Sunday, September 8, 2024

Latest Posts

ಬಿಜೆಪಿಗೆ ಮತ್ತೆ ಮಗ್ಗುಲ ಮುಳ್ಳಾದ ಪುತ್ತಿಲ ಪರಿವಾರ, ಲೋಕಸಭೆಗೆ ಪಕ್ಷೇತರವಾಗಿ ಸ್ಪರ್ಧಿಸಲು ಪ್ಲಾನ್ ರೆಡಿ!

- Advertisement -

Political News: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ ಅಂತಾನೇ ಹೇಳಲಾಗ್ತಿದೆ. ಇದಕ್ಕೆ ಕಾರಣ ಸಾಕಷ್ಟು ಇದೆಯಾದರೂ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್‌ ವಂಚಿತಗೊಂಡು ಪಕ್ಷೇತರವಾಗಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲವೇ ಸಾಕ್ಷಿ.

ಬಿಜೆಪಿಯಿಂದ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಆಶಾ ತಿಮ್ಮಪ್ಪ ಗೌಡಗೆ ಟಿಕೆಟ್ ನೀಡಿದ ಪರಿಣಾಮ ಟಿಕೆಟ್ ವಂಚಿತ ಹಿಂದುತ್ವ ಪರ ನಾಯಕ ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹಿಂದುತ್ವದ ಹುಡುಗರೆಲ್ಲರೂ ಪುತ್ತಿಲ ಪರ ನಿಂತಿದ್ದ ಪರಿಣಾಮ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಿ ಹೀನಾಯ ಮುಖಭಂಗಕ್ಕೆ ಒಳಗಾಗಿತ್ತು. ಬಿಜೆಪಿಯ ಮತ ಇಬ್ಭಾಗವಾಗಿದ್ದರಿಂದ ಕಾಂಗ್ರೆಸ್‌ನ ಅಶೋಕ್ ರೈ ಸುಲಭವಾಗಿ ಗೆದ್ದಿದ್ದರು.

ಆ ನಂತರ ಪುತ್ತಿಲ ಪರಿವಾರದ ಕಾರ್ಯಕರ್ತರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅರುಣ್ ಕುಮಾರ್ ಪುತ್ತಿಲಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಒಂದು ವೇಳೆ ಟಿಕೆಟ್ ನೀಡದೇ ಇದ್ದಲ್ಲಿ ಪಕ್ಷೇತರವಾಗಿಯೂ ಸ್ಪರ್ಧಿಸೋದಾಗಿ ಬಿಜೆಪಿಗೆ ಭಯ ಹುಟ್ಟಿಸುತ್ತಿದ್ದಾರೆ. ಇದೆಲ್ಲದರ ಮಧ್ಯೆ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ನೀಡಿರುವ ಒಂದೇ ಒಂದು ಹೇಳಿಕೆ ಇಡೀ ಪುತ್ತಿಲ ಪರಿವಾರವನ್ನು ಕೆರಳಿ ಕೆಂಡವನ್ನಾಗಿಸಿದೆ.

ಹೌದು.. ಇತ್ತೀಚೆಗೆ ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲ್ ಅವರೇ ಅಭ್ಯರ್ಥಿ ಎನ್ನುವ ಹೇಳಿಕೆ ನೀಡಿದ್ದು, ಇದು ಈ ಬಾರಿ ಅಭ್ಯರ್ಥಿ ಬದಲಾವಣೆಯ ನಿರೀಕ್ಷೆಯಲ್ಲಿದ್ದ ಪುತ್ತಿಲ ಪರಿವಾರಕ್ಕೆ ಇನ್ನಿಲ್ಲದ ಸಿಟ್ಟು ತರಿಸಿದೆ. ಹೀಗಾಗಿ ವಿಜಯೇಂದ್ರ ಹೇಳಿಕೆಯಿಂದ ಕೆರಳಿರುವ ಪುತ್ತಿಲ ಪರಿವಾರ ಕಾರ್ಯಕರ್ತರು, ಮತ್ತೆ ಅರುಣ್ ಕುಮಾರ್ ಪುತ್ತಿಲ ಹೆಸರನ್ನು ಪ್ರಸ್ತಾಪ ಮಾಡಿದ್ದು, ಕರಾವಳಿಗೆ ಪುತ್ತಿಲ ಎನ್ನುವ ಅಭಿಯಾನ ಆರಂಭಿಸಿ ಬಿಜೆಪಿಗೆ ಸೆಡ್ಡು ಹೊಡೆಯಲು ಶುರು ಮಾಡಿದ್ದಾರೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಾವಳಿಗೆ ಪುತ್ತಿಲ ಪೋಸ್ಟರ್ ಅನ್ನು ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಹರಿಬಿಡುತ್ತಿದ್ದು, ಇದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಗೆ ಇನ್ನಿಲ್ಲದ ಸಂಕಟ ತಂದೊಡ್ಡಿದೆ. ಮತ್ತೊಂದೆಡೆ ಬಿಜೆಪಿಯ ನೂತನ ರಾಜ್ಯಧ್ಯಕ್ಷರಾಗಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಆಯ್ಕೆಯಾದಾಗ ಪುತ್ತಿಲ ಪರಿವಾರದ ಕಾರ್ಯಕರ್ತರು ಸಂಭ್ರಮಿಸಿದ್ದರು. ಆದರೆ ಮಂಗಳೂರಿನಲ್ಲಿ ಬಂದ ಬಳಿಕ ವಿಜಯೇಂದ್ರ ನೀಡಿರುವ ಹೇಳಿಕೆ ಬಳಿಕ ಮತ್ತೆ ಪುತ್ತಿಲ ಪರಿವಾರ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ

ಲೋಕಸಭೆಗೆ ಪುತ್ತಿಲ ಸ್ಪರ್ಧೆ ಫಿಕ್ಸ್?!

ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಆಯ್ಕೆಯಾದ ನಂತರ ಅವರು ನೀಡಿರುವ ಹೇಳಿಕೆ ಪುತ್ತಿಲ ಪರಿವಾರದಲ್ಲಿ ಟಿಕೆಟ್ ಲಭಿಸುವ ಆಸೆ ಕಮರೊಡೆದಿದ್ದು, ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಅರುಣ್ ಪುತ್ತಿಲ ಅವರನ್ನು ಪಕ್ಷೇತರವಾಗಿ ಸ್ಪರ್ಧಿಸಲು ಈಗಿಂದಲೇ ಪ್ಲಾನ್ ನಡೆಯುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಪುತ್ತೂರು, ವಿಟ್ಲ ಸೇರಿದಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಾದ್ಯಂತ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಪುತ್ತಿಲ ಪರಿವಾರ ಮುಂದಾಗಿದೆ.

ಈಗಾಗಲೇ ವಿಟ್ಲ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಾದ್ಯಂತ ಅರುಣ್ ಕುಮಾರ್ ಪುತ್ತಿಲ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಸತ್ಯನಾರಾಯಣ ಪೂಜೆ, ಶನೀಶ್ವರ ಪೂಜೆ, ಶ್ರೀನಿವಾಸ ಕಲ್ಯಾಣದಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಜಿಲ್ಲಾ ಬಿಜೆಪಿಗೆ ಇನ್ನಿಲ್ಲದ ಭೀತಿಯನ್ನು ತಂದೊಡ್ಡಿದೆ.

‘ಅನ್ನಭಾಗ್ಯ ಅಂತೀರಿ.. ನನಗೆ ರೇಷನ್ ಕಾರ್ಡೇ ಮಾಡಿ ಕೊಡ್ತಿಲ್ಲ.. ಏನ್ ಸ್ವಾಮಿ ಇದು?’

ಡಿಸಿಎಂ ಡಿಕೆಶಿ ಸಿಬಿಐ ತನಿಖೆ ಹಿಂಪಡೆದ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದೇನು..?

‘ಮೋದಿ ವಿರುದ್ಧ ಹೇಳಿಕೆ ನೀಡಿದಷ್ಟು, ಮೋದಿಯವರ ಮೇಲೆ ಜನಾಶೀರ್ವಾದ ಹೆಚ್ಚಾಗುತ್ತೆ’

- Advertisement -

Latest Posts

Don't Miss