದು ವಾರವೇ ಕಳೆದ್ರೂ ಅತ್ಯಾಚಾರಿಗಳ ಸುಳಿವೇ ಸಿಕ್ಕಿಲ್ಲ. ಹೀಗಾಗಿ ಇವತ್ತು ತಿಗಳ ಜನಾಂಗ ಹಾಗೂ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿದ್ರು. ಅಲ್ಲದೆ ಈ ಪ್ರಕರಣವನ್ನ ಪೊಲೀಸರು ಅದ್ಯಾಕೋ ಗಂಭೀರವಾಗಿ ಪರಿಗಣಿಸಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.
ಮೈಸೂರಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನ ಈಗಾಗಲೇ ಅಲ್ಲಿನ ಪೊಲೀಸರು ಭೇದಿಸಿದ್ದಾರೆ. ಆದ್ರೆ ಅದೇ ದಿನ ತುಮಕೂರಿನಲ್ಲಿ ಈ ಪ್ರಕರಣದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಇನ್ನು ಪ್ರತಿಭಟನೆಗೆ ಶಾಸಕ ಜ್ಯೋತಿ ಗಣೇಶ್ ಸಾಥ್ ನೀಡಿ ಪೊಲೀಸರ ವೈಫಲ್ಯವನ್ನು ಖಂಡಿಸಿದ್ರು.
ಕಳೆದ ಮಂಗಳವಾರ ಭೀಕರ ರೀತಿಯಲ್ಲಿ 35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿತ್ತು. ಅಲ್ಲದೆ ಆಕೆಯ ಕತ್ತಿನಲ್ಲಿದ್ದ ಮಾಂಗಲ್ಯಸರವನ್ನೂ ಆರೋಪಿಗಳ ದೋಚಿದ್ದರು.
ದರ್ಶನ್ ಕೆ.ಡಿ. ಆರ್, ಕರ್ನಾಟಕ ಟಿವಿ, ತುಮಕೂರು