- Advertisement -
ಮಂಡ್ಯ : ಪ್ರಧಾನಿ ಮೋದಿ ಅವರಿಗೆ ಪಂಜಾಬ್ ಸರ್ಕಾರ ಭದ್ರತೆ ಕೊಡುವಲ್ಲಿ ವಿಫಲವಾಗಿದೆ, ಇಂದಿನ ಭದ್ರತಾ ಲೋಕಕ್ಕೆ ಪಂಜಾಬ್ ಸರ್ಕಾರವೇ ಕಾರಣ. ಪ್ರಧಾನಿ ಮೋದಿ ಅವರು ಮುಕ್ತವಾಗಿ ಓಡಾಡಲು ಅವಕಾಶ ನೀಡಿಲ್ಲ, ಪ್ರಧಾನಿ ಮೋದಿ ಅವರಿಗೆ ಗೌರವ ಕೊಡುವುದು ಎಲ್ಲಾ ಸರ್ಕಾರಗಳ ಕರ್ತವ್ಯ ಆದರೆ ಪಂಜಾಬ್ ಸರ್ಕಾರ ಅವರಿಗೆ ಅವಮಾನ ಮಾಡಿದೆ ಹಾಗೂ ಭದ್ರತೆ ಕೊಡುವಲ್ಲಿ ಪಂಜಾಬ್ ಸರ್ಕಾರ ವಿಫಲವಾಗಿದೆ. ಈ ಕೂಡಲೇ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಹಾಗೂ ಭದ್ರತಾ ಲೋಪಕ್ಕೆ ಕಾರಣವೇನು ಎಂಬುದರ ಬಗ್ಗೆ ಉನ್ನತ ತನಿಖೆಯಾಗಬೇಕು , ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಸಿ ಎಂ ಬೊಮ್ಮಾಯಿ ಮಾಧ್ಯಮಗಳೊಂದಿಗೆ ಹೇಳಿಕೆ ನೀಡಿದ್ದಾರೆ.
- Advertisement -

