- Advertisement -
ಕನ್ನಡದ ಪವರ್ ಸ್ಟಾರ್ ಎಂದೇ ಖ್ಯಾತಿಯಾಗಿದ್ದ ಪುನೀತ್ ರಾಜ್‌ಕುಮಾರ್ ನಟನೆಯ ಜೊತೆಗೆ ಗಾಯನದಲ್ಲೂ ಸಹ ಮೋಡಿಯನ್ನು ಮಾಡಿದ್ದರು,
ಆದರೆ ಅವರು ಇಲ್ಲದಿರುವುದು ಬೇಸರ, ಅವರಿಲ್ಲದಿದ್ದರೂ ಅವರ ಸಾಧನೆ ಅಪಾರ ಅವುಗಳು ಇನ್ನು ಜೀವಂತವಾಗಿ ಉಳಿದಿವೆ.
ಸದ್ಯ ಪುನೀತ್ ರಾಜ್‌ಕುಮಾರ್ ಹಾಡಿದ್ದ ಕೊನೆ ಹಾಡು ಈಗ ರಿಲೀಸ್ ಆಗಿದೆ.
ಹರೀಶ ವಯಸ್ಸು 36 ಎಂಬ ಸಿನಿಮಾದ ಟೈಟಲ್ ಸಾಂಗ್ ಅನ್ನು ಹಾಡಿದ್ದುç ಅದೀಗ ರಿಲೀಸ್ ಆಗಿದೆ. ಈ ಹಾಡು ಪ್ರತಿಯೊಬ್ಬ ಪ್ರೇಕ್ಷಕನಿಗೂ ಇಷ್ಟಾಗಿರುವ ಹಾಡಾಗಿದೆ. ಇದು ಪುನೀತ್ ಅವರ ಕೊನೆಯ ಸಾಂಗ್ ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪ್ರತಿಭೆಗಳೂ ಸೇರಿ ನಿರ್ಮಾಣ ಮಾಡಿರುವ ಚಿತ್ರ ಹರೀಶ ವಯಸ್ಸು 26 ಚಿತ್ರವಾಗಿದೆ. ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಗುರುರಾಜ್ ಜ್ಯೇಷ್ಠ ಅವರು ಕಥೆಬರೆದು ಮೊದಲ ಬಾರಿ ನಿರ್ದೇಶನವನ್ನು ಮಾಡಿದ್ದಾರೆ. ಇದು ಹಾಸ್ಯಪ್ರಧಾನ ಕಥೆಹಂದರ ಸಿನಿಮಾವಾಗಿದೆ.
- Advertisement -