Thursday, November 14, 2024

Latest Posts

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡಪರ ಸಂಘಟನೆಗಳಿoದ ಪ್ರತಿಭಟನೆ..!

- Advertisement -

www.karnatakatv.net:ಬೆಳಗಾವಿಯಲ್ಲಾದ ಘಟನೆಗಳ ಕುರಿತು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ ಕನ್ನಡಪರ ಸಂಘಟನೆಗಳು, ಇದಕ್ಕೆ ಅನೇಕ ಸಂಘ ಸಂಸ್ಥೆಗಳು ಬೆಂಬಲ ಕೋರಿವೆ ಮತ್ತು ಪರ ವಿರೋದದ ಚರ್ಚೆಗಳು ಕೇಳಿ ಬರುತ್ತಿವೆ. 31ಕ್ಕೆ ಆಗುತ್ತಿರುವ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿoದ ನೈತಿಕವಾಗಿ ಬೆಂಬಲವನ್ನು ಕೊಟ್ಟಿದೆ. ಡಿಸೆಂಬರ್ 31 ವರ್ಷದ ಕೊನೇಯದಿನ ಅಂದು ವ್ಯಾಪಾರ-ವಹಿವಾಟುಗಳು ನಡೆಯುವದಿನವಾಗಿದ್ದು ಅಂದೇ ಕನ್ನಡದ ಅನೇಕ ಚಿತ್ರಗಳು ತೆರೆಕಾಣಲು ತುದಿಗಾಲಿನಲ್ಲಿ ನಿಂತಿವೆ ಆಗಾಗಿ ವಾಣೀಜ್ಯ ಮಂಡಳಿಯ ಪರವಾಗಿ ನೈತಿಕವಾದ ಬೆಂಬಲವನ್ನು ಕೊಟ್ಟಿದೆ, ಆದರೆ ಎಂದಿನoತೆ ಸಿನಿಮಾ ಮತ್ತು ಚಿತ್ರೀಕರಣದ ಕೆಲಗಳು ನಡೆಯಲಿವೆ, ಕನ್ನಡಕ್ಕೆ ಖುತ್ತುತರುವಂತ ಕೆಲಸಗಳು ಆದರೆ ಯಾವುದೇ ಕಾರಣಕ್ಕು ಸುಮ್ಮನಿರುವುದಿಲ್ಲಾ ಸದಾ ಕನ್ನಡದ ಪರ ವಾಣಿಜ್ಯ ಮಂಡಳಿ ಇರುತ್ತದೆ ಎನ್ನುವ ವಿಚಾರವನ್ನು ತಿಳಿಸಿತ್ತು. ಡಿ೩೧ಕ್ಕೆ ಬಂದ್ ಮಾಡುವುದರಿಂದ ವ್ಯಾಪಾರ ಮತ್ತು ಅಂದೇ ತೆರೆಕಾಣಲಿರುವ ಸಿನಿಮಾಗಳಿಗೆ ತೊಂದರೆಯಾಗುವ ದೃಷ್ಟಿಯಿಂದ ನೈತಿಕ ಬೆಂಬಲ ಕೊಡುತ್ತಿದ್ದೇವೆ ಎನ್ನುವ ವಿಷಯವನ್ನು ತಿಳಿಸಿತ್ತು.

ಇನ್ನೂ ಈ ವಿಚಾರದ ಕುರಿತು ಕೊಂಚ ಬೇಸರಗೊಂಡ ಕನ್ನಡಪರ ಸಂಘಡನೆಗಳು, ವಾಟಾಳ್ ನಾಗರಾಜ್ ಮತ್ತು ಸಾ,ರಾ,ಗೋವಿಂದ್ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದರು. ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಿರುಧ್ಧ ಪ್ರತಿಭಟನೆ ನಡೆಸಿದರು. ವಾಣಿಜ್ಯ ಮಂಡಳಿ ಸೂಚಿಸಿರುವ ನೈತಿಕ ಬೆಂಬಲವನ್ನು ಪ್ರಶ್ನಿಸಿ ಮತ್ತು ಡಿ.31ಕ್ಕೆ ಮಾಡುತ್ತಿರುವ ಹೋರಾಟಕ್ಕೆ ರಸ್ತೆಗಿಳಿದು ಬೆಂಬಲ ಕೊಡುವಂತೆ ಪ್ರತಿಭಟನೆ ನಡೆಸಿದ್ದಾರೆ.

ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಸಮದಾನ ವ್ಯಕ್ತ ಪಡಿಸಿದ್ದು ಡಿ.31 ಬಿಟ್ಟು ಬೆರೇದಿನವಾಗಿದ್ದರೆ ಸರಿ ಆದರೆ ಅಂದೇ ಅನೇಕ ಸಿನಿಮಾಗಳು ತೆರೆಕಾಣುತಿದ್ದು, ಅಂದು ಬಂದ್ ಆದರೇ ಅನೇಕ ಸಿನಿಮಾಗಳಿಗೆ ತೊಂದರೆಯಾಗುತ್ತದೆ ವ್ಯವಹಾರದ ವಿಷಯದಲ್ಲಿ ನಿರ್ಮಾಪಕರಿಗೆ ಬಹಳ ತೊಂದರೆಯಾಗುತ್ತದೆ, ಡಿ.31 ಶುಕ್ರವಾರ ಮತ್ತು ಜನವರಿ 1&2 ವಾರಾಂತ್ಯವಾಗಿದ್ದು ಅದನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಸಿನಿಮಾ ತೆರೆಗೆ ತರಲು ಎಲ್ಲಾರೀತಿಯಾ ತಯಾರಿಗಳನ್ನು ಈಗಾಗಲೇ ನಿರ್ಮಾಪಕರುಗಳು ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ಹೊರಹಾಕಿದೆ.

- Advertisement -

Latest Posts

Don't Miss