ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ (Aam Aadmi Party Government) ಅಧಿಕಾರಕ್ಕೆ ಬಂದಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ (Punjab CM Bhagwant Man) ಸಂಪುಟಕ್ಕೆ ಇಂದು 10 ಸಚಿವರು ಸೇರ್ಪಡೆಯಾಗಿದ್ದಾರೆ. ಶಾಸಕರು ಚಂಡೀಗಢದ ರಾಜಭವನದಲ್ಲಿ (Municipal Court of Chandigarh) ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ (Governor Bhanwarilal Purohit) ಅವರು 10 ಮಂದಿಗೆ ಪ್ರಮಾಣ ವಚನ ಬೋಧಿಸಿದರು. ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಡಾ. ದಲ್ಜಿತ್ ಕೌರ್ (Dr. Daljit Kaur), ಹರ್ಪಾಲ್ ಸಿಂಗ್ ಚೀಮಾ, ಹರ್ಭಜನ್ ಸಿಂಗ್, ಡಾ. ವಿಜಯ್ ಸಿಂಗ್ಲಾ, ಗುರ್ಮೀತ್ ಸಿಂಗ್, ಬ್ರಾಮ್ ಶಂಕರ್ ಕಟಾರುಚಕ್, ಹರ್ಜೋತ್ ಸಿಂಗ್ ಬೈನ್ಸ್, ಲಾಲ್ಜಿತ್ ಸಿಂಗ್ ಭುಲ್ಲರ್ ಮತ್ತು ಕುಲದೀಪ್ ಸಿಂಗ್ ಧಲಿವಾಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಬ್ಬರು ರೈತರು (Farmers) , ಮೂವರು ವಕೀಲರು (Lawyers) , ಇಬ್ಬರು ವೈದ್ಯರು (Doctors), ಸಮಾಜ ಸೇವಕ, ಎಂಜಿನಿಯರ್ (Engineer) ಮತ್ತು ಉದ್ಯಮಿಯಾಗಿರುವ ಶಾಸಕರಿಗೆ ಸಂಪುಟದಲ್ಲಿ ಆದ್ಯತೆ ನೀಡಲಿದೆ ಎಂದು ಆಪ್ ಈಗಾಗಲೇ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ಕ್ಯಾಬಿನೆಟ್ ಮಂತ್ರಿಗಳಾಗಿ ಆಯ್ಕೆಯಾಗಿರುವ ಶಾಸಕರು ಪಂಜಾಬ್ ನ ವಿವಿಧ ಭಾಗಗಳನ್ನು ಪ್ರತಿನಿಧಿಸುತ್ತಿದ್ದಾರೆ. ಹತ್ತರಲ್ಲಿ ಐವರು ಮಾಲ್ವಾದಿಂದ, ನಾಲ್ವರು ಮಜಾದಿಂದ ಮತ್ತು ಒಬ್ಬರು ದೋಬಾ ಪ್ರದೇಶದ ಶಾಸಕರಾಗಿದ್ದಾರೆ. ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸಂಪುಟದಲ್ಲಿ ಹತ್ತು ಆಮ್ ಆದ್ಮಿ ಪಕ್ಷದ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಾಮಾಣಿಕ ಆಡಳಿತ ನೀಡಲು ಶ್ರಮಿಸುವಂತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ಅಭಿನಂದಿಸಿದ್ದಾರೆ. ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದದೆ. ಮೊನ್ನೆ ಭಗವಂತ್ ಮಾನ್ ಅವರು ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪಂಜಾಬ್ ಸರ್ಕಾರದ ಒಟ್ಟು 17 ಕ್ಯಾಬಿನೆಟ್ ಹುದ್ದೆಗಳಲ್ಲಿ 10 ಸಚಿವ ಸ್ಥಾನಗಳನ್ನು ತುಂಬಲಾಗಿದೆ. ಇನ್ನುಳಿದ ಏಳು ಹುದ್ದೆಗಳು ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಸಿಎಂ ಮಾನ್ ಪುತ್ರಿ ಶೀರತ್ ಕೌರ್ ಮತ್ತು ಪುತ್ರ ದಿಲ್ಶನ್ ಮಾನ್ ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಆಮ್ ಆದ್ಮಿ ಪಕ್ಷ ನಾಯಕರು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ತಿಳಿಸಿದರು.